ವಿಶ್ವಕಪ್ ಗೆಲ್ಲಲು ಭುವಿ ರೆಡಿ – ಸೆಲೆಕ್ಟರ್ಸ್ ಕೈಯಲ್ಲಿ ಫೈನಲ್ ಟಿಕೆಟ್!
BCCI ಆಯ್ಕೆ ಅನುಭವಿನಾ.. ಹೊಸಬರಾ?

ವಿಶ್ವಕಪ್ ಗೆಲ್ಲಲು ಭುವಿ ರೆಡಿ – ಸೆಲೆಕ್ಟರ್ಸ್ ಕೈಯಲ್ಲಿ ಫೈನಲ್ ಟಿಕೆಟ್!BCCI ಆಯ್ಕೆ ಅನುಭವಿನಾ.. ಹೊಸಬರಾ?

1 ಟ್ರೋಫಿ.. 3 ದೇಶಗಳ ಆತಿಥ್ಯ.. 12 ಕ್ರೀಡಾಂಗಣ.. 14 ತಂಡಗಳ ಜಿದ್ದಾಜಿದ್ದಿ.. ಒಟ್ಟು 57 ಪಂದ್ಯಗಳು.. ಇದು 2027ರ ಏಕದಿನ ವಿಶ್ವಕಪ್​ಗೆ ಐಸಿಸಿ ಮಾಡಿರೋ ಶೆಡ್ಯೂಲ್. ಭಾರತ ಕೂಡ ಈ ಪ್ರತಿಷ್ಠಿತ ಕಪ್ ಗೆಲ್ಲಲೇಬೇಕು ಅನ್ನೋ ಟಾರ್ಗೆಟ್​ನಲ್ಲಿದೆ. ಅದಕ್ಕಾಗಿ ಅಳೆದುತೂಗಿ ತಂಡದ ಆಯ್ಕೆಯನ್ನೂ ಮಾಡ್ತಿದೆ. ಈ ವಿಶ್ವಕಪ್ ತಂಡದಲ್ಲಿ ಅತೀ ಹೆಚ್ಚು ಕೇಳಿ ಬರ್ತಿರೋ ಹೆಸರು ಭುವನೇಶ್ವರ್ ಕುಮಾರ್. ಮಾಜಿ ಕ್ರಿಕೆಟರ್ಸ್, ಫ್ಯಾನ್ಸ್ ಕೂಡ ಭುವಿ ತಂಡಕ್ಕೆ ಬೇಕು ಅಂತಿದ್ದಾರೆ.

ಇದನ್ನೂ ಓದಿ : ಲಂಕೆಗೆ ಬೆಂಕಿ ಇಟ್ಟ DSP ಮೊಹಮ್ಮದ್ ಸಿರಾಜ್ – ಲಾಸ್ಟ್ ಓವರ್.. 4 ಸಿಕ್ಸರ್.. ಸಲ್ಯೂಟ್!

ಟೀಂ ಇಂಡಿಯಾಗೆ ಸೆಲೆಕ್ಟ್ ಆಗದೇ ವರ್ಷಗಳೇ ಕಳೆದ್ರೂ ಭುವನೇಶ್ವರ್ ಕುಮಾರ್ ಖದರ್ ಮಾತ್ರ ಕಮ್ಮಿ ಆಗಿಲ್ಲ. ಡೊಮೆಸ್ಟಿಕ್​ನಲ್ಲಿ ಸೂಪರ್ ಡೂಪರ್ ಪ್ರದರ್ಶನ ನೀಡಿ ಇಡೀ ಮ್ಯಾನೆಜ್​ಮೆಂಟೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿರೋ ಭುವಿ ಮತ್ತೊಮ್ಮೆ ಭಾರತ ತಂಡಕ್ಕೆ ಸೇರಬೇಕು ಅನ್ನೋ ಟ್ರೆಂಡ್ ಸೆಟ್ ಮಾಡಿದ್ದಾರೆ. ಅಭಿಮಾನಿಗಳು, ಮಾಜಿ ಕ್ರಿಕೆಟರ್ಸ್ ಟ್ರೆಂಡ್ ಬಳಿಕ ಈಗ ವಿಶ್ವಕಪ್ ಆಡೋಕೆ ನಾನು ಸಿದ್ಧ ಅಂತಾ ಭುವಿಯೇ ಹೇಳಿದ್ದಾರೆ.

ಭಾರತದ ಪರ ಆಡಲು ಸಿದ್ಧ.. ಅವಕಾಶ ಕೇಳಿದ ಭುವಿ!

ಇಷ್ಟು ದಿನ ಭುವಿ ಪರ ಎಲ್ರೂ ವಾಯ್ಸ್ ರೈಸ್ ಮಾಡ್ತಿದ್ರು. ಈಗ ತನಗೆ ಅವಕಾಶ ಸಿಗ್ಬೇಕು ಅನ್ನೋ ಬಗ್ಗೆ ಭುವಿಯೇ ಮಾತ್ನಾಡಿದ್ದಾರೆ. ಯುಪಿ ಟಿ20 (UP T20) ಲೀಗ್‌ಗೂ ಮುನ್ನ ಲಕ್ನೋ ಫಾಲ್ಕನ್ಸ್ ತಂಡದ ಪ್ರಾಕ್ಟೀಸ್ ಸೆಷನ್​ನಲ್ಲಿ ಮಾತನಾಡಿದ ಸ್ವಿಂಗ್ ಕಿಂಗ್ ಟೀಂ ಇಂಡಿಯಾ ಕಂ ಬ್ಯಾಕ್ ಬಗ್ಗೆ ಮಾತ್ನಾಡಿದ್ರು. ಭಾರತದ ಪರ ಆಡಲು ನಾನು ಖಂಡಿತವಾಗಿಯೂ ರೆಡಿ ಇದ್ದೇನೆ. ನನಗೆ ಮತ್ತೆ ಕಾಲ್ ಬಂದರೆ ನಾನು ಬೇಡ ಎನ್ನಲು ಹೇಗೆ ಸಾಧ್ಯ? ನಾನು ಆಡಲು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ. ನಾನು ಸಹ ಕಂಬ್ಯಾಕ್ ಅನ್ನು ಎದುರು ನೋಡುತ್ತಿದ್ದೇನೆ. ಬಟ್ ತಂಡದಲ್ಲಿ ಸ್ಥಾನ ಸಿಗುತ್ತದೆಯೇ ಇಲ್ಲವೇ ಎಂಬುದು ಸಂಪೂರ್ಣವಾಗಿ ಆಯ್ಕೆಗಾರರ ಕೈಯಲ್ಲಿದೆ ಎಂಬುದನ್ನೂ ಅವ್ರೇ ಕ್ಲಿಯರ್ ಆಗಿ ಹೇಳಿದ್ದಾರೆ. ಹಾಗಂತ ಕಂ ಬ್ಯಾಕ್ ಕಾಲ್ ಬರುತ್ತೆ ಅಂತಾ ಕಾಯ್ಕೊಂಡೇ ಕೂರೋಕೂ ಆಗಲ್ಲ ಅನ್ನೋದನ್ನೂ ಹೇಳೋಕೆ ಮರೆತಿಲ್ಲ. ನಾನು ಈಗಾಗಲೇ ಭಾರತದ ಪರ ಆಡುವ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಈಗ ನಾನು ಕೇವಲ ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಆಡುತ್ತಿದ್ದೇನೆ. ಸದ್ಯ ನನ್ನ ವೃತ್ತಿಜೀವನ ಇರುವ ಸ್ಥಿತಿಯ ಬಗ್ಗೆ ನನಗೆ ತೃಪ್ತಿ ಮತ್ತು ನೆಮ್ಮದಿಯಿದೆ ಎಂದಿದ್ದಾರೆ.

ಸದ್ಯ ಭುವಿ ಆಗಸ್ಟ್ 14 ರಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಟಿ20 ಲೀಗ್‌ನ ನಾಲ್ಕನೇ ಸೀಸನ್‌ನಲ್ಲಿ ಲಕ್ನೋ ಫಾಲ್ಕನ್ಸ್ ತಂಡದ ಕ್ಯಾಪ್ಟನ್ ಆಗಿ ಲೀಡ್ ಮಾಡಲಿದ್ದಾರೆ. 24 ದಿನಗಳ ಯುಪಿಟಿ20 ಸೀಸನ್ 4 34 ಪಂದ್ಯಗಳನ್ನು ಒಳಗೊಂಡಿದ್ದು, ಮೊದಲ ಬಾರಿಗೆ ಎರಡು ನಗರಗಳಲ್ಲಿ ನಡೆಯಲಿದೆ. ಸೋ ಇಲ್ಲಿಯೂ ಕೂಡ ತಮ್ಮ ಖದರ್ ತೋರಿಸೋ ಮೂಲಕ ಮತ್ತೊಮ್ಮೆ ತಮ್ಮಲ್ಲಿನ್ನೂ ವಿಕೆಟ್ ಟೇಕಿಂಗ್ ಸಾಮರ್ಥ್ಯ ಇದೆ ಅನ್ನೋದನ್ನ ತೋರಿಸೋಕೆ ಮುಂದಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಅವ್ರ ಇಂಜುರಿ ಕನ್ಸರ್ನ್ ನೋಡಿದ್ರೆ ಭುವಿಗೆ 2027ರ ವಿಶ್ವಕಪ್ ತಂಡದಲ್ಲಿ ಅವಕಾಶ ನೀಡೋದು ಬೆಟರ್. ಆದ್ರೆ 2027ರ ವಿಶ್ವಕಪ್ ವೇಳೆಗೆ ಭುವನೇಶ್ವರ್ ಕುಮಾರ್ ಅವರಿಗೆ 37 ವರ್ಷ ವಯಸ್ಸಾಗಲಿದ್ದು, ಆಯ್ಕೆದಾರರು ಯುವ ಆಟಗಾರರ ಕಡೆಗೆ ಫೋಕಸ್ ಮಾಡೋ ಸಾಧ್ಯತೆಗಳೂ ಜಾಸ್ತಿ ಇದೆ. ಅದೂ ಅಲ್ದೇ 2022ರಿಂದ ಭಾರತ ತಂಡದ ಪರ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಸದ್ಯಕ್ಕಂತೂ ಭುವಿ ಕಂ ಬ್ಯಾಕ್ ಫಿಫ್ಟಿ ಫಿಫ್ಟಿ ಇದೆ. ಮುಂದಿನ ಏಕದಿನ ಸರಣಿಗಳಲ್ಲಿ ತಂಡಗಳ ಘೋಷಣೆ ವೇಳೆ ಭುವಿಗೆ ಅವಕಾಶ ಕೊಡ್ತಾರೋ ಇಲ್ವೋ ಅನ್ನೋದು ಕೂಡ ಕ್ಲಿಯರ್ ಆಗಲಿದೆ.

Shantha Kumari

Leave a Reply

Your email address will not be published. Required fields are marked *