ಸೀತೆ ಸಾಯಿ ಪಲ್ಲವಿಗೆ ಅಗ್ನಿ ಪರೀಕ್ಷೆ! | ಕೂದಲಿಗೂ ಕೊಂಕು.. ಪಾತ್ರಕ್ಕೆ ಉರಿನಾ?
ನಟಿಗೆ ಈ ಸಮಸ್ಯೆಯೇ ಮುಳುವಾಯ್ತಾ?

ಸೀತೆ ಸಾಯಿ ಪಲ್ಲವಿಗೆ ಅಗ್ನಿ ಪರೀಕ್ಷೆ! | ಕೂದಲಿಗೂ ಕೊಂಕು.. ಪಾತ್ರಕ್ಕೆ ಉರಿನಾ?ನಟಿಗೆ ಈ ಸಮಸ್ಯೆಯೇ ಮುಳುವಾಯ್ತಾ?

ರಾಮಾಯಣ.. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಇದೇ ನವೆಂಬರ್‌ 6ರಂದು ಸಿನಿಮಾ ರಿಲೀಸ್‌ ಆಗ್ತಿದೆ. ಈಗಾಗ್ಲೇ ಸಿನಿಮಾದ ಟೀಸರ್‌, ಟ್ರೈಲರ್‌ ರಿಲೀಸ್‌ ಆಗಿದೆ. ಆದ್ರೆ ಇಷ್ಟು ದಿನ ಈ ಸಿನಿಮಾ, ಸಿನಿಮಾ ಪಾತ್ರಗಳ ಬಗ್ಗೆ ಹೊಗಳ್ತಿದ್ದವರೆಲ್ಲಾ ನೆಗೆಟಿವ್‌ ಕಮೆಂಟ್‌ ಮಾಡೋದಿಕ್ಕೂ ಶುರುಮಾಡಿದ್ದಾರೆ. ಅದ್ರಲ್ಲೂ ಸೀತೆ ಪಾತ್ರ ಸಿಕ್ಕಾಪಟ್ಟೆ ಟ್ರೋಲ್‌ ಆಗ್ತಿದೆ. ಸಾಯಿ ಪಲ್ಲವಿ ಈ ಪಾತ್ರಕ್ಕೆ ಸೂಟ್‌ ಆಗ್ತಿಲ್ಲ. ಅವರ ಹೇರ್‌ಸ್ಟೈಲ್‌, ಕಾಸ್ಟೂಮ್‌, ಮೇಕಪ್‌ ಬಗ್ಗೆ ಟ್ರೋಲ್‌ ಮಾಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಇನ್ನೊಂದ್ಕಡೆ ನಟಿ ಸಾಯಿ ಪಲ್ಲವಿ ಆರೋಗ್ಯದ ಬಗ್ಗೆ ಆಡಿರೋ ಮಾತು ಕೂಡ ವೈರಲ್‌ ಆಗ್ತಿದೆ.

ಇದನ್ನೂ ಓದಿ: ತಮಿಳುನಾಡು ಸಿಎಂ ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ವಾಪಸ್ ಪಡೆದಿದ್ದೇಕೆ? – ಸಂಗೀತಾ ನಿರ್ಧಾರಕ್ಕೆ ಇದೇ ಕಾರಣ!

ಸದ್ಯ ಭಾರತೀಯ ಚಿತ್ರರಂಗದಲ್ಲಿ ಎಲ್ಲಿ ಕೇಳಿದರೂ ರಾಮಾಯಣ ದ್ದೇ ಮಾತು. ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯಕಾವ್ಯದಲ್ಲಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿರೋದು ದಕ್ಷಿಣ ಭಾರತದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ  ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ರಾಮಾಯಣದ ಟ್ರೇಲರ್ ರಿಲೀಸ್‌ ಆದಾಗಿನಿಂದ ಅವರ ಲುಕ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅವರು ಹೇರ್‌ಸ್ಟೈಲ್‌, ಮೇಕಪ್‌, ಕಾಸ್ಟ್ಯೂಮ್‌ ಬಗ್ಗೆ ಟ್ರೋಲ್‌ ಮಾಡಲಾಗ್ತಿದೆ. ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಸೂಟ್‌ ಆಗಲ್ಲ ಅನ್ನೋ ಮಾತು ಕೇಳಿಬರ್ತಿದೆ.

ನಟಿ ಸಾಯಿ ಪಲ್ಲವಿ ಅಂದ್ರೆ ನಮಗೆ ನೆನಪಾಗೋದೇ ಅವರ ಸಭ್ಯತೆ ಮತ್ತು ಸಂಪ್ರದಾಯಬದ್ಧ ನಟನೆ. ನ್ಯಾಚುರಲ್‌ ಸ್ಕಿನ್‌ ಟೋನ್‌.. ಇನ್ನು ಡ್ಯಾನ್ಸ್​ ವಿಚಾರಕ್ಕೆ ಬಂದ್ರೆ ಸಾಯಿಪಲ್ಲವಿ ಬಗ್ಗೆ ಹೀಗೆಳೆಯೋ ಮಾತೆ ಇಲ್ಲ. ಪ್ರೇಮಂ, ಫಿದಾ, ಶ್ಯಾಮ್​ ಸಿಂಗ್​ ರಾಯ್​ನಲ್ಲಿ ಅವರ ಅದ್ಭುತ ನಟನೆಗೆ ಫ್ಯಾನ್ಸ್‌ ಫಿದಾ ಆಗಿದ್ರು. ಇಷ್ಟು ದಿನ ನಟಿ ಬಗ್ಗೆ ಪಾಸಿಟಿವ್‌ ಕಮೆಂಟ್ಸ್‌ ಬರ್ತಿತ್ತು. ಆದ್ರೆ ರಾಮಾಯಣ ವಿಚಾರದಲ್ಲಿ ನಟಿಯನ್ನ ಟಾರ್ಗೆಟ್‌ ಮಾಡಲಾಗಿದೆ. ರಾಮಾಯಣ ಸಿನಿಮಾದಲ್ಲಿ ಸೀತಾ ಮಾತೆಯಾಗಿ ಆಯ್ಕೆಯಾಗಿರುವ ಸಾಯಿಪಲ್ಲವಿ ಆ ಪಾತ್ರಕ್ಕೆ ಸೂಟ್‌ ಆಗ್ತಿಲ್ಲ ಅಂತ ಅನೇಕರು ತಗಾದೆ ಎತ್ತಿದ್ದಾರೆ. ಸೀತಾ ಮಾತೆಯ ಕೂದಲು ಗುಂಗುರಾಗಿರಲಿಲ್ಲ. ಸಾಯಿಪಲ್ಲವಿಗಿಂತ ಸೀತಾಮಾತೆ ಸೌಂದರ್ಯವತಿ.. ಇನ್ನು ಈ ಸಿನಿಮಾದಲ್ಲಿ ಅವ್ರ ಕಾಸ್ಟೂಮ್‌ ಈ ಕಾಲಕ್ಕೆ ತಕ್ಕಂತೆ ಡಿಸೈನ್‌ ಮಾಡಲಾಗಿದೆ. ಇದು ಮಾರ್ಡ್ರನ್‌ ಸೀತೆ.. ‘ಸಾಯಿ ಪಲ್ಲವಿ ಮೊಗದಲ್ಲಿ ಸೀತೆಯ ದೈವಿಕ ಕಳೆಯೇ ಇಲ್ಲ.. ಶಾಸ್ತ್ರಗಳಲ್ಲಿ ವರ್ಣಿಸಿರುವ  ಸೀತೆ ಮಾತೆಯ ದಿವ್ಯ ಸೌಂದರ್ಯಕ್ಕೆ ಅವರು ಹೊಂದಿಕೆ ಆಗ್ತಿಲ್ಲ ಅನ್ನುವ ಮೀಮ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಇನ್ನು ಕೆಲವರಂತೂ ಸಾಯಿ ಪಲ್ಲವಿಗಿಂತ ರಕುಲ್ ಪ್ರೀತ್ ಹೆಚ್ಚು ಸುಂದರಿ ಎಂದು ಜಗತ್ತಿಗೆ ತಿಳಿಸಲು ನಮಿತ್ ಮಲ್ಹೋತ್ರಾ 4 ಸಾವಿರ ಕೋಟಿ ರೂಪಾಯಿಗಳ ರಾಮಾಯಣವನ್ನು ಮಾಡಿದ್ದಾರೆ ಟ್ರೋಲ್‌ ಮಾಡ್ತಿದ್ದಾರೆ. ಇದೆಲ್ಲಾ ಒಂದ್ಕಡೆಯಾದ್ರೆ ಇನ್ನೊಂದ್ಕಡೆ ನಟಿ ಸಾಯಿ ಪಲ್ಲವಿ ಈ ಹಿಂದೆ ತಮ್ಮ ಹೊಸ ಸಿನಿಮಾ ಪ್ರಚಾರದ ವೇಳೆ ನನಗೆ ಹಿಂದಿ ಅಷ್ಟಾಗಿ ಬರೋದಿಲ್ಲ ಎಂದು ಹೇಳಿದ ವಿಡಿಯೋ ವೈರಲ್ ಆಗಿದೆ. ಇದನ್ನೇ ಆಧಾರ ಮಾಡಿಕೊಂಡು ಕೆಲವರು ಸೀತೆಯ ಪಾತ್ರದ ಬಗ್ಗೆ ತಕರಾರು ಎತ್ತಿದ್ದಾರೆ.

ಇನ್ನು ಇನ್ನೊಂದು ವಿಚಾರ ಏನಂದ್ರೆ ನಟಿ ಸಾಯಿ ಪಲ್ಲವಿ ಯಾವತ್ತೂ ಓವರ್‌ ಮೇಕಪ್‌ ಮಾಡಿಕೊಳ್ಳಲ್ಲ. ತೆರೆಯ ಮೇಲೆ ಹಾಗೂ ನಾರ್ಮಲ್‌ ಡೇಸ್‌ನಲ್ಲೂ ಮೇಕಪ್‌ ಮಾಡಿಕೊಳ್ಳಲ್ಲ. ಇದಕ್ಕೆ ಕಾರಣ ಏನು ಅನ್ನೋದ್ರ ಬಗ್ಗೆ ಕೂಡ ನಟಿ ಈ ಹಿಂದೆ ಮಾತನಾಡಿದ್ದಾರೆ. ನಟಿ ಸಾಯಿ ಪಲ್ಲವಿಗೆ ಮುಖದಲ್ಲಿ ತುಂಬಾ ಪಿಂಪಲ್ಸ್‌ ಇದೆ. ಇದ್ರ ಜೊತೆಗೆ ನಟಿ ರೋಸೇಶಿಯಾ ಅನ್ನೋ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೋಸೇಶಿಯಾ ಅನ್ನೋದು ದೀರ್ಘಕಾಲದ ಚರ್ಮದ ಸಮಸ್ಯೆಯಾಗಿದೆ. ಇದ್ರಿಂದಾಗಿ ಸ್ಕಿನ್‌ ತುಂಬಾ ರೆಡ್‌ ಆಗುತ್ತೆ. ಮುಖದಲ್ಲಿ ಇರಿಟೇಷನ್‌ ಶುರುವಾಗುತ್ತೆ. ಜೊತೆಗೆ ಮುಖದಲ್ಲಿ ತುಂಬಾ ಪಿಂಪಲ್ಸ್‌ ಬರುತ್ತೆ. ಸಾಯಿ ಪಲ್ಲವಿ ಕೂಡ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟಿ, ಪ್ರೇಕ್ಷಕರು ತನ್ನನ್ನು ತಾನು ಇರುವಂತೆಯೇ ಅಪ್ಪಿಕೊಂಡ ನಂತರ ತನ್ನನ್ನು ತಾನು ಒಪ್ಪಿಕೊಳ್ಳುವುದು ಸುಲಭವಾಯಿತು. ಜನರು ನನ್ನನ್ನು ಮೊಡವೆ ಇರುವ ಹುಡುಗಿಯಾಗಿ ಒಪ್ಪಿಕೊಂಡಾಗ, ಆತ್ಮವಿಶ್ವಾಸವೇ ನಿಜವಾದ ಸೌಂದರ್ಯ ಎಂದು ನಾನು ಕಲಿತಿದ್ದೇನೆ ಎಂದಿದ್ದಾರೆ.

ಒಟ್ಟಾರೆ ರಾಮಾಯಣ ಸೀತೆ ಪಾತ್ರದ ಕಾಂಟ್ರವರ್ಸಿಯಿಂದಾಗಿ ಇದೆಲ್ಲಾ ಈ ವಿಚಾರಗಳೆಲ್ಲಾ ಮತ್ತೆ ಮುನ್ನಲೆಗೆ ಬಂದಿದೆ. ಕೆಲವರು ಸಾಯಿಪಲ್ಲವಿ ಪರ ಬ್ಯಾಟ್‌ ಬೀಸಿದ್ರೆ, ಇನ್ನೂ ಕೆಲವರು ಅವರ ಪಾತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿವಾದ ಕೇವಲ ಒಬ್ಬ ನಟಿಯ ಆಯ್ಕೆಯ ವಿಚಾರವಷ್ಟೇ ಅಲ್ಲದೆ, ಪೌರಾಣಿಕ ಮಹಿಳಾ ಪಾತ್ರಗಳನ್ನು ಸಮಾಜ ಯಾವ ದೃಷ್ಟಿಯಿಂದ ನೋಡುತ್ತದೆ ಎಂಬುದರ ಬಗ್ಗೆ ವಾದ – ವಿವಾದ ಶುರುವಾಗಿದೆ. ಇದೀಗ ರಾಮಾಯಣದ ಸೀತೆಯಂತೆ ನಟಿ ಸಾಯಿ ಪಲ್ಲವಿಗೂ ಅಗ್ನಿ ಪರೀಕ್ಷೆ ಶುರುವಾಗಿದೆ. ಈ ವಿವಾದ ಇಲ್ಲಿಗೆ ತಣ್ಣಗಾಗುತ್ತಾ ಅಂತ ಕಾದು ನೋಡ್ಬೇಕು.

Shwetha M

Leave a Reply

Your email address will not be published. Required fields are marked *