ತಮಿಳುನಾಡು ಸಿಎಂ ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ವಾಪಸ್ ಪಡೆದಿದ್ದೇಕೆ? – ಸಂಗೀತಾ ನಿರ್ಧಾರಕ್ಕೆ ಇದೇ ಕಾರಣ!

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ. ಆರು ತಿಂಗಳ ಹಿಂದೆ ಸದ್ದಿಲ್ಲದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಸಂಗೀತಾ, ಈಗ ಅರ್ಜಿ ವಾಪಸ್ ಪಡೆದಿದ್ದು, ವಿಜಯ್ ಅಭಿಮಾನಿಗಳ ಸಂಭ್ರಮ ಹೇಳತೀರದಾಗಿದೆ. ಆದರೆ, ಇದರ ಹಿಂದಿನ ಕಾರಣ ಏನಿರಬಹುದು ಎಂಬ ಕುತೂಹಲ ಗರಿಗೆದರಿದೆ.
ಇದನ್ನೂ ಓದಿ:ಊಟ ಸೇರಲ್ಲ.. ನಿದ್ದೆ ಮಾಡಲ್ಲ -ಜೈಲಲ್ಲಿದ್ದ ನಟ ದರ್ಶನ್ ಪಾಡು ಯಾರಿಗೂ ಬೇಡ
ತಮಿಳುನಾಡು ಸಿಎಂ ವಿಜಯ್ ಬದುಕಲ್ಲಿ ಬೀಸಿದ ಬಿರುಗಾಳಿ ಈಗ ತಣ್ಣಗಾಗಿದೆ. ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ವಿಜಯ್ ಅವರು ಬೇರೊಬ್ಬ ನಟಿಯ ಜೊತೆ ಸಂಬಂಧ ಹೊಂದಿದ್ದಾರೆ ಮತ್ತು ಈ ವಿಷಯ ತಮಗೆ 2021ರಲ್ಲಿಯೇ ತಿಳಿಯಿತು ಎಂದು ಆರೋಪಿಸಿದ್ದರು. ಅಲ್ಲದೇ ದಾಂಪತ್ಯ ಜೀವನದಲ್ಲಿ ವಿಜಯ್ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಜೊತೆದೆ ವಿಜಯ್ ದಂಪತಿ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು.
ಆದರೆ, ಸಂಗೀತಾ ತಮ್ಮ ಅರ್ಜಿಯಲ್ಲಿ ಯಾವುದೇ ನಟಿಯ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ. ವಿಜಯ್ ಅಥವಾ ತ್ರಿಷಾ ಕೂಡ ಈ ವದಂತಿಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಕೂಡಾ ನೀಡಿರಲಿಲ್ಲ. ಆದರೆ, ತ್ರಿಷಾ ಮತ್ತು ವಿಜಯ್ ಹೆಸರು ವಿಜಯ್ ಅವರ ರಾಜಕೀಯ ಜೀವನಕ್ಕೆ ಕಿರಿಕಿರಿ ಉಂಟು ಮಾಡುತ್ತಲೇ ಇತ್ತು. ಇದೀಗ ಆಗಸ್ಟ್ 7 ರಂದು ಸಂಗೀತಾ ಅವರು ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ. ಇದಕ್ಕೆ ಕಾರಣ ಏನಿರಬಹುದು ಅನ್ನೋ ಲೆಕ್ಕಾಚಾರ ಸಾಗಿದೆ. ಕುಟುಂಬದ ಹಿರಿಯರು ಅಥವಾ ಸ್ನೇಹಿತರ ಮಧ್ಯಸ್ಥಿಕೆಯಲ್ಲಿ ದಂಪತಿ ನಡುವಿನ ಭಿನ್ನಾಭಿಪ್ರಾಯ ಬಗೆಹರಿದಿರಬಹುದು. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಮತ್ತೆ ಒಂದಾಗಲು ನಿರ್ಧರಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೇ 2026ರಲ್ಲಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂತಹ ಉನ್ನತ ಸ್ಥಾನದಲ್ಲಿರುವಾಗ ವೈಯಕ್ತಿಕ ಬದುಕಿನ ವಿವಾದಗಳು ರಾಜಕೀಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರಬಹುದು ಎಂದು ಬಲ್ಲ ಮೂಲಗಳು ತಿಳಿಸಿವೆ.
ವಿಚ್ಛೇದನಕ್ಕಾಗಿ ಪರಸ್ಪರ ಕಿತ್ತಾಡುವ ಬದಲು ಇಬ್ಬರೂ ಒಪ್ಪಿಗೆಯ ಮೇರೆಗೆ ಪ್ರತ್ಯೇಕವಾಗಲು ನಿರ್ಧರಿಸಿರಬಹುದು. ಅದಕ್ಕಾಗಿ ಹಳೆಯ ಅರ್ಜಿಯನ್ನು ವಾಪಸ್ ಪಡೆದಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಕಾರಣ ಏನೇ ಇರಲಿ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಮತ್ತು ಸಂಗೀತಾ ಅವರ ಸಂಸಾರ ಮತ್ತೆ ಸುಗಮವಾಗಿ ಸಾಗಲಿ ಅನ್ನೋದು ಅಭಿಮಾನಿಗಳ ಆಶಯ.

ನೋಡಿರಿ

