ಉತ್ತರಾಖಂಡದಲ್ಲಿ ಸುರಂಗದೊಳಗೆ ನುಗ್ಗಿದ ನೀರು –   7 ಜನ ಸಾ*ವು, 18 ಕಾರ್ಮಿಕರ ರಕ್ಷಣೆ

ಉತ್ತರಾಖಂಡದಲ್ಲಿ ಸುರಂಗದೊಳಗೆ ನುಗ್ಗಿದ ನೀರು –   7 ಜನ ಸಾ*ವು, 18 ಕಾರ್ಮಿಕರ ರಕ್ಷಣೆ

ಸುರಂಗದೊಳಗೆ ನೀರು ನುಗ್ಗಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದ  ಚಮೋಲಿಯಲ್ಲಿ ಗುರುವಾರ ಸಂಜೆ ನಡೆದಿದೆ. ಜಲವಿದ್ಯುತ್ ಯೋಜನೆಗಾಗಿ  ನಿರ್ಮಾಣ ಹಂತದಲ್ಲಿರುವ ಸುರಂಗದೊಳಗೆ ಸಂಜೆ 6.30 ರ ಸುಮಾರಿಗೆ ಭಾರಿ ಪ್ರಮಾಣದ ಅವಶೇಷಗಳೊಂದಿಗೆ ನೀರು ನುಗ್ಗಿದೆ. ಇದರಲ್ಲಿ 7 ಜನ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದು, 18 ಕಾರ್ಮಿಕರನ್ನು ರಕ್ಷಿಸಲಾಗಿದೆ. ಇನ್ನು ಮೂವರು ಒಳಗೆ ಸಿಲುಕಿಕೊಂಡಿದ್ದು, ಅವರ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: PSI ಮೇಲೆ ಶಾಸಕ ಸುರೇಶ್​ ಗೌಡ ಮಗಳಿಂದ ಹಲ್ಲೆ -ಘಟನೆ ನಡೆದು 24 ಗಂಟೆ ಕಳೆದ್ರೂ ಆರೋಪಿಯನ್ನ ಬಂಧಿಸದ ಪೊಲೀಸ್

ಚಮೋಲಿ ಜಿಲ್ಲೆಯಲ್ಲಿ ಗುರುವಾರ ಸಂಜೆ 6.30 ರ ಸುಮಾರಿಗೆ ಸುರಂಗದೊಳಗೆ ನೀರು ಮತ್ತು ಅವಶೇಷಗಳು ನುಗ್ಗಿದೆ. ಏಳು ಮಂದಿ ಸಾವನ್ನಪ್ಪಿದ್ದು, ಮೂವರು ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ. ಅವರನ್ನು ತಲುಪಲು ರಕ್ಷಣಾ ಕಾರ್ಯಕರ್ತರು ಪ್ರಯತ್ನಿಸುತ್ತಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಚಮೋಲಿಯ ಪಿಪಲ್ಕೋಟಿಯಲ್ಲಿರುವ ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC) ನ ಯೋಜನಾ ಸ್ಥಳದಲ್ಲಿ ಸುಮಾರು 28 ಜನರು ಕೆಲಸ ಮಾಡುತ್ತಿದ್ದರು. ಆಗ ಹಠಾತ್ ನೀರು ಸುರಂಗದೊಳಗೆ ನುಗ್ಗಿದೆ. ಬಲವಾದ ಪ್ರವಾಹ ಉಂಟಾಗಿದ್ದು, ಹಲವರನ್ನು ಸುರಂಗದ ನಿರ್ಗಮನದ ಕಡೆಗೆ ಸೆಳೆದುಕೊಂಡು ಹೋಗಿತ್ತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಸಿಕ್ಕಿಬಿದ್ದ ಕಾರ್ಮಿಕರನ್ನು ಹುಡುಕುವ ಕಾರ್ಯ ನಡೆಸುತ್ತಿದೆ. ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳೊಂದಿಗೆ ಮಾತನಾಡಿದ್ದೇನೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಜಾರ್ಖಂಡ್ ಮತ್ತು ಛತ್ತೀಸ್‌ಗಢದ ನಿವಾಸಿಗಳಾಗಿರುವ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕರೊಂದಿಗೆ ಮಾತುಕತೆ ನಡೆಸಿರುವುದಾಗಿ ಅವರು ಹೇಳಿದರು.

Kishor KV

Leave a Reply

Your email address will not be published. Required fields are marked *