ದೇವಾಲಯದಲ್ಲಿ ಎಷ್ಟು ಪ್ರದಕ್ಷಿಣೆ ಹಾಕಬೇಕು? – ಲಾಭವೇನು ಗೊತ್ತಾ?

ದೇವಾಲಯದಲ್ಲಿ ಎಷ್ಟು ಪ್ರದಕ್ಷಿಣೆ ಹಾಕಬೇಕು? – ಲಾಭವೇನು ಗೊತ್ತಾ?

ದೇವಾಲಯಕ್ಕೆ ತೆರಳಿದಾಗ  ಪ್ರತಿಯೊಬ್ಬ ಭಕ್ತ ಕೂಡ ದೇವರಿಗೆ ಪ್ರದಕ್ಷಿಣೆ ಹಾಕುತ್ತಾರೆ. ಭಕ್ತರು ತಮ್ಮ ನಂಬಿಕೆ, ಹರಕೆ ಅಥವಾ ಪ್ರತಿಜ್ಞೆಯ ಆಧಾರದ ಮೇಲೆ 3, 5, 7, 9, 11, 21 ಅಥವಾ 108 ಪ್ರದಕ್ಷಿಣೆಗಳನ್ನು ಮಾಡುತ್ತಾರೆ. ಎಷ್ಟು ಪ್ರದಕ್ಷಿಣೆ ಹಾಕಿದ್ರೆ ಏನೆಲ್ಲಾ ಲಾಭ, ಎಷ್ಟು ಪ್ರದಕ್ಷಿಣೆ ಹಾಕಬೇಕು ಅನ್ನೋದ್ದನ್ನ ತಿಳಿದುಕೊಳ್ಳೋಣ.

ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?

  • 1 ಪ್ರದಕ್ಷಿಣೆ: ಈ ಪ್ರಸ್ತುತ ಜನ್ಮದಲ್ಲಿ ತಿಳಿದು ಅಥವಾ ತಿಳಿಯದೆ ಮಾಡಿದ ಪಾಪಗಳು ನಿವಾರಣೆಯಾಗುತ್ತವೆ.
  • 2 ಪ್ರದಕ್ಷಿಣೆಗಳು: ಈ ಜನ್ಮದ ಪಾಪಗಳ ಜೊತೆಗೆ, ಪೂರ್ವ ಜನ್ಮಗಳಲ್ಲಿ ಮಾಡಿದ ಪಾಪಗಳ ಪ್ರಭಾವವೂ ದೂರವಾಗುತ್ತದೆ.
  • 3 ಪ್ರದಕ್ಷಿಣೆಗಳು: ಸಮಸ್ತ ಪಾಪಗಳಿಂದ ಸಂಪೂರ್ಣ ಮುಕ್ತಿ ದೊರೆತು ಮನಃಶಾಂತಿ ಲಭಿಸುತ್ತದೆ.
  • 5 ಪ್ರದಕ್ಷಿಣೆಗಳು: ಶತ್ರು ಬಾಧೆಗಳು, ಅಡೆತಡೆಗಳು ಹಾಗೂ ಕಷ್ಟ-ಕಾರ್ಪಣ್ಯಗಳಿಂದ ಬಳಲುತ್ತಿರುವವರಿಗೆ ಸಕಲ ಶತ್ರು ನಾಶ ಮತ್ತು ನಿವಾರಣೆ ಲಭಿಸುತ್ತದೆ.
  • 7 ಪ್ರದಕ್ಷಿಣೆಗಳು: ಜೀವನದಲ್ಲಿ ಸುಖ, ಶಾಂತಿ ಮತ್ತು ಸಕಲ ಐಶ್ವರ್ಯ-ಸಂಪತ್ತುಗಳು ವೃದ್ಧಿಯಾಗುತ್ತವೆ.
  • 9 ಪ್ರದಕ್ಷಿಣೆಗಳು: ಮನಸ್ಸಿನಲ್ಲಿರುವ ಆಸೆಗಳು, ಸತ್ಸಂಕಲ್ಪಗಳು ಹಾಗೂ ಇಷ್ಟಾರ್ಥಗಳು ಈಡೇರುತ್ತವೆ.
  • 11 ಪ್ರದಕ್ಷಿಣೆಗಳು: ಜೀವನದಲ್ಲಿ ನಿರಂತರ ಸಂತೋಷ, ಕೌಟುಂಬಿಕ ಸಮೃದ್ಧಿ ಹಾಗೂ ಅಭ್ಯುದಯ ಉಂಟಾಗುತ್ತದೆ.
  • ಕೋಟಿ ಪ್ರದಕ್ಷಿಣೆಗಳು: ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ವಿವಿಧ ಪುಣ್ಯಕ್ಷೇತ್ರಗಳಲ್ಲಿ ಮಾಡುವ ಒಟ್ಟು ಪ್ರದಕ್ಷಿಣೆಗಳ ಸಂಖ್ಯೆ ‘ಒಂದು ಕೋಟಿ’ ತಲುಪಿದರೆ, ಆತನಿಗೆ ಪುನರ್ಜನ್ಮವಿಲ್ಲದ ‘ಮೋಕ್ಷ’ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ತಿಳಿಸುತ್ತವೆ.

Kishor KV

Leave a Reply

Your email address will not be published. Required fields are marked *