GBA ಹೊಸ ಪಾರ್ಕಿಂಗ್ ನೀತಿ ಜಾರಿ – ಯಾವ ರಸ್ತೆಗೆ ಎಷ್ಟು ಪಾರ್ಕಿಂಗ್ ಶುಲ್ಕ ಗೊತ್ತಾ?

GBA ಹೊಸ ಪಾರ್ಕಿಂಗ್ ನೀತಿ ಜಾರಿ – ಯಾವ ರಸ್ತೆಗೆ ಎಷ್ಟು ಪಾರ್ಕಿಂಗ್ ಶುಲ್ಕ ಗೊತ್ತಾ?

ನಗರದ ವಾಹನ ಸವಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ  ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರ್ತಿದೆ. ಫ್ರೀಯಾಗಿ ರಸ್ತೆಗಳಲ್ಲಿ ಪಾರ್ಕಿಂಗ್‌ ಮಾಡ್ತಿದ್ದ ವ್ಯವಸ್ಥೆಗೆ ಬ್ರೇಕ್‌ ಹಾಕಲು ಹೊಸ ಪಾರ್ಕಿಂಗ್ ನೀತಿಗೆ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟ ಜಿಬಿಎ ಕೊನೆಗೂ ಪಾರ್ಕಿಂಗ್ ಶುಲ್ಕ ನಿಗದಿ ಮಾಡಿದೆ.

ಹೊಸ ನಿಯಮಾವಳಿಗಳ ಪ್ರಕಾರ ನಗರದ ರಸ್ತೆಗಳನ್ನು A, B, ಹಾಗೂ C ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಜೊತೆಗೆ ‘ಆನ್-ಸ್ಟ್ರೀಟ್’ (ರಸ್ತೆ ಬದಿ), ‘ಆಫ್-ಸ್ಟ್ರೀಟ್’ (ನಿಗದಿತ ಪಾರ್ಕಿಂಗ್ ತಾಣ) ಮತ್ತು ‘ಮಾಸಿಕ ಪಾಸ್’ ಎಂಬ ಮೂರು ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ.

ಆನ್-ಸ್ಟ್ರೀಟ್ ಪಾರ್ಕಿಂಗ್ ದರ (ಪ್ರತಿ ಗಂಟೆಗೆ):

  • A ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ 40, ಲಘು ವಾಹನಗಳಿಗೆ (ಕಾರ್ ಇತ್ಯಾದಿ) 80 ರೂಪಾಯಿ.
  • B ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ 30, ಲಘು ವಾಹನಗಳಿಗೆ 60 ರೂ.
  • C ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ 20, ಲಘು ವಾಹನಗಳಿಗೆ 40 ರಿಂದ 60 ರೂ.

ಆಫ್-ಸ್ಟ್ರೀಟ್ ಪಾರ್ಕಿಂಗ್ ದರ (ಪ್ರತಿ ಗಂಟೆಗೆ):

  • A ವರ್ಗ: ದ್ವಿಚಕ್ರ ವಾಹನ – ₹20 | ಲಘು ವಾಹನ – 40 ರೂ.
  • B ವರ್ಗ: ದ್ವಿಚಕ್ರ ವಾಹನ – ₹15 | ಲಘು ವಾಹನ – 30 ರೂ.
  • C ವರ್ಗ: ದ್ವಿಚಕ್ರ ವಾಹನ – ₹10 | ಲಘು ವಾಹನ – 20 ರೂ.

ಮಾಸಿಕ ಆಫ್-ಸ್ಟ್ರೀಟ್ ಪಾಸ್ ದರಗಳು:

  • A ವರ್ಗ: ದ್ವಿಚಕ್ರ ವಾಹನಕ್ಕೆ ₹2,000 ಹಾಗೂ ಲಘು ವಾಹನಗಳಿಗೆ 40,000.
  • B ವರ್ಗ: ದ್ವಿಚಕ್ರ ವಾಹನಕ್ಕೆ ₹1,500 ಹಾಗೂ ಲಘು ವಾಹನಗಳಿಗೆ3,000.
  • C ವರ್ಗ: ದ್ವಿಚಕ್ರ ವಾಹನಕ್ಕೆ ₹1,000 ಹಾಗೂ ಲಘು ವಾಹನಗಳಿಗೆ 2,000.

Kishor KV