IPL ಗಾಯ.. ಟೀಂ ಇಂಡಿಯಾಗೆ ಬರೆ – ನೋವಿದ್ರೂ ಇಂಜೆಕ್ಷನ್ ಪಡೆದು ಆಡ್ತಾರಾ?
ಫ್ರಾಂಚೈಸಿಗಳಿಂದಲೇ ಸರಣಿಗಳಲ್ಲಿ ಸೋಲು!

ಟೀಂ ಇಂಡಿಯಾಗೆ ಈಗ ಪಂದ್ಯಗಳನ್ನ ಗೆಲ್ಲೋದಕ್ಕಿಂತ ಆಟಗಾರರ ಇಂಜುರಿಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸರಣಿಯಿಂದ ಸರಣಿಗೆ, ಪಂದ್ಯದಿಂದ ಪಂದ್ಯಕ್ಕೆ ಗಾಯಾಳುಗಳ ಸಂಖ್ಯೆ ಹೆಚ್ಚಾಗ್ತಾನೇ ಹೋಗ್ತಿದೆ. ಇದ್ರ ಎಫೆಕ್ಟ್ ರಿಸಲ್ಟ್ ಮೇಲೂ ತಟ್ಟುತ್ತಿದೆ. ಈಗ ಶ್ರೀಲಂಕಾ ಸರಣಿಯ ಹೊತ್ತಲ್ಲೂ ಸ್ಟಾರ್ ಆಟಗಾರರೇ ತಂಡದಿಂದ ಹೊರ ಬಿದ್ದಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣವೇ ಐಪಿಎಲ್ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ : ಲಂಕಾದಲ್ಲಿ ಸಿರಾಜ್ ಬ್ಯಾಟ್ ಚೆಕ್! ಬಾಲ್ ಒದ್ದು ಪಂತ್ ಪುಂಡಾಟ
ಝಣ ಝಣ ಕಾಂಚಾಣ. ಜೇಬು ತುಂಬಾ ಹಣ ಅಂತಾ ಸ್ಟಾರ್ ಆಟಗಾರರೆಲ್ಲಾ ಐಪಿಎಲ್ನಲ್ಲಿ ಕೋಟಿ ಕೋಟಿ ಸಂಭಾವನೆ ಪಡೀತಾರೆ. ಎರಡು ತಿಂಗಳಲ್ಲೇ ಕೈತುಂಬಾ ಕಾಸು ಮಾಡಿಕೊಳ್ತಾರೆ. ಆದ್ರೆ ಇದೇ ಐಪಿಎಲ್ನಿಂದಾಗಿ ಭಾರತದ ಪರ ಪಂದ್ಯಗಳನ್ನ ಆಡೋಕೆ ಆಗ್ತಾ ಇಲ್ಲ ಅನ್ನೋ ಗಂಭೀರ ಆರೋಪ ಇದೆ. ಅಂದ್ರೆ ಐಪಿಎಲ್ ಫ್ರಾಂಚೈಸಿಗಳಿಂದಾಗಿಯೇ ಇಂಜುರಿ ಸಮಸ್ಯೆ ಜಾಸ್ತಿ ಆಗ್ತಿದೆ ಅನ್ನೋ ಚರ್ಚೆ ಶುರುವಾಗಿದೆ.
ಗಾಯದ ಹೊರತಾಗಿಯೂ ಆಟಗಾರರಿಗೆ ಫ್ರಾಂಚೈಸಿಗಳ ಒತ್ತಡ!
ಭಾರತ ತಂಡದ ಪರ ಆಡುವ ಸ್ಟಾರ್ ಆಟಗಾರರೇ ಗಾಯಗಳಿಂದಾಗಿ ತಂಡದಿಂದ ಹೊರಗಿರೋದಕ್ಕೆ ಐಪಿಎಲ್ ಪ್ರೆಶರ್ ಮತ್ತು ಫೈನಾನ್ಶಿಯಲ್ ಫ್ರೆಶರ್ ಕಾರಣ ಅಂತಾ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮೂಲಗಳೇ ಸ್ಪಷ್ಟಪಡಿಸಿವೆ. ರಾಷ್ಟ್ರೀಯ ತಂಡಕ್ಕಿಂತ ಐಪಿಎಲ್ ಫ್ರಾಂಚೈಸಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಮತ್ತು ಗಾಯಗಳನ್ನು ಮುಚ್ಚಿಟ್ಟು ಆಡುತ್ತಿರುವುದು ಈ ಸಮಸ್ಯೆಯನ್ನ ಜಾಸ್ತಿ ಮಾಡಿದೆ. ತಮ್ಮ ಆರ್ಥಿಕ ಲಾಭಕ್ಕಾಗಿ ಭಾರತದ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರನ್ನು ಗಾಯದ ನಡುವೆಯೂ ಬಲವಂತವಾಗಿ ಆಡಿಸುತ್ತಿವೆ ಎಂದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೂಲಗಳು ಗಂಭೀರ ಆರೋಪ ಮಾಡಿವೆ.
ಫ್ರಾಂಚೈಸಿಗಳಿಂದಲೇ ಗಾಯ!
ಕೋಟಿ ಕೋಟಿ ಸಂಭಾವನೆ ಕಾರಣಕ್ಕೆ ಇಂಜುರಿ ಇದ್ದರೂ ಒತ್ತಡದಿಂದ ಆಟ
ಗುಣಮುಖರಾಗದೆ ರಾಷ್ಟ್ರದ ಪಂದ್ಯಗಳನ್ನ ಆಡೋದ್ರಿಂದ ಇಂಜುರಿ ಹೆಚ್ಚಳ
2 ತಿಂಗಳು ನಿರಂತರ ಪ್ರಯಾಣ, ಹೆಚ್ಚಿನ ಪಂದ್ಯಗಳು, ರೆಸ್ಟ್ ಇಲ್ಲದೆ ಆಟ
ಕೆಲವು ಬಾರಿ ನೋವು ಇದ್ರೂ ಇಂಜೆಕ್ಷನ್ ಪಡೆದು ಪಂದ್ಯಗಳನ್ನ ಆಡ್ತಾರೆ
ಪ್ರತೀ ಬಾಲ್ ನೂ ಹೈಸ್ಪೀಡ್ ಹಾಕೋದ್ರಿಂದ ವೇಗದ ಬೌಲರ್ ಗಳಿಗೆ ಹೊಡೆತ
ಹೀಗೆ ಐಪಿಎಲ್ ಓವರ್ ಲೋಡ್ನಿಂದಾಗೇ ಆಟಗಾರರಲ್ಲಿ ಫಿಟ್ನೆಸ್ ಸಮಸ್ಯೆ ಜಾಸ್ತಿಯಾಗ್ತಿದೆ ಅನ್ನೋದು ಕೆಲವರ ವಾದ. ಅದೂ ಅಲ್ದೇ ಅಟ್ ಪ್ರಸೆಂಡ್ ಭಾರತದ ಪರ ಆಡುವ 13 ಪ್ರಮುಖ ಕ್ರಿಕೆಟಿಗರು ಗಾಯದ ಸಮಸ್ಯೆಯಿಂದಾಗಿ ಬೆಂಗಳೂರಿನ CoE ನಲ್ಲಿ ರಿಹ್ಯಾಬ್ ಸೆಂಟರ್ನಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ, ಆಕಾಶ್ ದೀಪ್, ವರುಣ್ ಚಕ್ರವರ್ತಿ, ಪ್ರಿನ್ಸ್ ಯಾದವ್, ಹಾರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಹೀಗೆ ಮ್ಯಾಚ್ ವಿನ್ನಿಂಗ್ ಪ್ಲೇಯರ್ಗಳೇ ಹೊರಗಿದ್ದಾರೆ. ಇದೇ ಈಗ ತಂಡದ ಸೋಲುಗಳಿಗೂ ಕಾರಣವಾಗಿದೆ.

ನೋಡಿರಿ

