ವಿಶ್ವಕಪ್‌ಗೆ ಮಾತ್ರನಾ ಬುಮ್ರಾ? 3 ವರ್ಷಕ್ಕೆ ಮೂರೇ ಪಂದ್ಯ ಸಾಕಾ?

ವಿಶ್ವಕಪ್‌ಗೆ ಮಾತ್ರನಾ ಬುಮ್ರಾ?  3 ವರ್ಷಕ್ಕೆ ಮೂರೇ ಪಂದ್ಯ ಸಾಕಾ?

 

ಜಸ್ಪ್ರೀತ್ ಬುಮ್ರಾ..  ಟೀಂ ಇಂಡಿಯಾ ಪಾಲಿನ ದೇವರು.. ಆಪತ್ಬಾಂಧವ.. ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ಭಾರತ ಅದೆಷ್ಟೋ ಪಂದ್ಯಗಳನ್ನ ಗೆದ್ದಿದೆ. ಬುಮ್ರಾ ಇದ್ದಾರೆ ಅಂದ್ರೆ ಭಾರತಕ್ಕೆ ಬ್ರಹ್ಮಾಸ್ತ್ರವಿದ್ದಂತೆ. ಬೌಲಿಂಗ್‌ಗೆ ಭೀಮ ಬಲವಿದ್ದಂತೆ. 2026ರ ವಿಶ್ವಕಪ್‌ ಟೀಂ ಇಂಡಿಯಾ ಗೆಲ್ಲೋಕೆ ಬುಮ್ರಾ ಬಲಿಷ್ಠ ಬೌಲಿಂಗ್ ಕೂಡ ಕಾರಣ. ಆದ್ರೆ ಬುಮ್ರಾಗೆ ಬೆನ್ನು ಬಿಡಂತೆ ಕಾಡುತ್ತಿರುವುದು ಇಂಜುರಿ ಭೂತ. ಕಳೆದು 3 ವರ್ಷಗಿಳಿಂದ ಬುಮ್ರಾ ಟೀಂ ಇಂಡಿಯಾದಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲ ಅನ್ನೋ ರೀತಿಯಲ್ಲಿ ಇದ್ದಾರೆ.  ಟೀಂ ಇಂಡಿಯಾ ಗೆಲ್ಲಲೇ ಬೇಕು ಅನ್ನೋ ಇಕ್ಕಟಿಗೆ ಸಿಲುಕಿದಾಗಲೆಲ್ಲಾ ಬುಮ್ರಾ ಕೈ ಕೊಡ್ತಾ ಇದ್ದಾರೆ.

ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ನಲ್ಲಿ ರಹಾನೆ ಯುಗಕ್ಕೆ ತೆರೆ – ವಿದೇಶಿ ಲೀಗ್‌ನತ್ತ ಅಜಿಂಕ್ಯ ಪಯಣ

ಜಸ್ಪ್ರೀತ್ ಬುಮ್ರಾ ಬೌಲಿಂಗ್‌​ ಅಟ್ಯಾಕ್​ಗೆ ಎದುರಾಳಿ ಅಕ್ಷರಶಃ ಬೆಚ್ಚಿ ಬೀಳ್ತಾರೆ.  ಬೌಲಿಂಗ್​ನಲ್ಲಿ  ಮ್ಯಾಜೀಕ್ ಯಾರಾದ್ರೂ ಮಾಡ್ತಾರೆ ಅಂದ್ರೆ ಅದು ಜಸ್ಪ್ರೀತ್ ಬುಮ್ರಾ ಮಾತ್ರನೇ. ಇವರು ಹಾಕೋ ಪ್ರತೀ ಬಾಲ್​ ಕೂಡ ಬ್ಯಾಟರ್​ಗಳ ಎದೆ ನಡುಗಿಸಿ ಬಿಡುತ್ತೆ.  ಆದ್ರೆ ಈಗ ಬುಮ್ರಾಗೆ ಇಂಜುರಿ ಭೂತ ಇನ್ನಿಲ್ಲಂತೆ ಕಾಡ್ತಿದೆ. ಲಂಕಾ ಟೆಸ್ಟ್ ಸರಣಿಗೂ ಬುಮ್ರಾ ಆಡುತ್ತಿಲ್ಲ. ಲಂಕಾ ಸರಣಿ WTC ದೃಷ್ಟಿಯಿಂದ ತುಂಬಾ ಮುಖ್ಯವಾದ ಪಂದ್ಯ. ಪಾಯಿಂಟ್ಸ್ ಟೇಬಲ್‌ನಲ್ಲಿ ಟಾಪ್‌ನಲ್ಲಿ ಬರಬೇಕಾದ್ರೆ ಲಂಕಾ ಸರಣಿಯನ್ನ ಟೀಂ ಇಂಡಿಯಾ ಗೆಲ್ಲಲೇ ಬೇಕು. ಈ ಟೈಂಗೆ ಬುಮ್ರಾ ಕೈ ಕೊಟ್ಟಿದ್ದು, ಟೀಂ ಇಂಡಿಯಾದಲ್ಲಿ ಆತಂಕ ಮನೆ ಮಾಡಿದೆ. ಜಸ್ಪ್ರೀತ್ ಬುಮ್ರಾ ಅತೀ ಮುಖ್ಯವಾದ ಪಂದ್ಯಗಳಲ್ಲಿ ಟೈಂ ಇಂಜುರಿಗೆ ಒಳಗಾಗುತ್ತಿದ್ದು, ಕಳೆದ 3 ವರ್ಷದಲ್ಲಿ ಕೆಲವೇ ಕೆಲ ಪಂದ್ಯಗಳನ್ನ  ಮಾತ್ರ ಆಡಿದ್ದಾರೆ.

ಕಳೆದ 3 ವರ್ಷದಿಂದ ಬುಮ್ರಾ ಕಂಪ್ಲೀಟ್ ಡಲ್      

ಭಾರತ ತಂಡ 2027ರ ವಿಶ್ವಕಪ್ ಗೆಲ್ಲುವ ಹಠ ಹೊಂದಿದೆ. ಆದರೆ ತಂಡದ ಬೌಲಿಂಗ್ ಆಧಾರ ಸ್ತಂಭವಾಗಿರುವ ಬುಮ್ರಾ ಗಾಯ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಒಂದು ವೇಳೆ ವಿಶ್ವಕಪ್ ಟೈಂನಲ್ಲಿ ಕೈ ಕೊಟ್ರೆ ಹೇಗೆ ಅನ್ನೋ ಆತಂಕ ಎದುರಾಗಿದೆ. 2023ರ ಏಕದಿನ ವಿಶ್ವಕಪ್ ಫೈನಲ್‌ನ ನಂತರ ಬುಮ್ರಾ ಮೂರು ಸ್ವರೂಪದಲ್ಲಿ ಕೆಲವೇ ಪಂದ್ಯಗಳಲ್ಲಿ ಮಾತ್ರ ಬುಮ್ರಾ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ಬುಮ್ರಾ ಕಳೆದ 3 ವರ್ಷಗಳಲ್ಲಿ ಆಡಿರೋ ಪಂದ್ಯಗಳ ಅಂಕಿ ಅಂಶಗಳನ್ನ ನೋಡೋಣ ಬನ್ನಿ..

2023 ರ ಏಕದಿನ ವಿಶ್ವಕಪ್ ನಂತರ, ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಅತಿ ಕಡಿಮೆ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನವೆಂಬರ್ 19, 2023 ರಂದು ವಿಶ್ವಕಪ್ ಫೈನಲ್ ಆಡಿದ್ದ ಬುಮ್ರಾ ಆ ನಂತರ ತಂಡಕ್ಕೆ ಮರಳಿದ್ದು 2026ರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ.  970 ದಿನಗಳಲ್ಲಿ ಬುಮ್ರಾ ಆಡಿದ್ದು   ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ.  ಭಾರತ ತಂಡ ಒಟ್ಟು 29 ಏಕದಿನ ಪಂದ್ಯಗಳನ್ನು ಆಡಿದ್ದು, ಬುಮ್ರಾ 26 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ.  ಏಕದಿನ ಪಂದ್ಯಗಳಲ್ಲಿ ಮಾತ್ರವಲ್ಲದೆ  ಟೆಸ್ಟ್ ಮತ್ತು ಟಿ20 ಸ್ವರೂಪಗಳಿಂದ ನಿರಂತರವಾಗಿ ಹೊರಗುಳಿದಿದ್ದಾರೆ. 2023 ರಿಂದ ಬುಮ್ರಾ ಅವರ ಲಭ್ಯತೆಯನ್ನು ಪರಿಗಣಿಸಿ, ಅವರು ಟೀಮ್ ಇಂಡಿಯಾ ಪರ ಕೇವಲ 22 ರೆಡ್-ಬಾಲ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಟೈಂನಲ್ಲಿ ಭಾರತ ತಂಡ ಒಟ್ಟು 27 ಟೆಸ್ಟ್ ಪಂದ್ಯಗಳನ್ನು ಆಡಿದ್ದು,  ಐದು ಟೆಸ್ಟ್ ಪಂದ್ಯಗಳನ್ನ ಆಡಿಲ್ಲ.  ಹಾಗಂತ ಟಿ20 ಕ್ರಿಕೆಟ್‌ನಲ್ಲಿ ಆಡಿದ್ದಾರಾ ಅಂತ ನೋಡಿದ್ರೆ ಅಲ್ಲೂ ಇಲ್ಲ. 2023ರ ಏಕದಿನ ವಿಶ್ವಕಪ್ ನಂತರ, ಟೀಮ್ ಇಂಡಿಯಾ ಒಟ್ಟು 78 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಬುಮ್ರಾ ಕೇವಲ 33 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಅಂದರೆ ಗಾಯ ಅಥವಾ ಕೆಲಸದ ಹೊರೆ ನಿರ್ವಹಣೆಯಿಂದಾಗಿ ಅವರು 45 ಟಿ20 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ) ಕಳೆದ 3 ವರ್ಷಗಳಿಂದ ಬುಮ್ರಾ ಸಾಕಷ್ಟು ಪಂದ್ಯಗಳನ್ನ ಗಾಯದ ಕಾರಣಗಳಿಂದ ತಪ್ಪಿಸಿಕೊಂಡಿದ್ದಾರೆ. ಅತೀ ಮುಖ್ಯವಾದ ಪಂದ್ಯಕ್ಕೆ ಬುಮ್ರಾ ಅಲಭ್ಯರಾಗಿದ್ದಾರೆ.

ಈಗ ಕೂಡ  ಶ್ರೀಲಂಕಾದ 2 ಟೆಸ್ಟ್ ಪಂದ್ಯದ ಸರಣಿಗೆ ಬುಮ್ರಾ  ಆಡುತ್ತಿಲ್ಲ. ಅದ್ದಕ್ಕೆ ಕಾರಣ ಗಾಯದ ಸಮಸ್ಯೆ. ಬಿಸಿಸಿಐ ಕೂಡ ಬುಮ್ರಾಗೆ ಸಂಪೂರ್ಣ ವಿಶ್ರಾಂತಿ ನೀಡಿ ಸಂಪೂರ್ಣ ಫಿಟ್ ಆಗಲು ಅವಕಾಶ ನೀಡಲಾಗುತ್ತದೆ. ಇದರಿಂದ ಸುದೀರ್ಘ ಕರಿಯರ್ ಹಾಗೂ ಟೀಂ ಇಂಡಿಯಾಗೂ ನೆರವಾಗಲಿದೆ. 2027ರ ವಿಶ್ವಕಪ್ ದೃಷ್ಟಿಯನ್ನ ಗಮನದಲ್ಲಿ ಇಟ್ಟುಕೊಂಡು ಬುಮ್ರಾನ ಆಡಿಸಬೇಕಿದೆ.

Kishor KV

Leave a Reply

Your email address will not be published. Required fields are marked *