ಕರ್ನಾಟಕ ಕ್ರಿಕೆಟ್ ಗೆ ಹೊಸ ಬೆಳಕು – ರಣಜಿ ರಾಜ ವಿನಯ್ ಹೆಡ್ ಕೋಚ್
ಗುರಿ ಮುಟ್ಟಿಸುತ್ತಾ ದಾವಣಗೆರೆ ಎಕ್ಸ್ ಪ್ರೆಸ್?

ಕರ್ನಾಟಕ ಕ್ರಿಕೆಟ್ ಗೆ ಹೊಸ ಬೆಳಕು – ರಣಜಿ ರಾಜ ವಿನಯ್ ಹೆಡ್ ಕೋಚ್ಗುರಿ ಮುಟ್ಟಿಸುತ್ತಾ ದಾವಣಗೆರೆ ಎಕ್ಸ್ ಪ್ರೆಸ್?

ರಣಜಿಯಲ್ಲಿ ರಾಜ, ಐಪಿಎಲ್​ನಲ್ಲಿ ಹೀರೋ, ಟೀಂ ಇಂಡಿಯಾದಲ್ಲೂ ಸ್ಟಾರ್.. ಕಾಲಿಟ್ಟಲ್ಲೆಲ್ಲಾ ಹೆಜ್ಜೆಗುರುತು ಮೂಡಿಸುತ್ತಾ ದಾವಣಗೆರೆ ಎಕ್ಸ್​ಪ್ರೆಸ್ ಅಂತಾನೇ ಇತಿಹಾಸ ಸೃಷ್ಟಿಸಿದವ್ರು ವಿನಯ್ ಕುಮಾರ್. ಇದೀಗ ಕರ್ನಾಟಕ ಪುರುಷರ ಕ್ರಿಕೆಟ್​ ತಂಡದ ಮುಖ್ಯ ಕೋಚ್ ಆಗಿ ಹೊಸ ಇನ್ನಿಂಗ್ಸ್ ಶುರು ಮಾಡ್ತಿದ್ದಾರೆ. ವಿನಯ್ ಕುಮಾರ್ ಕೋಚ್ ಆಗ್ತಿರೋದು ಕರ್ನಾಟಕ ಕ್ರಿಕೆಟ್​​ಗೆ ಹೊಸ ಭರವಸೆ ಮೂಡಿಸಿದೆ.

ಇದನ್ನೂ ಓದಿ : INDO-PAK ಪಂದ್ಯಕ್ಕೆ ಬ್ರೇಕ್ – FINAL ಟಿಕೆಟ್ ಪಡೆದ್ರಷ್ಟೇ ಚಾನ್ಸ್

ಕರ್ನಾಟಕದ ಪರ ದೇಶೀ ಟೂರ್ನಿಗಳಲ್ಲಿ ಕ್ಯಾಪ್ಟನ್ ಆಗಿ ಇತಿಹಾಸ ಸೃಷ್ಟಿಸಿದವರು ವಿನಯ್ ಕುಮಾರ್. ಇದೀಗ ಕೋಚ್ ಆಗಿ ತಂಡವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯೋ ಜವಾಬ್ದಾರಿ ಸಿಕ್ಕಿದೆ. ಈ ಹಿಂದೆ ಕೋಚ್ ಆಗಿದ್ದ ಯರೆ ಗೌಡ ಅವರು ಬಿಸಿಸಿಐನ (BCCI) ‘ಸೆಂಟರ್ ಆಫ್ ಎಕ್ಸಲೆನ್ಸ್’ಗೆ ಬ್ಯಾಟಿಂಗ್ ಕೋಚ್ ಆಗಿ ನಿಯುಕ್ತಿಗೊಂಡಿರುವ ಹಿನ್ನೆಲೆಯಲ್ಲಿ, ಈ ಮಹತ್ವದ ಜವಾಬ್ದಾರಿಯನ್ನು ರಾಜ್ಯದ ಯಶಸ್ವಿ ನಾಯಕನ ವಿನಯ್‌ಗೆ ವಹಿಸಲಾಗಿದೆ. ವಿನಯ್ ಕುಮಾರ್ ಅವರೊಂದಿಗೆ ಕರ್ನಾಟಕದ ಮಾಜಿ ಬ್ಯಾಟರ್ ದೀಪಕ್ ಚೌಗುಲೆ ಅವರನ್ನು ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಯೆರೇಗೌಡ ಅವ್ರ ಸ್ಥಾನಕ್ಕೆ ಸೆಲೆಕ್ಟ್ ಆಗಿರೋ ವಿನಯ್ ಈ ಹಿಂದೆ ತಮ್ಮ ನಾಯಕತ್ವದಲ್ಲಿ ತಂಡಕ್ಕೆ ಹಲವು ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದರು. ಹೀಗಾಗಿ ಮುಂದಿನ ಟೂರ್ನಿಗಳಲ್ಲೂ ಇವ್ರ ಮೇಲೆ ತುಂಬಾನೇ ನಿರೀಕ್ಷೆ ಮೂಡಿದೆ.

ರಣಜಿ ಇತಿಹಾಸದಲ್ಲೇ ಹೈಯೆಸ್ಟ್ ವಿಕೆಟ್ ಪಡೆದಿರುವ ವೇಗಿ!

ದೇಶದ ಪ್ರತಿಷ್ಠಿತ ರಣಜಿ ಟೂರ್ನಿ ಇತಿಹಾಸದಲ್ಲಿ ವೇಗದ ಬೌಲರ್‌ಗಳ ಪೈಕಿ ಅತಿ ಹೆಚ್ಚು (442 ವಿಕೆಟ್) ಪಡೆದಿರುವ ದಾಖಲೆ ವಿನಯ್ ಹೆಸ್ರಲ್ಲೇ ಇದೆ.  2013 ರಿಂದ 2015ರ ಅವಧಿಯಲ್ಲಿ ಕರ್ನಾಟಕ ತಂಡದ ನಾಯಕರಾಗಿ ಸತತ ಎರಡು ಬಾರಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಹಾಗೂ ಇರಾನಿ ಕಪ್‌ಗಳನ್ನು ಗೆದ್ದುಕೊಟ್ಟು ಇತಿಹಾಸ ಸೃಷ್ಟಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಕೇವಲ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಅವರು, ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು 2 ಶತಕ ಹಾಗೂ 17 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಒಟ್ಟಾರೆ ವಿನಯ್ ಕುಮಾರ್ 139 ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ 504 ವಿಕೆಟ್ ಪಡೆದಿದ್ದಾರೆ ಮತ್ತು 3409 ರನ್​ಗಳಿಸಿದ್ದಾರೆ. 181 ಲಿಸ್ಟ್​ ಎ ಪಂದ್ಯಗಳಿಂದ 225 ವಿಕೆಟ್ ಹಾಗೂ 1184 ರನ್​ಗಳಿಸಿದ್ದಾರೆ. ಟಿ20 ಕ್ರಿಕೆಟ್​​ಗಳಲ್ಲಿ 181 ಪಂದ್ಯಗಳನ್ನಾಡಿ, 194 ವಿಕೆಟ್ ಪಡೆದಿದ್ದಾರೆ. ವಿನಯ್ ಕುಮಾರ್ ನಾಯಕತ್ವದಲ್ಲಿ ಕರ್ನಾಟಕ ತಂಡವು ಭಾರತೀಯ ದೇಶೀಯ ಕ್ರಿಕೆಟ್‌ನಲ್ಲಿ ಸುವರ್ಣ ಯುಗವನ್ನು ಕಂಡಿತ್ತು. ಅವರ ನೇತೃತ್ವದಲ್ಲಿ ತಂಡ ಸತತ ಎರಡು ವರ್ಷ ‘ಡಬಲ್ ಟ್ರೆಬಲ್’ (ಒಂದೇ ವರ್ಷದಲ್ಲಿ ಮೂರೂ ಪ್ರಮುಖ ಟ್ರೋಫಿಗಳನ್ನು ಗೆಲ್ಲುವುದು) ಸಾಧನೆ ಮಾಡಿತು. ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಇರಾನಿ ಕಪ್ ಚಾಂಪಿಯನ್ ಯಾಗಿತ್ತು. ಭಾರತದ ಪರವಾಗಿಯೂ ಮೂರೂ ಮಾದರಿಯಲ್ಲೂ ಆಡಿರುವ ವಿನಯ್ ಏಕದಿನ ಕ್ರಿಕೆಟ್‌ನಲ್ಲಿ 31 ಪಂದ್ಯಗಳನ್ನು ಆಡಿ 38 ವಿಕೆಟ್ ಪಡೆದಿದ್ದಾರೆ. 9 ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ 10 ವಿಕೆಟ್ ಕಬಳಿಸಿದ್ದಾರೆ. ಟೆಸ್ಟ್​ನಲ್ಲಿ ಕೇವಲ ಒಂದು ಪಂದ್ಯವನ್ನಾಡಿ 1 ವಿಕೆಟ್ ಪಡೆದಿದ್ದಾರೆ.

ಪ್ರಥಮ ದರ್ಜೆ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ 2021 ರಲ್ಲಿ ನಿವೃತ್ತಿ ಘೋಷಿಸಿದ್ದ ವಿನಯ್ ಕುಮಾರ್ ಇದೀಗ ಕರ್ನಾಟಕ ರಾಜ್ಯ ಹಿರಿಯ ತಂಡದ ಮುಖ್ಯ ಕೋಚ್ ಆಗಿದ್ದಾರೆ. ಹಿಗಾಗಿ ಕರ್ನಾಟಕ ತಂಡಕ್ಕೆ ಮುಂದಿನ ದಿನಗಳಲ್ಲಿ ಹೊಸ ದಿಕ್ಕು ತೋರಿಸೋ ನಿರೀಕ್ಷೆಗಳು ಮೂಡಿವೆ.

Shantha Kumari

Leave a Reply

Your email address will not be published. Required fields are marked *