BCCI ವಿರುದ್ಧ ಬುಸುಗುಟ್ಟಿದ ಸರ್ಫರಾಜ್ ಖಾನ್ – ಸೆಂಚುರಿ ಹೊಡೆದ್ರೂ ಅವಕಾಶ ಯಾಕಿಲ್ಲ?
Come Back ಚಾಲೆಂಜ್ ಗೆಲ್ತಾರಾ?

BCCI ವಿರುದ್ಧ ಬುಸುಗುಟ್ಟಿದ ಸರ್ಫರಾಜ್ ಖಾನ್ – ಸೆಂಚುರಿ ಹೊಡೆದ್ರೂ ಅವಕಾಶ ಯಾಕಿಲ್ಲ?Come Back ಚಾಲೆಂಜ್ ಗೆಲ್ತಾರಾ?

ಭಾರತ ಟೆಸ್ಟ್ ತಂಡದಲ್ಲಿ ಆಡಲು ಎಲ್ಲಾ ಅರ್ಹತೆ ಇದ್ರೂ ಪದೇಪದೆ ನಿರ್ಲಕ್ಷ್ಯಕ್ಕೆ ಒಳಗಾಗ್ತಿರೋ ಮತ್ತೊಬ್ಬ ಪ್ರತಿಭಾವಂತ ಆಟಗಾರ ಅಂದ್ರೆ ಸರ್ಫರಾಜ್ ಖಾನ್. ಈಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ಇನ್ನೊಂದೇ ವಾರ ಬಾಕಿ ಇದ್ದಾಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ : Warm-Up ಪಂದ್ಯದಲ್ಲೂ ತಡಕಾಡಿದ ಭಾರತ – ಫೀಲ್ಡಿಂಗ್ ಫೇಲ್ಯೂರ್ ಗೆ ಕೊನೆ ಇಲ್ವಾ?

ಟೀಮ್ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯ್ತಿರೋ ಒನ್ ಆಫ್ ದಿ ಟ್ಯಾಲೆಂಟೆಡ್ ಪ್ಲೇಯರ್ ಸರ್ಫರಾಜ್ ಖಾನ್. ಕಳೆದ ಸರಣಿಯಲ್ಲಿ ಶತಕ ಸಿಡಿಸಿದ್ದರೂ ಮ್ಯಾನೇಜ್​ಮೆಂಟ್ ಮಾತ್ರ ಇಗ್ನೋರ್ ಮಾಡ್ತಿದೆ. ಪ್ರಸ್ತುತ ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುತ್ತಿರುವ ಭಾರತದ ಆಟಗಾರರ ತಂಡದಲ್ಲಿದ್ದರೂ, ಪ್ರಮುಖ ಟೆಸ್ಟ್ ಸರಣಿಯ 15 ಸದಸ್ಯರ ಅಧಿಕೃತ ತಂಡದಿಂದ ಅವರು ಹೊರಗುಳಿದಿದ್ದಾರೆ. ಈ ಅಸಮಾಧಾನವನ್ನ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಸರ್ಫರಾಜ್ ಖಾನ್ ಹೊರಹಾಕಿದ್ದಾರೆ.

ಲಂಕಾ ಸರಣಿಗೂ ಆಯ್ಕೆ ಮಾಡದ್ದಕ್ಕೆ ಅಸಮಾಧಾನದ ಪೋಸ್ಟ್!

ಭಾರತ ಟೆಸ್ಟ್ ತಂಡದಲ್ಲಿ ಆಡುವಂಥ ಎಲ್ಲಾ ಕ್ವಾಲಿಟಿಸ್ ಇರುವಂಥ ಸರ್ಫರಾಜ್ ಖಾನ್​ಗೆ ಅವಕಾಶ ಸಿಕ್ಕಿಲ್ಲ. ಇದೀಗ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಈ ಸಿಟ್ಟನ್ನ ಹೊರ ಹಾಕಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತುಂಬಾನೇ ಎಮೋಷನಲ್ ಆದಂಥ ಫೋಟೋ ಹಂಚಿಕೊಂಡಿರುವ ಸರ್ಫರಾಜ್ ಖಾನ್, ಐ ಮೆ ನಾಟ್ ಫಿಟ್ ಇನ್, ಬಟ್ ಐ ವಿಲ್ ಫೈಟ್ ವಿತ್ ಎವರಿಥಿಂಗ್  ಐ ಹ್ಯಾವ್ ಗಾಟ್ ಅಂದ್ರೆ ನಾನು ಇದಕ್ಕೆ ಸೂಕ್ತವಾಗಿಲ್ಲದಿರಬಹುದು, ಆದರೆ ಹೋರಾಟ ಮುಂದುವರಿಸುತ್ತೇನೆ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಅವರ ಇದೇ ಮಾತುಗಳು ಟೀಮ್ ಇಂಡಿಯಾ ಸೆಲೆಕ್ಷನ್ ವಿರುದ್ಧ ಇನ್ ಡೈರೆಕ್ಟ್ ಆಗಿ ಬೇಸರ ಹೊರಹಾಕಿದ್ದಾರೆ ಅನ್ನೋ ಚರ್ಚೆ ಹುಟ್ಟುಹಾಕಿದೆ. ಅದೂ ಅಲ್ದೇ ಸರ್ಫರಾಜ್ ಕ್ವಾಲಿಟಿ ಪ್ಲೇಯರ್.

ಶತಕ ಬಾರಿಸಿದ್ರೂ ತಂಡದಿಂದ ಹೊರಬಿದ್ದ ಸರ್ಫರಾಜ್ ಖಾನ್!

ಆರಂಭದಲ್ಲಿ ಸರ್ಫರಾಜ್ ಖಾನ್​ ಫಿಟ್ ಆಗಿಲ್ಲ. ಬಾಡಿ ವೇಯ್ಟ್ ಜಾಸ್ತಿ ಇದೆ ಅಂತಾ ತಂಡದಿಂದ ಹೊರಗಿಟ್ರು. ಸೋ ಇದನ್ನೇ ಚಾಲೆಂಜ್ ಆಗಿ ತಗೊಂಡ ಸರ್ಫರಾಜ್ ತೂಕ ಇಳಿಸಿ ಫಿಟ್ ಌಂಡ್ ಫೈನ್ ಆಗಿದ್ರು.  ಅದೆಲ್ಲಕ್ಕಿಂಯ ಮುಖ್ಯವಾಗಿ ಅವ್ರು ಭಾರತದ ಪರ ಕೊನೇದಾಗಿ ಆಡಿದ್ದ ಮ್ಯಾಚಲ್ಲಿ ಶತಕ ಬಾರಿಸಿದ್ರೂ ತಂಡದಿಂದ ಕೈಬಿಡ್ತಾನೇ ಬರ್ತಿದ್ದಾರೆ. ಸರ್ಫರಾಜ್ ಖಾನ್ ಕೊನೆಯ ಬಾರಿಗೆ 2024ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಆ ಸರಣಿಯಲ್ಲಿ ಭಾರತ ಕ್ಲೀನ್ ಸ್ವೀಪ್ ಆದ್ರೂ ಸರ್ಫರಾಜ್ ಬ್ಯಾಟಿಂಗ್ ಚೆನ್ನಾಗಿತ್ತು. ಒಂದು ಪಂದ್ಯದಲ್ಲಿ 150 ರನ್‌ಗಳನ್ನ ಸಿಡಿಸಿದ್ರು. ಇದು ಅವರ ಟೆಸ್ಟ್ ವೃತ್ತಿಜೀವನದ ಗರಿಷ್ಠ ಸ್ಕೋರ್. ಇನ್ನು ಭಾರತದ ಪರ 6 ಪಂದ್ಯಗಳ ಟೆಸ್ಟ್ ಕೆರಿಯರ್‌ನಲ್ಲಿ 1 ಶತಕ ಹಾಗೂ 3 ಅರ್ಧಶತಕ ಸೇರಿದಂತೆ 37.10ರ ಸರಾಸರಿಯಲ್ಲಿ 311 ರನ್ ಗಳಿಸಿರುವ ಸರ್ಫರಾಜ್, ರಣಜಿ ಟ್ರೋಫಿ 2025-26ರಲ್ಲೂ 9 ಇನಿಂಗ್ಸ್‌ಗಳಲ್ಲಿ 53.62ರ ಸರಾಸರಿಯಲ್ಲಿ 429 ರನ್ ಬಾರಿಸಿ ಅದ್ಭುತ ಫಾರ್ಮ್‌ನಲ್ಲಿದ್ದರು. ಆದ್ರೂ ಭಾರತದ ಬಾಗಿಲು ಮಾತ್ರ ತೆರೆಯುತ್ತಲೇ ಇಲ್ಲ.

ಸದ್ಯ ಟೀಂ ಇಂಡಿಯಾದ ಮಧ್ಯಮಕ್ರಮಾಂಕದಲ್ಲಿ ಹಿರಿಯ ಆಟಗಾರರು ಇರೋದ್ರಿಂದ ಸರ್ಫರಾಜ್​ಗೆ ಸ್ಥಾನ ಪಡೆಯೋದು ಕಷ್ಟವಾಗಿದೆ. ಹೀಗಾಘಿ ತಮ್ಮ ಫಾರ್ಮ್ ಸಾಬೀತುಪಡಿಸಲು ಆಗಸ್ಟ್ 23 ರಿಂದ ಸೆಪ್ಟೆಂಬರ್ 10 ರವರೆಗೆ ನಡೆಯಲಿರುವ ದುಲೀಪ್ ಟ್ರೋಫಿ 2026 ಟೂರ್ನಿಯಲ್ಲಿ ಆಡಬೇಕು. ಅಲ್ಲಿ ಬ್ಯಾಟಿಂಗ್ ಖದರ್ ಮೂಲಕವೇ ಕಂ ಬ್ಯಾಕ್ ಮೆಸೇಜ್ ಪಾಸ್ ಮಾಡ್ಬೇಕಾಗುತ್ತೆ.

Shantha Kumari

Leave a Reply

Your email address will not be published. Required fields are marked *