ರೀಲ್ಸ್ ನೋಡಬೇಡ ಅಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮ*ಹತ್ಯೆ – ಮಗಳ ಜೀವಕ್ಕೆ ಕಂಟಕವಾಯ್ತಾ ಮೊಬೈಲ್ ಹು*ಚ್ಚು?

ಈಗಿನ ಯುವ ಜನತೆ, ವಿದ್ಯಾರ್ಥಿಗಳು, ಎಲ್ಲರ ಕೈಯಲ್ಲೂ ಮೊಬೈಲ್ ಇದೆ. ರೀಲ್ಸ್ ನೋಡೋರಿಗಂತೂ ಕಡಿಮೆಯಿಲ್ಲ. ಇದೀಗ ಇದೇ ರೀಲ್ಸ್ ನೋಡುವ ಹುಚ್ಚಿಗೆ ವಿದ್ಯಾರ್ಥಿನಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಅಮ್ಮನ ಬುದ್ದಿವಾದಕ್ಕೆ ಬೇಸತ್ತ ಮಗಳು ಜೀವವನ್ನೇ ಮುಗಿಸಿಕೊಂಡಿದ್ದಾಳೆ.
ಇದನ್ನೂ ಓದಿ:ಜೈಲು ಸೇರಿದ್ರು ಬುದ್ಧಿ ಕಲಿಯದ ಪ್ರಜ್ವಲ್ ರೇವಣ್ಣ – ಕಂಬಿ ಹಿಂದೆ ನೋಡುತ್ತಿದ್ದ ಹಸಿಬಿಸಿ ದೃಶ್ಯ
ಮೊಬೈಲ್‌ನಲ್ಲಿ ಮಗಳು ರೀಲ್ಸ್ ನೋಡುತ್ತಾ ಇರುತ್ತಿದ್ದಳು. ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಅನ್ನೋದು ಮನೆಯವರ ಆತಂಕ. ಹೆತ್ತವರು ಮಗಳಿಗೆ ರೀಲ್ಸ್ ನೋಡಬೇಡ ಎಂದು ಬುದ್ದಿವಾದ ಹೇಳಿದ್ದಾರೆ. ಆದರೆ, ರೀಲ್ಸ್, ಮೊಬೈಲ್ ಬಿಟ್ಟು ಮಗಳಿಗೆ ಇರಲು ಸಾಧ್ಯವಾಗಿರಲಿಲ್ಲ. ಕೊನೆಗೂ ಆಕೆ ತನ್ನ ಜೀವವನ್ನೇ ಬಿಟ್ಟಿದ್ದಾಳೆ. ಇಂಥಾ ಒಂದು ದುರಂತ ಘಟನೆ ನಡೆದಿರುವುದು ಧಾರವಾಡದಲ್ಲಿ. ಇಲ್ಲಿನ ಕೊಟಬಾಗಿ ಗ್ರಾಮದ ನಿವಾಸಿ, 20 ವರ್ಷದ ಮೇಘಾ, ರೀಲ್ಸ್ ನೋಡಬೇಡ ಎಂದು ತಾಯಿ ಬೈದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಧಾರವಾಡದ ಖಾಸಗಿ ಕಾಲೇಜಿನಲ್ಲಿ ಮೇಘಾ ಗೂಬ್ಬನ್ನವರ್ ಡಿಎಡ್ ವ್ಯಾಸಂಗ ಮಾಡುತ್ತಿದ್ದಳು.
ಮೇಘಾ ಅವರ ಪೋಷಕರು ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ಹೊಸ ಮೊಬೈಲ್ ಕೊಡಿಸಿದ್ದರು. ಆದರೆ ಮೇಘಾ ಮೊಬೈಲ್‌ನಲ್ಲಿ ದಿನವಿಡೀ ರೀಲ್ಸ್ ನೋಡುತ್ತಾ ಇರುತ್ತಿರುವುದು ಹೆತ್ತವರ ಗಮನಕ್ಕೆ ಬಂದಿದೆ. ಇದರಿಂದ ಬೇಸತ್ತ ಪೋಷಕರು ಆಕೆಗೆ ಬೈದು ಬುದ್ಧಿವಾದ ಹೇಳಿದ್ದರು. ಈ ಬುದ್ಧಿವಾದದಿಂದ ಮನನೊಂದು ಮೇಘಾ ಜೀವವನ್ನು ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮಗಳನ್ನು ಕಳೆದುಕೊಂಡ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ.
ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ಬಳಕೆಯಿಂದ ಯುವಜನತೆ ಮಾನಸಿಕ ಸ್ಥಿತಿ ಹೇಗೆ ಹಾಳಾಗುತ್ತಿದೆ ಎಂಬುದ್ದಕ್ಕೆ ಈ ವಿದ್ಯಾರ್ಥಿನಿಯ ಪ್ರಕರಣವೇ ಸಾಕ್ಷಿ.

ನೋಡಿರಿ

