PSI ಮೇಲೆ ಶಾಸಕ ಸುರೇಶ್​ ಗೌಡ ಮಗಳಿಂದ ಹಲ್ಲೆ -ಘಟನೆ ನಡೆದು 24 ಗಂಟೆ ಕಳೆದ್ರೂ ಆರೋಪಿಯನ್ನ ಬಂಧಿಸದ ಪೊಲೀಸ್

PSI ಮೇಲೆ ಶಾಸಕ ಸುರೇಶ್​ ಗೌಡ ಮಗಳಿಂದ ಹಲ್ಲೆ -ಘಟನೆ ನಡೆದು 24 ಗಂಟೆ ಕಳೆದ್ರೂ ಆರೋಪಿಯನ್ನ ಬಂಧಿಸದ ಪೊಲೀಸ್

ಮಂಡ್ಯದ ಶ್ರೀರಂಗಪಟ್ಟಣದ ಆರತಿ ಉಕ್ಕಡ ದೇಗುಲದಲ್ಲಿ ಶಾಸಕ ಸುರೇಶ್​ ಗೌಡ ಹಾಗೂ ಜಿಲ್ಲಾ DySP ಪತ್ನಿ ಐಶ್ವರ್ಯಾ ಅವರು ಮಹಿಳಾ PSI ಮೇಲೆ ದರ್ಪ ತೋರಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ದೇವಸ್ಥಾನದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ ಮಹಿಳಾ PSI ಮೇಲೆ ಶಾಸಕರ ಪುತ್ರಿ ಐಶ್ವರ್ಯಾ  ಹಲ್ಲೆ ನಡೆಸಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಮಂಡ್ಯ DySP ಪತ್ನಿ ವಿರುದ್ಧವೇ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: GBA ಹೊಸ ಪಾರ್ಕಿಂಗ್ ನೀತಿ ಜಾರಿ – ಯಾವ ರಸ್ತೆಗೆ ಎಷ್ಟು ಪಾರ್ಕಿಂಗ್ ಶುಲ್ಕ ಗೊತ್ತಾ?

ಭೀಮನ ಅಮಾವಾಸ್ಯೆ ಹಿನ್ನೆಲೆ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್‌ ಗೌಡ ಅವರ ಪುತ್ರಿ ಹಾಗೂ ಮಂಡ್ಯ DySP ಗೌತಮ್​ ಅವರ ಪತ್ನಿ ಆಗಿರೋ ಐಶ್ವರ್ಯಾ ಅವರು ದೇಗುಲಕ್ಕೆ ಭೇಟಿ ನೀಡಿದ್ರು. ದರ್ಶನಕ್ಕೆ ಅವಕಾಶ ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆ ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿ ಮೇಲೆಯೇ ಐಶ್ವರ್ಯಾ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಆ.12ರ ರಾತ್ರಿ 8.15ರಲ್ಲಿಈ ಘಟನೆ ನಡೆದಿದ್ದು, ದೇಗುಲದ ಗರ್ಭಗುಡಿ ಪ್ರಾಂಗಣದಲ್ಲಿ ಐಶ್ವರ್ಯಾ ಅವರು ಮಹಿಳಾ PSI ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸವಿತಾ ಬಿ. ಎಂಬುವವರ ಮೇಲೆ ಹಲ್ಲೆ ನಡೆದಿದ್ದು, ಇವರು ಮಂಡ್ಯ ಮಹಿಳಾ ಠಾಣೆಯ PSI ಆಗಿದ್ದಾರೆ.

ಹಲ್ಲೆ ಸಂಬಂಧ ಮಹಿಳಾ PSI ಸವಿತಾ ಅವರ ಐಶ್ವರ್ಯಾ ವಿರುದ್ಧ ದೂರು ನೀಡಿದ್ದಾರೆ. ದೂರಿನ ಅನ್ವಯ ಐಶ್ವರ್ಯಾ ವಿರುದ್ಧ FIR ದಾಖಲಾಗಿದೆ. BNS-132, 115(2), 352, 351(2) ಸೆಕ್ಷನ್​ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಭಾವಿ ಮಹಿಳೆಯಾದ ಕಾರಣ ಘಟನೆ ನಡೆದು 24 ಗಂಟೆ ಕಳೆದರೂ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ ಆರೋಪ ಕೇಳಿ ಬರ್ತಿದೆ.

Kishor KV

Leave a Reply

Your email address will not be published. Required fields are marked *