ಬಿಸಿ ನೀರಿಗೆ ಇದನ್ನ ಮಿಕ್ಸ್‌ ಮಾಡಿ ಕುಡಿದ್ರೆ ದೇಹದಲ್ಲಾಗುತ್ತೆ ಮ್ಯಾಜಿಕ್!‌

ಬಿಸಿ ನೀರಿಗೆ ಇದನ್ನ ಮಿಕ್ಸ್‌ ಮಾಡಿ ಕುಡಿದ್ರೆ ದೇಹದಲ್ಲಾಗುತ್ತೆ ಮ್ಯಾಜಿಕ್!‌

ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ನಮ್ಮ ಜೀವನಶೈಲಿಯೂ ಉತ್ತಮವಾಗಿರಬೇಕು. ಬೆಳಗ್ಗಿನ ದಿನಚರಿ ಚೆನ್ನಾಗಿ ಇದ್ರೆ ಇಡೀ ದಿನ ಆರೋಗ್ಯದಿಂದ ಇರಬಹುದು. ಕೆಲವರು ಬೆಳಗ್ಗೆ ಎದ್ದ ಕೂಡಲೇ ಒಂದೊಂದು ಅಭ್ಯಾಸವನ್ನು ರೂಢಿ ಮಾಡಿಕೊಂಡಿರುತ್ತಾರೆ. ಕೆಲವರು ಟೀ, ಕಾಫಿ ಕುಡಿದ್ರೆ, ಇನ್ನೂ ಕೆಲವರು ಬಿಸಿನೀರಿಗೆ ನಿಂಬೆ ರಸ ಬೆರೆಸಿ ಕುಡಿಯುತ್ತಾರೆ.

ಇದನ್ನೂ ಓದಿ:ಮಗು ಅಳುತ್ತಿಲ್ವಾ? – ​ನವಜಾತ ಶಿಶು ಅಳದೇ ಇದ್ದರೆ ಏನು ಮಾಡಬೇಕು?

ಹೌದು, ಅನೇಕರು ಬಿಸಿ ನೀರಿಗೆ ನಿಂಬೆ ರಸ, ಜೇನು ತುಪ್ಪ ಬೆರೆಸಿ ಕುಡಿಯುತ್ತಾರೆ. ನಿಂಬೆ ರಸವು ಲಿವರ್‌ನಲ್ಲಿ ಪಿತ್ತರಸವನ್ನ ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ಜೀರ್ಣಕ್ರಿಯೆಗೆ ಅವಶ್ಯಕವಾಗಿದ್ರೆ, ಜೇನುತುಪ್ಪ ಮತ್ತು ಬೆಚ್ಚಗಿನ ನೀರು ಕರುಳನ್ನ ಶುದ್ಧೀಕರಿಸಲು ಮತ್ತು ಮಲಬದ್ಧತೆಯನ್ನ ನಿವಾರಿಸಲು ಸಹಾಯ ಮಾಡುತ್ತದೆ.

ನಿಂಬೆಹಣ್ಣು ವಿಟಮಿನ್ ಸಿ ಯ ಶಕ್ತಿಶಾಲಿ ಕೇಂದ್ರವಾಗಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೇನುತುಪ್ಪದ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ನಿಮ್ಮನ್ನ ಅನಾರೋಗ್ಯದಿಂದ ರಕ್ಷಿಸುತ್ತವೆ.

ಇದು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ, ಇದು ರಕ್ತವನ್ನ ಶುದ್ಧೀಕರಿಸುತ್ತದೆ ಮತ್ತು ಮುಖಕ್ಕೆ ನೈಸರ್ಗಿಕ ಹೊಳಪನ್ನ ತರುತ್ತದೆ. ಕಾಫಿ ಅಥವಾ ಚಹಾಕ್ಕೆ ಹೋಲಿಸಿದರೆ, ಇದು ‘ಕೆಫೀನ್ ಕ್ರ್ಯಾಶ್’ ಇಲ್ಲದೆ ನಿಮಗೆ ತ್ವರಿತ ಉಲ್ಲಾಸ ಮತ್ತು ಶಕ್ತಿಯನ್ನ ನೀಡುತ್ತದೆ. ಪ್ರತಿದಿನವೂ ನೀವು ನಿಂಬೆ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿದ್ರೆ ಹಲವಾರು ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ.
ಈ ಮಿಶ್ರಣವು ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನ ಹೆಚ್ಚಿಸುತ್ತದೆ. ಇದರಲ್ಲಿರುವ ಪೆಕ್ಟಿನ್ ಫೈಬರ್ ಹಸಿವು ನಿಗ್ರಹಿಸಲು ಸಹಾಯ ಮಾಡುತ್ತದೆ, ಅನಗತ್ಯ ಕ್ಯಾಲೊರಿಗಳನ್ನ ಸೇವಿಸುವುದನ್ನ ತಡೆಯುತ್ತದೆ.

Shwetha M

Leave a Reply

Your email address will not be published. Required fields are marked *