ಭಾರತಕ್ಕೆ ಕಿಂಗ್ ಆಫ್ ಗಾಲೆ ಭಯ!- IND VS BAN ಸರಣಿಗೆ ಅಫ್ಘಾನ್ ಕೊಳ್ಳಿ
PAKನಲ್ಲೇ ಹೋಯ್ತು ಬಾಬರ್ ಮಾನ

ಭಾರತಕ್ಕೆ ಕಿಂಗ್ ಆಫ್ ಗಾಲೆ ಭಯ!-  IND VS BAN ಸರಣಿಗೆ ಅಫ್ಘಾನ್ ಕೊಳ್ಳಿPAKನಲ್ಲೇ ಹೋಯ್ತು ಬಾಬರ್ ಮಾನ

ರಿಷಭ್‌ ಪಂತ್‌ ರಕ್ಷಣಾತ್ಮಕವಾಗಿ ಆಡದೆ, ಎಂದಿನಂತೆ ತಮ್ಮ ಆಕ್ರಮಣಕಾರಿಯ ನೈಜ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಬೇಕೆಂದು ಮಾಜಿ ಕ್ರಿಕೆಟಿಗ ದೀಪ್‌ ದಾಸ್‌ಗುಪ್ತಾ ಸಲಹೆಯನ್ನು ನೀಡಿದ್ದಾರೆ. ರಿಷಭ್‌ ಪಂತ್‌ ಸಾಮಾನ್ಯವಾಗಿ ಹೇಗೆ ಬ್ಯಾಟ್‌ ಮಾಡುತ್ತಾರೆ, ಅದೇ ರೀತಿ ಆಡಬೇಕು. ಕಳೆದ ಕೆಲವು ಪಂದ್ಯಗಳನ್ನು ನಾನು ನೋಡಿದ್ದೇನೆ ಹಾಗೂ ಅಲ್ಲಿ ಇವರು ರಕ್ಷಣಾತ್ಮಕವಾಗಿ ಬ್ಯಾಟ್‌ ಮಾಡಿದ್ದರು. ಬಲವಂತವಾಗಿ ರಕ್ಷಣಾತ್ಮಕ ಆಟವನ್ನು ಆಡುವುದರ ಬದಲು ಸಿಕ್ಸರ್‌ ಹೊಡೆಯಲು ಪ್ರಯತ್ನಿಸುವುದು ಅವರ ಪಾಲಿಗೆ ಒಳ್ಳೆಯದುಎಂದು ತಿಳಿಸಿದ್ದಾರೆ.

Lanka

ಲಂಕಾ ವಿರುದ್ಧದ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಶುರುವಾಗಲಿದ್ದು, ಟೀಮ್ ಇಂಡಿಯಾಗೆ ಶ್ರೀಲಂಕಾದ ಮಾಜಿ ಆಲ್ ರೌಂಡರ್ ಫರ್ವೀಝ್ ಮಹರೂಫ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಿಂಗ್ ಆಫ್ ಗಾಲೆ ಖ್ಯಾತಿಯ  34 ವರ್ಷದ ಎಡಗೈ ಆರ್ಥೊಡಾಕ್ಸ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಪ್ರಸ್ತುತ ಶ್ರೀಲಂಕಾ ಟೆಸ್ಟ್ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಇವರು ಆಡಿರುವ 23 ಟೆಸ್ಟ್ ಪಂದ್ಯಗಳಿಂದ ಒಟ್ಟು 125 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಗಾಲೆ ಮೈದಾನದಲ್ಲೇ 81 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಬಿಗ್ ಶಾಕ್ ಎದುರಾಗಿದೆ.

ಭಾರತ ವಿರುದ್ಧದ ಟೆಸ್ಟ್​ ಸರಣಿಗೆ  ಮುನ್ನ ಆತಿಥೇಯ ಶ್ರೀಲಂಕಾ ತಂಡಕ್ಕೂ ಗಾಯದ ಭೀತಿ ಎದುರಾಗಿದೆ. ತಂಡದ ಪ್ರಮುಖ ಬ್ಯಾಟರ್​ಗಳಾದ ಕುಸಲ್​ ಮೆಂಡಿಸ್​ ಮತ್ತು ಪಥುಮ್​ ನಿಸ್ಸಂಕ ಗಾಯದಿಂದಾಗಿ ಭಾರತ ವಿರುದ್ಧದ ಟೆಸ್ಟ್​ ಸರಣಿಗೆ ಅಲಭ್ಯರಾಗಿದ್ದಾರೆ.  ಮೊದಲ ಪಂದ್ಯವನ್ನಾಡಲು ಭಾರತೀಯ ಆಟಗಾರರು ಈಗಾಗಲೇ ಗಾಲೆಗೆ ತಲುಪಿದ್ದಾರೆ. ಇಂದು ಗಾಲೆಯಲ್ಲಿ ವಿಶ್ರಾಂತಿ ಪಡೆಯಲಿದ್ದು ನಾಳೆಯಿಂದ  ಟೆಸ್ಟ್​ ಸರಣಿಗೆ ಮತ್ತೆ ಅಭ್ಯಾಸ ನಡೆಸಲಿದ್ದಾರೆ ಎನ್ನಲಾಗಿದೆ

ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಬಾಂಗ್ಲಾದೇಶ್ ಸರಣಿಗೆ ಅಫ್ಘಾನ್ ಕೊಳ್ಳಿ ಇಟ್ಟಿದೆ. ಭಾರತದ ಜೊತೆ BCB ಸೆಪ್ಟೆಂಬರ್ 1 ರಿಂದ 13 ರವರೆಗೆ ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನು ಆಯೋಜಿಸಲು ಉತ್ಸುಕವಾಗಿತ್ತು ಆದ್ರೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಭಾರತದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಸೆಪ್ಟೆಂಬರ್ 13 ರಿಂದ 17 ರವರೆಗೆ ಪಂದ್ಯ ನಡೆಯಲಿದ್ದು, ಬಾಂಗ್ಲಾಗೆ ಹಿನ್ನಡೆಯಾಗಿದೆ.

ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಮಾರ್ಕಸ್ ಸ್ಟೋನಿಸ್ ಅವರು ತಮ್ಮ ಬ್ಯಾಕ್‌ಯಾರ್ಡ್ ಕ್ರಿಕೆಟ್  ತಂಡದಲ್ಲಿ ರನ್ ಮಷಿನ್ ವಿರಾಟ್ ಕೊಹ್ಲಿಯನ್ನು ಬ್ಯಾಟ್ಸ್‌ಮನ್ ಬದಲಿಗೆ ಒಬ್ಬ ಬೌಲರ್ ಆಗಿ ಆಯ್ಕೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಸಂದರ್ಶನವೊಂದ್ರಲ್ಲಿ ಈ ಬಗ್ಗೆ ಮಾತನಾಡಿದ ಮಾರ್ಕಸ್, ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಕೊಹ್ಲಿಯ ಬೌಲಿಂಗ್ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಅವರ ಎಸೆತಗಳು ಎದುರಾಳಿಗಳನ್ನು ಅಚ್ಚರಿಗೊಳಿಸಬಹುದು ಹಾಗೂ ಅವರ ವಿಚಿತ್ರ ಅಥವಾ ಕೊಂಚ ಅಸಹಜ ಬೌಲಿಂಗ್ ಶೈಲಿಯು ಬ್ಯಾಟ್ಸ್‌ಮನ್‌ಗಳನ್ನು ಗೊಂದಲಕ್ಕೀಡು ಮಾಡುತ್ತದೆ. ಹೀಗಾಗಿ ಕೊಹ್ಲಿಯನ್ನ ಬೌಲಿಂಗ್‌ ವಿಭಾಗಕ್ಕೆ ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.

ಡಾರ್ವಿನ್‌ನ ಮರಾರಾ ಸ್ಟೇಡಿಯಂನಲ್ಲಿ ಆಗಸ್ಟ್ 13ರಿಂದ ಆರಂಭವಾಗಲಿರುವ ಬಾಂಗ್ಲಾದೇಶ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತನ್ನ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲಿರುವ ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಅದರಲ್ಲೂ ಆರಂಭಿಕನಾಗಿ ಜೇಕ್ ವೆದರಾಲ್ಡ್ ಮತ್ತೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಅಗ್ನಿಪರೀಕ್ಷೆಯಲ್ಲ, ಆಟಾಟೋಪ..  BBKಗೆ ರೀಲ್ಸ್‌ ಸ್ಟಾರ್ಸ್‌ ಬಿಟ್ರೆ ಯಾರಿಲ್ವಾ? – ಸೆಲೆಬ್ರಿಟಿಗಳಿಗಿಲ್ಲದ ಟಾಸ್ಕ್‌ ಇವರಿಗ್ಯಾಕೆ?

ಆಸ್ಟ್ರೇಲಿಯಾ ಹಾಗೂ ಆರ್‌ಸಿಬಿ ತಂಡದ ಮಾಜಿ ಆಲ್‌ರೌಂಡರ್ ಮೊಯ್ಸಿಸ್ ಹೆನ್ರಿಕೇಸ್, ಇದೀಗ ಪೋರ್ಚುಗಲ್ ಕ್ರಿಕೆಟ್ ತಂಡದ ನೂತನ ನಾಯಕನಾಗಿ ನೇಮಕಗೊಂಡಿದ್ದಾರೆ. ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, 39ನೇ ವಯಸ್ಸಿನಲ್ಲಿ ಅವರು ಮುಂಬರುವ ಟಿ20 ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಪೋರ್ಚುಗಲ್ ತಂಡವನ್ನು ಮುನ್ನಡೆಸಲಿದ್ದಾರೆ.

ನಮೀಬಿಯಾ ಪ್ರವಾಸಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಗಳವಾರ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಲು ಹೊಸ ನಾಯಕನ ಆಯ್ಕೆ ಮಾಡಲಾಗಿದ್ದು 31 ವರ್ಷದ ಅನುಭವಿ ಸ್ಪಿನ್ನರ್ ಬ್ಯೋರ್ನ್ ಫೋರ್ಚುಯಿನ್ ಅವರಿಗೆ ಮೊದಲ ಬಾರಿಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ದಕ್ಷಿಣ ಆಫ್ರಿಕಾ ತಂಡವು ಮೊದಲು ನಮೀಬಿಯಾ ಮತ್ತು ಜಿಂಬಾಬ್ವೆ ವಿರುದ್ಧ ಟಿ20 ತ್ರಿಕೋನ ಸರಣಿ ಹಾಗೂ ನಮೀಬಿಯಾ ವಿರುದ್ಧ 3 ಏಕದಿನ ಸರಣಿ ಆಡಲಿದೆ.

ದಕ್ಷಿಣ ಆಫ್ರಿಕಾದ ಸ್ಟಾರ್ ಆಲ್‌ರೌಂಡರ್ ಮಾರ್ಕೊ ಯಾನ್ಸೆನ್ ಅವರ ಅವಳಿ ಸಹೋದರ ಡ್ವಾನ್​ ಯಾನ್ಸೆನ್ ಮೊದಲ ಬಾರಿಗೆ ಸೀನಿಯರ್ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬರುವ ನಮೀಬಿಯಾ ವೈಟ್-ಬಾಲ್ ಪ್ರವಾಸಕ್ಕಾಗಿ ಡ್ವಾನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದ್ದು, ಈ ಪ್ರವಾಸದಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.

ಇಂಗ್ಲೆಂಡ್‌ ಸರಣಿಗೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಪಿಸಿಬಿಗೆ  ಮನವಿಯೊಂದನ್ನು ಮಾಡಿದ್ದಾರೆ. ಪ್ರವಾಸದ ಅವಧಿಯಲ್ಲಿ ಬಾಬರ್ ಅಜಂ ಅವರನ್ನು ಇಂಗ್ಲಿಷ್ ಮಾಧ್ಯಮಗಳಿಂದ ದೂರವಿಡಬೇಕು. ಅವರ ಬದಲು ಮಾಜಿ ನಾಯಕ ಶಾನ್ ಮಸೂದ್ ಅವರನ್ನು ಮಾಧ್ಯಮಗಳೊಂದಿಗೆ ಮಾತನಾಡಲು ಹೆಚ್ಚಾಗಿ ಕಳುಹಿಸುವುದು ಉತ್ತಮ ಎಂದಿದ್ದಾರೆ. ಈ ಮೂಲಕ  ರಶೀದ್ ಬಾಬರ್ ಅಜಂಗೆ ಇಂಗ್ಲಿಷ್ ಬರಲ್ಲ ಅನ್ನೋ ಟಾಂಗ್ ನೀಡಿ, ಒಂದು ರೀತಿಯಲ್ಲಿ ಬಾಬರ್ ಮರ್ಯಾದೆಯನ್ನ ತೆಗೆದಿದ್ದಾರೆ.

Kishor KV

Leave a Reply

Your email address will not be published. Required fields are marked *