KL ಓಪನರ್.. ನಂ.3ನಲ್ಲಿ ಪಡಿಕ್ಕಲ್ – ಬೌಲಿಂಗ್ ಯುನಿಟ್ ವೀಕ್ ಆಗುತ್ತಾ?
ಲಂಕಾ ಬೇಟೆಗೆ ಕನ್ನಡಿಗರ ದಂಡು

KL ಓಪನರ್.. ನಂ.3ನಲ್ಲಿ ಪಡಿಕ್ಕಲ್ – ಬೌಲಿಂಗ್ ಯುನಿಟ್ ವೀಕ್ ಆಗುತ್ತಾ?ಲಂಕಾ ಬೇಟೆಗೆ ಕನ್ನಡಿಗರ ದಂಡು

ಬಿಗ್ ಪ್ಲೇಯರ್​ಗಳ ಇಂಜುರಿ.. ಸತತ ಸೋಲಿನ ಪ್ರೆಶರ್.. ಡಬ್ಲ್ಯೂಟಿಸಿ ಫೈನಲ್ ಟೆನ್ಷನ್.. ಹೀಗೆ ಸಾಲು ಸಾಲು ಸವಾಲುಗಳ ನಡುವೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಿದ್ಧವಾಗಿದೆ. ಶನಿವಾರದಿಂದ ಅಂದ್ರೆ ಆಗಸ್ಟ್ 15 ರಿಂದ ಸರಣಿ ಆರಂಭವಾಗಲಿದ್ದು, 19 ರವರೆಗೆ ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಶುಭ್​ಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಫಸ್ಟ್ ಟೈಂ ಲಂಕಾ ಫೇಸ್ ಮಾಡ್ತಿರೋ ಭಾರತಕ್ಕೆ ಪ್ಲೇಯಿಂಗ್ 11 ಟೆನ್ಷನ್ ಕೂಡ ಇದೆ.

ಇದನ್ನೂ ಓದಿ : ಗುಜರಾತ್ ಗೂಡಿಗೆ ಪಾಂಡ್ಯ ವಾಪಸ್? – GT ಕ್ಯಾಪ್ಟನ್ಸಿ ಮತ್ತೆ ಕೈ ಸೇರುತ್ತಾ?

ಲಂಕಾ ವಿರುದ್ಧದ ಬೇಟೆಗೆ ಅನೌನ್ಸ್ ಆಗಿದ್ದ ತಂಡದಲ್ಲಿ ಆ ನಂತ್ರದಲ್ಲಿ ಕೆಲ ಬದಲಾವಣೆಗಳನ್ನ ಮಾಡಲಾಗಿತ್ತು. ಗಾಯದ ಕಾರಣದಿಂದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಮತ್ತು ಬ್ಯಾಟರ್ ಸಾಯಿ ಸುದರ್ಶನ್ ಸರಣಿಯಿಂದ ಹೊರಗುಳಿದಿದ್ದಾರೆ. ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ತಂಡವನ್ನು ಸೇರಿಕೊಂಡಿದ್ದಾರೆ. ಹಾಗೂ ಈ ಸಿರೀಸ್​ನಲ್ಲಿ ಭಾರತದ ಪರ ಸಾಕಷ್ಟು ಯಂಗ್ ಸ್ಟರ್ಸ್ ಕೂಡ ಅವಕಾಶ ಪಡ್ಕೊಂಡಿದ್ದು ಡೆಬ್ಯೂ ನಿರೀಕ್ಷೆಯಲ್ಲಿದ್ದಾರೆ. ಬಟ್ ಈ ಪಂದ್ಯಕ್ಕೆ ಭಾರತಕ್ಕೆ ಸ್ಪಿನ್ ಬೌಲರ್​ಗಳಿಗೆ ಹೆಚ್ಚಿನ ಪ್ರಿಯಾರಿಟಿ ನೀಡ್ಬೋದು. ಯಾಕಂದ್ರೆ ಪಂದ್ಯ ನಡೆಯಲಿರೋ ಗಾಲೆ ಮೈದಾನ ಸ್ಪಿನ್ನರ್​ಗಳ ಸ್ವರ್ಗವಾಗಿದೆ.

ಗಾಲೆಯಲ್ಲಿ ಟಾಸ್ ಗೆದ್ದವರದ್ದೇ ಫಸ್ಟ್ ಬ್ಯಾಟಿಂಗ್!

ಶ್ರೀಲಂಕಾದ ಗಾಲೆ ಮೈದಾನ ಸ್ಪಿನ್ ಫ್ರೆಂಡ್ಲಿಯಾಗಿದ್ದು ಟೆಸ್ಟ್ ಪಂದ್ಯಗಳ ವೇಳೆ 3ನೇ ದಿನದಾಟದ ವೇಳೆಗೆ ಪಿಚ್‌ನಲ್ಲಿ ಬಿರುಕುಗಳು ಬರುತ್ತೆ. ಇಂಥಾ ಟೈಮಲ್ಲಿ ಸ್ಪಿನ್ನರ್‌ಗಳು ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಹಾಗೇ ಪಂದ್ಯದ ಮೊದಲ ಮತ್ತು 2ನೇ ದಿನಗಳು ಬ್ಯಾಟಿಂಗ್‌ಗೆ ತುಂಬಾ ಸಪೋರ್ಟಿವ್ ಆಗಿ ಇರುತ್ತೆ. ಈ ಪಿಚ್‌ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 340 ರನ್. ಇದೇ ಕಾರಣಕ್ಕೆ ಇಲ್ಲಿ ಟಾಸ್ ಗೆಲ್ಲುವ ತಂಡಗಳು ಮೊದಲು ಬ್ಯಾಟಿಂಗ್ ಮಾಡೋಕೆ ಚೂಸ್ ಮಾಡಿಕೊಳ್ತಾರೆ. ಯಾಕಂದ್ರೆ ದಿನ ಕಳೆದಂತೆ ಈ ಪಿಚ್​ನಲ್ಲಿ ಬ್ಯಾಟಿಂಗ್ ಮಾಡೋದು ತುಂಬಾನೇ ಕಷ್ಟ. ಇನ್ನು ಇದುವರೆಗೆ ಗಾಲೆಯಲ್ಲಿ ಒಟ್ಟಾರೆಯಾಗಿ 49 ಟೆಸ್ಟ್ ಪಂದ್ಯಗಳು ನಡೆದಿವೆ. ಈ ಪೈಕಿ ಫಸ್ಟ್ ಬ್ಯಾಟಿಂಗ್ ಮಾಡಿದ ತಂಡಗಳು 26 ಬಾರಿ ಗೆದ್ದಿದ್ದಾರೆ. ಅದೇ ಬೌಲಿಂಗ್ ಚೂಸ್ ಮಾಡಿಕೊಂಡ ತಂಡಗಳು 16 ಪಂದ್ಯಗಳಲ್ಲಿ ಮಾತ್ರ ವಿನ್ ಆಗಿರುವಂಥದ್ದು. ಇದೇ ಕಾರಣಕ್ಕೆ ಇಲ್ಲಿ ಟಾಸ್ ಗೆದ್ದ ತಂಡಗಳು ಶೇ. 90ಕ್ಕಿಂತ ಹೆಚ್ಚು ಬಾರಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತವೆ. ಗಾಲೆಯಲ್ಲಿ 4ನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಅಲ್ಲ. ಇಲ್ಲಿ ಯಶಸ್ವಿಯಾಗಿ ಚೇಸ್ ಮಾಡಿದ ಅತ್ಯಧಿಕ ಸ್ಕೋರ್ ಅಂದ್ರೆ ಅದು ಕೇವಲ 99 ರನ್ ಮಾತ್ರ. 100ಕ್ಕಿಂತ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟಿದ ತಂಡಗಳು ಬಹುತೇಕ ಸಲ ಸೋಲನ್ನೇ ಕಂಡಿವೆ. ಸೋ ಟಾಸ್ ಗೆದ್ದವ್ರ ಪ್ರಿಯಾರಿಟಿ ಫಸ್ಟ್ ಬ್ಯಾಟಿಂಗೇ ಆಗಿರುತ್ತೆ. ಇತ್ತೀಚೆಗಷ್ಟೇ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಪಿಚ್ ಪರಿಶೀಲನೆ ನಡೆಸಿದ್ದು ಹೀಗಾಗಿ ಪ್ಲೇಯಿಂಗ್ 11 ಕೂಡ ಬಾರೀ ಕುತೂಹಲ ಮೂಡಿಸಿದೆ.

ಲಂಕಾ ಬೇಟೆಗೆ ಭಾರತದ ಪ್ಲೇಯಿಂಗ್ 11

ಯಶಸ್ವಿ ಜೈಸ್ವಾಲ್

ಕೆಎಲ್ ರಾಹುಲ್

ದೇವದತ್ ಪಡಿಕ್ಕಲ್

ಶುಭಮನ್ ಗಿಲ್

ರಿಷಭ್ ಪಂತ್

ರವೀಂದ್ರ ಜಡೇಜಾ

ಸರಾಂಶ್ ಜೈನ್

ಮಾನವ್ ಸುತಾರ್

ಮೊಹಮ್ಮದ್ ಸಿರಾಜ್

ಪ್ರಸಿದ್ಧ್ ಕೃಷ್ಣ

ಕುಲದೀಪ್ ಯಾದವ್

ಸೋ ಇಲ್ಲಿ ಬ್ಯಾಟಿಂಗ್ ಸ್ಕ್ವಾಡ್ ಸ್ಟ್ರಾಂಗ್ ಆಗೇ ಕಾಣ್ತಿದೆ. ಟಾಪ್ 5 ಬ್ಯಾಟಿಂಗ್ ಯುನಿಟ್ ಚೆನ್ನಾಗಿದೆ. ಆದ್ರೆ ಬೌಲಿಂಗ್ ಯುನಿಟ್ ಬಗ್ಗೆ ಸ್ವಲ್ಪ ಟೆನ್ಷನ್ ಇದೆ.  ಬುಮ್ರಾ ಇಲ್ಲ.. ಸಿರಾಜ್ ಲೀಡ್ ಮಾಡ್ಬೇಕಿದೆ. ಹೊಸಬರೇ ಇದ್ದಾರೆ. ಌಂಡ್ ಸ್ಪಿನ್ ಆಲ್​ರೌಂಡರ್​ಗಳಿಗೆ ಹೆಚ್ಚಿನ ಪ್ರಿಯಾರಿಟಿ ನೀಡ್ಬೋದು. ಅದೂ ಅಲ್ದೇ 2026ರ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಪ್ರಸ್ತುತ ಭಾರತ ತಂಡದ ಆಟಗಾರರಲ್ಲಿ ರವೀಂದ್ರ ಜಡೇಜಾ, ಕೆ.ಎಲ್. ರಾಹುಲ್, ಮತ್ತು ಕುಲದೀಪ್ ಯಾದವ್ ಅವರಿಗೆ ಮಾತ್ರ ಈ ಹಿಂದೆ ಶ್ರೀಲಂಕಾ ನೆಲದಲ್ಲಿ ಟೆಸ್ಟ್ ಆಡಿದ ಅನುಭವವಿದೆ. ಌಂಡ್ ಉಳಿದವರೆಲ್ಲರಿಗೂ ಇದು ಲಂಕಾದಲ್ಲಿ ಚೊಚ್ಚಲ ಪಂದ್ಯವಾಗುತ್ತೆ. ಇನ್ನು ಭಾರತ ಶ್ರೀಲಂಕಾ ಟೆಸ್ಟ್ ಫೈಟ್ ಅಂತಾ ಬಂದಾಗ ಶ್ರೀಲಂಕಾ ತಂಡವು ಭಾರತದ ನೆಲದಲ್ಲಿ ಇದುವರೆಗೆ ಆಡಿರುವ 24 ಟೆಸ್ಟ್ ಪಂದ್ಯಗಳಲ್ಲಿ ಒಂದೂ ಪಂದ್ಯವನ್ನು ಗೆದ್ದಿಲ್ಲ. ಆದರೆ, ತನ್ನ ಸ್ವದೇಶಿ ಸರಣಿಗಳಲ್ಲಿ ಭಾರತಕ್ಕೆ ಪ್ರಬಲ ಪೈಪೋಟಿ ನೀಡುತ್ತಾ ಬಂದಿದೆ. ಶಾಕಿಂಗ್ ವಿಚಾರ ಅಂದ್ರೆ ಗಾಲೆಯಲ್ಲಿ ಭಾರತ ಇದುವರೆಗೆ ಐದು ಟೆಸ್ಟ್ ಪಂದ್ಯಗಳನ್ನ ಆಡಿದೆ. ಈ ಪೈಕಿ ಎರಡು ಸಲ ಗೆದ್ರೆ 3 ಪಂದ್ಯಗಳಲ್ಲಿ ಸೋಲನ್ನ ಕಂಡಿದೆ. ಹೀಗಾಗಿ ಗಾಲೆಯಲ್ಲಿ ಗೆಲ್ಲೋದು ಭಾರತಕ್ಕೆ ಸುಲಭ ಕೂಡ ಇಲ್ಲ. ಹಾಗಂತ ಸಾಧ್ಯವೇ ಇಲ್ಲ ಅಂತಲ್ಲ. ಗಿಲ್ ಕ್ಯಾಪ್ಟನ್ಸಿಯಲ್ಲಿ ಭಾರತ ಟೀಂ ಕೂಡ ಸ್ಟ್ರಾಂಗ್ ಆಗಿದ್ದು, ಡಬ್ಲ್ಯೂಟಿಸಿ ರೇಸ್​ನಲ್ಲಿ ಉಳೀಬೇಕು ಅಂದ್ರೆ ಗೆಲ್ಲಲೇಬೇಕು ಅಷ್ಟೇ.

Shantha Kumari

Leave a Reply

Your email address will not be published. Required fields are marked *