ಕೌಟುಂಬಿ ಕಲಹ, ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿದ ತಂದೆ – ಅಪ್ಪನ ಜೊತೆ ಮಗಳು ಸಾ*ವು, 3 ಜನರ ಸ್ಥಿತಿ ಗಂಭೀರ

ಕೌಟುಂಬಿ ಕಲಹ, ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಸ್ಫೋಟಿಸಿದ ತಂದೆ – ಅಪ್ಪನ ಜೊತೆ ಮಗಳು ಸಾ*ವು, 3 ಜನರ ಸ್ಥಿತಿ ಗಂಭೀರ

ಸೊಂಟಕ್ಕೆ ಸ್ಫೋಟಕ ಕಟ್ಟಿಕೊಂಡು ಬಂದು ಮನೆಯೊಳಗೆ ಸ್ಫೋಟಿಸಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಂಟಕಿ ತಾಂಡಾದಲ್ಲಿ ನಡೆದಿದೆ. ಶಿವಲಾಲ್ ಬಲಿರಾಮ್ ಎಂಬಾತ ಸೊಂಟಕ್ಕೆ ಜಿಲೆಟಿನ್ ಕಡ್ಡಿ ಕಟ್ಟಿಕೊಂಡು ಮನೆಯೊಳಗೆ ಬಂದು ಸ್ಫೋಟಿಸಿಕೊಂಡಿದ್ದಾರೆ.  ಬಲಿರಾಮ್ ರಾಥೋಡ್  ಮನೆಯೊಳಗೆ ಬರ್ತಿದ್ದಂತೆ ಬಾಗಿಲನ್ನು ಲಾಕ್ ಮಾಡಿಕೊಂಡು ಸ್ಫೋಟಿಸಿಕೊಂಡಿದ್ದಾನೆ. ಈ ಘಟನೆಯಲ್ಲಿ  ಶಿವಲಾಲ್ (49) ಮತ್ತು ಪುತ್ರಿ ಮೀರಾ (15) ಮೃತಪಟ್ರೆ,  ಪತ್ನಿ ಸವಿತಾ, ಪುತ್ರ ಪ್ರಕಾ ಹಾಗೂ ಸುರೇಖಾ (30) ಮತ್ತು ವಿವೇಕ್ (12) ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ರೈಡ್ – ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್‌, ಪೆನ್‌ಡ್ರೈವ್ ಪತ್ತೆ

ಶಿವಲಾಲ್ ಮತ್ತು ಅವರ ಪತ್ನಿ ಸವಿತಾ ಶಿವಲಾಲ್ ರಾಥೋಡ್ ನಡುವೆ ಕೌಟುಂಬಿಕ ಕಲಹ ಇತ್ತು.  ಇಬ್ಬರ ನಡುವೆ ಜಗಳಗಳು ನಡೆಯುತಿತ್ತು. ಇದರಿಂದ ಬೆಸತ್ತಿದ್ದ ಸವಿತಾ ಮನೆ ಬಿಟ್ಟು ಹೋಗಿ ತನ್ನ ಮಗಳು ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದರು.  ಅಲ್ಲಿಗೆ ಬಂದ ಶಿವಲಾಲ್‌ ಈ  ಕೃತ್ಯವೆಸಿಗಿದ್ದಾನೆ.

ಶಿವಲಾಲ್ ಪುಣೆ ಬಳಿಯ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಜಿಲೆಟಿನ್ ಕಡ್ಡಿ ಸಂಗ್ರಹಿಸಿ ಈ ಕೃತ್ಯ ನಡೆಸಿದ್ದಾನೆ.   ಸ್ಫೋಟದ ಪರಿಣಾಮ ತೀವ್ರವಾಗಿತ್ತು. ಹತ್ತಿರದ ಮನೆಗಳಿಗೆ ಹಾನಿಯಾಗಿದೆ. ಇಬ್ಬರು ನೆರೆಹೊರೆಯವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಫೋಟದಲ್ಲಿ ಶಿವಲಾಲ್ ಅವರ ದೇಹ ಛಿದ್ರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Kishor KV