ಲಂಕೆಗೆ ಬೆಂಕಿ ಇಟ್ಟ DSP ಮೊಹಮ್ಮದ್ ಸಿರಾಜ್ – ಲಾಸ್ಟ್ ಓವರ್.. 4 ಸಿಕ್ಸರ್.. ಸಲ್ಯೂಟ್!
ಪ್ರಾಕ್ಟೀಸ್ ಆದ್ರೂ ಕ್ಲೈಮ್ಯಾಕ್ಸ್ ಸೂಪರ್

ಲಂಕೆಗೆ ಬೆಂಕಿ ಇಟ್ಟ DSP ಮೊಹಮ್ಮದ್ ಸಿರಾಜ್ – ಲಾಸ್ಟ್ ಓವರ್.. 4 ಸಿಕ್ಸರ್.. ಸಲ್ಯೂಟ್!ಪ್ರಾಕ್ಟೀಸ್ ಆದ್ರೂ ಕ್ಲೈಮ್ಯಾಕ್ಸ್ ಸೂಪರ್

ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಭಾರತ ಗೆದ್ದಿದೆ. ಅದ್ರಲ್ಲೂ ಕೊನೇ ಓವರ್ ನಲ್ಲಿ ಮೊಹಮ್ಮದ್ ಸಿರಾಜ್ ಆಟ ಅಂತೂ ಎಕ್ಸ್​ಟ್ರಾರ್ಡಿನರಿ. ಮೂರು ದಿನಗಳ ಅಭ್ಯಾಸ ಪಂದ್ಯ ಈ ರೀತಿಯಾಗಿ ಕ್ಲೈಮ್ಯಾಕ್ಸ್ ಇರುತ್ತೆ ಅಂತಾ ಯಾರೂ ಇಮ್ಯಾಜಿನ್ ಕೂಡ ಮಾಡಿರಲಿಲ್ಲ. ಕೊನೆಗೂ ವಾರ್ಮ್ ಅಪ್ ಪಂಧ್ಯವನ್ನ ಭಾರತ  6 ವಿಕೆಟ್‌ಗಳಿಂದ ಗೆದ್ದಿತು. ಅದ್ರಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ಅಂತೂ ಅದ್ಭುತವನ್ನೇ ಸೃಷ್ಟಿಸಿದ್ರು. ಅವ್ರ ಬ್ಯಾಟಿಂದ ಬಂದ ಹ್ಯಾಟ್ರಿಕ್ ಸಿಕ್ಸರ್ಸ್ ಬರೀ ಗೆಲುವಿನ ಗಿಫ್ಟ್ ಕೊಡಲಿಲ್ಲ. ಟೆಸ್ಟ್​ಗಷ್ಟೇ ಸೀಮಿತ ಮಾಡಿರೋ ಗೌತಮ್ ಗಂಭೀರ್ ಮತ್ತು ಸೆಲೆಕ್ಟರ್​ಗಳಿಗೂ ಕಪಾಳಮೋಕ್ಷದಂತಿತ್ತು.

ಇದನ್ನೂ ಓದಿ : ಲಂಕೆಯಲ್ಲಿ KL & ಪಡಿಕ್ಕಲ್ ಪರಾಕ್ರಮ – ಟೀಂ ಇಂಡಿಯಾಗೆ ಕೈಕೊಡುತ್ತಾ ಬ್ಯಾಟಿಂಗ್?

ಕ್ಲೈಮ್ಯಾಕ್ಸ್ ನಲ್ಲಿ ರೋಚಕವಾಗಿ ಗೆದ್ದ ಭಾರತ!

ಮೂರು ದಿನಗಳ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ಮೊದಲ ಇನ್ನಿಂಗ್ಸ್ ಅನ್ನು 8 ವಿಕೆಟ್‌ಗೆ 363 ರನ್‌ಗಳಿಗೆ ಡಿಕ್ಲೇರ್ ಮಾಡಿತು. ನಂತರ ಭಾರತ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 6 ವಿಕೆಟ್‌ ಕಳೆದುಕೊಂಡು 357 ರನ್‌ಗಳಿಗೆ ಡಿಕ್ಲೇರ್ ಮಾಡಿತು. ಹೀಗಾಗಿ ಶ್ರೀಲಂಕಾಕ್ಕೆ ಮೊದಲ ಇನ್ನಿಂಗ್ಸ್​ನಲ್ಲಿ 6 ರನ್‌ಗಳ ಮುನ್ನಡೆ ಸಿಕ್ಕಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 200 ರನ್ ಗಳಿಸಿ ಭಾರತಕ್ಕೆ 207 ರನ್​ಗಳ ಗುರಿ ನೀಡಿತು.ಈ ಗುರಿ ಬೆನ್ನಟ್ಟಿದ ಭಾರತ 4 ವಿಕೆಟ್‌ಗಳಿಗೆ 214 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಅದ್ರಲ್ಲೂ ಹೈಲೆಟ್ ಆಗಿದ್ದು ಸಿರಾಜ್.

ಸಿರಾಜ್ ಹ್ಯಾಟ್ರಿಕ್ ಸಿಕ್ಸ್ ನಿಂದ ಪಂದ್ಯ ಗೆದ್ದ ಭಾರತ!

ಕೊನೆ 3 ಓವರ್‌ ಬಾಕಿ ಇದ್ದಾಗ ಭಾರತಕ್ಕೆ ಗೆಲ್ಲಲು 28 ರನ್‌ ಬೇಕಿತ್ತು. ಮೊಹಮದ್‌ ಸಿರಾಜ್‌ 15 ಎಸೆತದಲ್ಲಿ 4 ಸಿಕ್ಸರ್‌, 1 ಬೌಂಡರಿ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಸಿರಾಜ್ 15 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರು 1 ಬೌಂಡರಿ ಮತ್ತು 4 ಸಿಕ್ಸರ್‌ಗಳನ್ನು ಹೊಡೆದರು.  ಕೊನೆಯ ಓವರ್‌ನಲ್ಲಿ ಸಿರಾಜ್ ಸತತ ಮೂರು ಸಿಕ್ಸರ್‌ಗಳನ್ನು ಮತ್ತು ಒಂದು ಬೌಂಡರಿಯನ್ನು ಹೊಡೆದರು. ಆ ಓವರ್‌ನಲ್ಲಿ 23 ರನ್ ಗಳಿಸಿ ಭಾರತಕ್ಕೆ 6 ವಿಕೆಟ್‌ಗಳ ಜಯ ತಂದುಕೊಟ್ಟರು. ಸಿರಾಜ್ ಅವರ ಬಿರುಗಾಳಿ ಇನ್ನಿಂಗ್ಸ್ ನಿಂದ ಶಾಕ್ ಆದ ಶ್ರೀಲಂಕಾ ಆಟಗಾರರು ಅವರ ಬ್ಯಾಟ್ ಅನ್ನು ಚೆಕ್ ಮಾಡಲು ಮುಂದಾಗಿದ್ದು ವಿಶೇಷವಾಗಿತ್ತು. ಬಟ್ ಬ್ಯಾಟಿಂಗ್​ನಲ್ಲಿ ಸಿರಾಜ್ ಶೈನ್ ಆದ್ರೂ ಬೌಲಿಂಗ್ ಅಷ್ಟಕ್ಕಷ್ಟೇ ಇತ್ತು. ಮೊದಲ ಇನ್ನಿಂಗ್ಸ್‌ನಲ್ಲಿ 13 ಓವರ್‌ಗಳಲ್ಲಿ 44 ರನ್ ನೀಡಿದ್ರೂ ಯಾವುದೇ ವಿಕೆಟ್ ಸಿಕ್ಕಿರಲಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ 8 ಓವರ್‌ಗಳಲ್ಲಿ 25 ರನ್ ಕೊಟ್ಟು 1 ವಿಕೆಟ್ ಪಡೆದರು. ಒಟ್ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಆಗಸ್ಟ್ 15ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡಲಿವೆ. ಎರಡನೇ ಪಂದ್ಯ ಆಗಸ್ಟ್ 23ರಂದು ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಈ ಪಂದ್ಯಗಳು ಮುಖ್ಯವಾಗಿವೆ.

Shantha Kumari

Leave a Reply

Your email address will not be published. Required fields are marked *