ಲಂಕೆಯಲ್ಲಿ KL & ಪಡಿಕ್ಕಲ್ ಪರಾಕ್ರಮ – ಟೀಂ ಇಂಡಿಯಾಗೆ ಕೈಕೊಡುತ್ತಾ ಬ್ಯಾಟಿಂಗ್?
ಪ್ರಾಕ್ಟೀಸ್ ಆದ್ರೂ ಅಲರ್ಟ್ ಮೆಸೇಜ್!

ಲಂಕೆಯಲ್ಲಿ KL & ಪಡಿಕ್ಕಲ್ ಪರಾಕ್ರಮ – ಟೀಂ ಇಂಡಿಯಾಗೆ ಕೈಕೊಡುತ್ತಾ ಬ್ಯಾಟಿಂಗ್?ಪ್ರಾಕ್ಟೀಸ್ ಆದ್ರೂ ಅಲರ್ಟ್ ಮೆಸೇಜ್!

ಶ್ರೀಲಂಕಾ ವಿರುದ್ಧ ಪ್ರಾಕ್ಟೀಸ್ ಮ್ಯಾಚ್ ಆಡ್ತಿರೋ ಭಾರತ ಇಲ್ಲೂ ಕೂಡ ತನ್ನ ಎಕ್ಸ್​ಪೆರಿಮೆಂಟ್ಸ್ ಬಿಟ್ಟಿಲ್ಲ. ಎರಡನೇ ದಿನದಾಟದಲ್ಲಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಒನ್ಸ್ ಅಗೇನ್ ಆರ್ಡರ್ ಬದಲಲಾಯಿಸದ್ರು. ಖಾತೆ ತೆರೆಯೋ ಮೊದ್ಲೇ ವಿಕೆಟ್ ಕಳ್ಕೊಂಡಿದ್ದ ಭಾರತಕ್ಕೆ ಕನ್ನಡಿಗರೇ ಆಸರೆಯಾದ್ರು.

ಇದನ್ನೂ ಓದಿ : Warm-Up ಪಂದ್ಯದಲ್ಲೂ ತಡಕಾಡಿದ ಭಾರತ – ಫೀಲ್ಡಿಂಗ್ ಫೇಲ್ಯೂರ್ ಗೆ ಕೊನೆ ಇಲ್ವಾ?

ಭಾರತ ಹಾಗೇ ಲಂಕಾ ನಡುವೆ ಮೂರು ದಿನಗಳ ವಾರ್ಮ್ ಅಪ್ ಪಂದ್ಯ ಶುಕ್ರವಾರದಿಂದ ಸ್ಟಾರ್ಟ್ ಆಗಿದೆ. ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಂಡಿದ್ದ ಲಂಕಾ ತಂಡ 8 ವಿಕೆಟ್ ನಷ್ಟಕ್ಕೆ 363 ರನ್ ಗಳಿಸಿ ಡಿಕ್ಲೇರ್ ಘೋಷಿಸಿದ್ರು. ಹೀಗಾಗಿ ಭಾರತ ಮೊದಲ ಇನ್ನಿಂಗ್ಸ್ ಸ್ಟಾರ್ಟ್ ಮಾಡಿತ್ತು. ಭಾರತದ ಪರ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹಲ್ ಇನ್ನಿಂಗ್ಸ್ ಓಪನ್ ಮಾಡಿದ್ರು. ಬ್ಯಾಡ್​ಲಕ್ ಏನಂದ್ರೆ ಭಾರತ ಖಾತೆ ತೆರೆಯೋ ಮೊದ್ಲೇ ವಿಕೆಟ್ ಕಳೆದುಕೊಳ್ಳಬೇಕಾಯ್ತು. ಇಂಥಾ ಟೈಮಲ್ಲಿ ಕನ್ನಡಿಗರು ಆಸರೆಯಾದ್ರು.

ಲಂಕಾ ನಾಡಲ್ಲಿ ಪಡಿಕ್ಕಲ್ ಪವರ್!

ಮೊದಲನೇ ಓವರ್ ನಲ್ಲೇ ವಿಶ್ವ ಫರ್ನಾಂಡೋಗೆ ವಿಕೆಟ್ ಒಪ್ಪಿಸಿದ ಜೈಸ್ವಾಲ್

ಕೆಎಲ್ ರಾಹುಲ್ ಮತ್ತು ದೇವದತ್ ಪಡಿಕ್ಕಲ್ ನಡುವೆ 96 ರನ್ಸ್ ಜೊತೆಯಾಟ

40 ರನ್ ಗಳಿಸಿ ಸೆಟಲ್ ಆಗಿದ್ದ ರಾಹುಲ್ ಕೇಶಾರ ನುವಾಂತಗೆ ವಿಕೆಟ್

ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ ದೇವದತ್ ಪಡಿಕ್ಕಲ್ & ಜಡೇಜಾ

103 ರನ್ ಗಳಿಸಿ ಪಡಿಕ್ಕಲ್, 63 ರನ್ ಗಳಿಸಿ ಜಡೇಜಾ ರಿಟೈರ್ಡ್ ಔಟ್

ನಿರಾಸೆ ಮೂಡಿಸಿದ ಪಂತ್(2) & ಜುರೇಲ್ (1).. ಮಾನವ್ ಸುತಾರ್ ಬೆಟರ್

ಇದೇನು ಅಧಿಕೃತ ಮ್ಯಾಚ್ ಅಲ್ಲ. ಜಸ್ಟ್ ಪ್ರಾಕ್ಟೀಸ್. ಸೋ ಬೇಗ ಔಟ್ ಆಗಿದ್ರೂ ದೊಡ್ಡ ಮ್ಯಾಟ್ರ್ ಆಗಲ್ಲ. ಆದ್ರೆ ಮುಂದಿನ ಪಂದ್ಯಕ್ಕೆ ಇದು ಅಟ್​ಲೀಸ್ಟ್ ಒಂದು ಪಿಕ್ಚರ್ ಅಂತೂ ಕೊಟ್ಟಿದೆ. ಲಂಕಾ ಪರ ಮೊದಲ ಇಬ್ಬರು ಬ್ಯಾಟರ್ಸ್ ಅರ್ಧಶತಕ, ಹಾಗೇ ಟಾಪ್ ಸಿಕ್ಸ್ ಬ್ಯಾಟರ್ಸ್ 30+ ರನ್ಸ್ ಬಂದಿತ್ತು. ಆದ್ರೆ ಭಾರತದ ಪರ ಎಲ್ರಿಂದಲೂ ರನ್ಸ್ ಬಂದಿಲ್ಲ ಸೋ ಇದ್ರ ಬಗ್ಗೆ ಸ್ವಲ್ಪ ಯೋಚನೆ ಮಾಡ್ಬೇಕಾಗುತ್ತೆ.

Shantha Kumari

Leave a Reply

Your email address will not be published. Required fields are marked *