ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನ ಮಾಡಬಾರದು..ಇವುಗಳನ್ನ ನೋಡಲೂಬಾರದು..!

ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನ ಮಾಡಬಾರದು..ಇವುಗಳನ್ನ ನೋಡಲೂಬಾರದು..!

ಶತಮಾನಗಳ ನಂತರವೂ ಜನಮಾನಸದಲ್ಲಿ ನೆಲೆಸಿರುವ ಮಹಾನ್‌ ವ್ಯಕ್ತಿ ಆಚಾರ್ಯ ಚಾಣಕ್ಯ. ಇವರು ತಮ್ಮ ನೀತಿಶಾಸ್ತ್ರದಲ್ಲಿ ಬದುಕಿನ ಮಾರ್ಗವನ್ನ ತೋರಿಸಿದ್ದಾರೆ. ಒಬ್ಬ ವ್ಯಕ್ತಿಯು ಬೆಳಿಗ್ಗೆ ಎದ್ದತಕ್ಷಣ ಯಾವೆಲ್ಲ ಕೆಲಸಗಳನ್ನ ಮಾಡಬಾರದು ಎಂಬುದನ್ನ ತಿಳಿಸಿದ್ದಾರೆ.

ಬೆಳಗ್ಗೆ ಎದ್ದತಕ್ಷಣ ನೀವು ಕೋಪಿಷ್ಠರು, ಸೋಮಾರಿಗಳ ಬಳಿ ಹೋಗಬೇಡಿ. ಅವರನ್ನ ನೋಡಲೂ ಬೇಡಿ, ಮಾತಾಡಲೂ ಬೇಡಿ ಎನ್ನುತ್ತಾರೆ ಚಾಣಕ್ಯ. ಅತಿಯಾಗಿ ಕೋಪಗೊಳ್ಳುವ, ವಿಪರೀತವಾಗಿ ಸೋಮಾರಿಯಾಗಿರುವ ವ್ಯಕ್ತಿಗಳನ್ನ ನೀವು ಬೆಳಗ್ಗೆ ಎದ್ದ ತಕ್ಷಣ ನೋಡಿದರೆ, ಮಾತಾಡಿಸಿದರೆ ನಿಮಗೇ ಕಿರಿಕಿರಿಯಾಗುತ್ತದೆ. ಎದ್ದ ತಕ್ಷಣ ಮೊದಲೇ ಕಿರಿಯಾದರೆ ನಿಮ್ಮ ಇಡೀದಿನ ಹಾಗೇ ಮುಂದುವರಿಯುತ್ತದೆ. ನಿಮ್ಮಲ್ಲಿ ಆಲಸ್ಯ ಮೂಡಬಹುದು.

ಇದನ್ನೂ ಓದಿ: ಸೋಮವಾರ ಇಡಬೇಕು ಎಚ್ಚರಿಕೆ ಹೆಜ್ಜೆ – ಅಪ್ಪತಪ್ಪಿಯೂ ಶಿವನ ವಿರುದ್ಧ ಈ ಕೆಲಸ ಮಾಡಬೇಡಿ

ಬೆಳಗ್ಗೆ ಎದ್ದ ತಕ್ಷಣ ನೀವು ಸತ್ತ ಪ್ರಾಣಿಗಳನ್ನ ನೋಡಬಾರದು. ಜೀವವಿಲ್ಲದ ಪ್ರಾಣಿಗಳನ್ನ ನೋಡುವ ಮೂಲಕ ಆರಂಭಿಸುವ ದಿನವು ಕೆಟ್ಟದಾಗಿರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಅದು ನಿಮ್ಮ ಮನಸ್ಸನ್ನು ವಿಚಿತ್ರವಾದ ನಕಾರಾತ್ಮಕತೆಯಿಂದ ತುಂಬಿಸಬಹುದು ಮತ್ತು ಇದು ದಿನವಿಡೀ ಸಮಸ್ಯೆಗಳಿಗೆ ಕಾರಣವಾಗಬಹುದು.

ನೀವು ಬೆಳಗ್ಗೆ ಎದ್ದ ತಕ್ಷಣ ಮನೆಯೊಳಗೆ ಅವ್ಯವಸ್ಥೆ, ಗಲೀಜು ನೋಡಬಾರದು. ಉದಾಹರಣೆಗೆ ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿ ಆಗಿರುವುದು, ಪಾತ್ರೆಗಳು ತೊಳೆಯದೆ ಹಾಗೇ ಸಿಂಕ್‌ನಲ್ಲಿ ಇರುವುದು, ಕಸಗಳು ತುಂಬಿರುವುದನ್ನ ನೋಡಬಾರದು. ಇದು ನಿಮ್ಮ ಮನಸನ್ನ ಹತಾಶೆ ಮತ್ತು ನಕಾರಾತ್ಮಕಗೊಳಿಸುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ. ಮನಸು ಕದಡಿ, ಇಡೀ ದಿನ ಮೂಡ್‌ ಆಫ್‌ ಆಗಿರುತ್ತದೆ.

ನೀವು ಬೆಳಗ್ಗೆ ಎದ್ದಾಗ ಯಾರೊಂದಿಗೂ ಜಗಳ, ಮನಸ್ತಾಪ ಮಾಡಿಕೊಳ್ಳಬಾರದು. ಇದು ನಿಮ್ಮ ಇಡೀ ದಿನವನ್ನ ಹಾಳುಗೆಡವುತ್ತದೆ. ಜಗಳಗಳು ನಿಮ್ಮನ್ನು ತೀವ್ರ ದುಃಖಕ್ಕೆ ದೂಡುತ್ತವೆ, ನಿಮ್ಮನ್ನು ನಕಾರಾತ್ಮಕತೆ ಮತ್ತು ಅಶಾಂತಿಯಿಂದ ತುಂಬಿಸುತ್ತವೆ. ಇಡೀ ದಿನ ಮನಸಿಗೆ ನೆಮ್ಮದಿ ಇಲ್ಲದಂತೆ ಆಗುತ್ತದೆ ಎಂದು ಚಾಣಕ್ಯ ತಿಳಿಸಿದ್ದಾರೆ.

Kishor KV

Leave a Reply

Your email address will not be published. Required fields are marked *