ನನಗೆ ಮನೆ ಕಟ್ಟೋಕೆ ಜಾಗ ಕೊಡಿ- ಅಂಗಲಾಚಿ ಬೇಡಿಕೊಂಡ ರಿಷಭ್ ಪಂತ್

ನನಗೆ ಮನೆ ಕಟ್ಟೋಕೆ ಜಾಗ ಕೊಡಿ- ಅಂಗಲಾಚಿ ಬೇಡಿಕೊಂಡ ರಿಷಭ್ ಪಂತ್

ಟೀಮ್ ಇಂಡಿಯಾದ ಸ್ಟಾರ್​ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್​ ಪಂತ್ ಮನೆ ಕಟ್ಟೊದ್ದಕ್ಕೆ ಜಾಗ ಕೊಡಿ ಎಂದು ಮಧ್ಯೆರಾತ್ರಿ ಅಂಗಲಾಚಿ ಬೇಡಿಕೊಂಡಿದ್ದಾರೆ.   ಮನೆ ಕಟ್ಟಲು ಜಾಗ ನೀಡುವಂತೆ  ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಲಂಕಾ  ಪ್ರವಾಸದಲ್ಲಿರೋ ಪಂತ್ ಇಂದು ಬೆಳಗಿನ ಜಾವ 12.46ಕ್ಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಮಸ್ಕಾರ ಸರ್… ಹೇಗಿದ್ದೀರಿ? ನಾನು ಉತ್ತರಾಖಂಡದವನಾಗಿದ್ದರೂ, ಬಹಳ ದಿನಗಳಿಂದ ರಾಜ್ಯದ ಹೊರಗೆ ವಾಸಿಸುತ್ತಿದ್ದೇನೆ. ದೆಹಲಿಯಿಂದ ಇದೀಗ ನನ್ನ ಸ್ವಂತ ರಾಜ್ಯ ಉತ್ತರಾಖಂಡಕ್ಕೆ ತೆರಳಿ ಅಲ್ಲಿಯೇ ನೆಲೆಸಲು ನಾನು ಬಯಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಸೂಕ್ತವಾದ, ವಿಶಾಲವಾದ ಭೂಮಿಯನ್ನು ಹುಡುಕಲು ನಾನು ಪ್ರಯತ್ನಿಸುತ್ತಿದ್ದೇನೆ, ಆದರೆ ನನಗೆ ಇನ್ನೂ ಸರಿಯಾದ ಭೂಮಿ ಸಿಕ್ಕಿಲ್ಲ”

“ನಾನು ನಮ್ಮ ರಾಜ್ಯವನ್ನು ತುಂಬಾ ಪ್ರೀತಿಸುತ್ತೇನೆ. ಭೂಮಿಯನ್ನು ಪಡೆಯಲು ನಾನು ನಿಮ್ಮ ಸಹಾಯವನ್ನು ಕೋರುತ್ತಿದ್ದೇನೆ. ಈ ಹಿಂದೆ ನನಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದ್ದ ಭೂಮಿಯ ವಿಷಯವೂ ಇನ್ನೂ ಬಾಕಿ ಇದೆ. ನನ್ನ ತವರು ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ನಾನು ಬಯಸುತ್ತೇನೆ. ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸುವಂತೆ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ವಿನಂತಿಸುತ್ತೇನೆ. ನಿಮ್ಮ ಪ್ರತಿಕ್ರಿಯೆಗಾಗಿ ನಾನು ಎದುರು ನೋಡುತ್ತಿದ್ದೇನೆ. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸಿದ್ದಕ್ಕಾಗಿ ನನಗೆ ಸರ್ಕಾರದಿಂದ ಭೂಮಿ ಮಂಜೂರು ಮಾಡಬಹುದಾದರೆ ಅದ್ಭುತವಾಗಿರುತ್ತದೆ. ನೀವು ಅನುಮತಿಸಿದರೆ, ಸರ್ಕಾರ ನಿಗದಿಪಡಿಸಿದ ದರದಲ್ಲೇ ಭೂಮಿಯನ್ನು ಖರೀದಿಸಲು ನಾನು ಸಿದ್ಧನಿದ್ದೇನೆ. ದಯವಿಟ್ಟು ಸಹಾಯ ಮಾಡಿ,” ಎಂದು ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Warm-Up ಪಂದ್ಯದಲ್ಲೂ ತಡಕಾಡಿದ ಭಾರತ – ಫೀಲ್ಡಿಂಗ್ ಫೇಲ್ಯೂರ್ ಗೆ ಕೊನೆ ಇಲ್ವಾ?

ಇದ್ದಕ್ಕೆ ಸಿಎಂ ಧಾಮಿ ರಿಪ್ಲೈ ಕೂಡ ಮಾಡಿದ್ದಾರೆ. ರಿಷಭ್ ಪಂತ್, ನೀವು ಉತ್ತರಾಖಂಡ ರಾಜ್ಯಕ್ಕೆ ಹೆಮ್ಮೆ ತಂದಿದ್ದೀರಿ ನಿಮ್ಮ ಅದ್ಭುತ ಪ್ರದರ್ಶನ ಮತ್ತು ವಿಜಯಗಳ ಮೂಲಕ ನೀವು ‘ದೇವಭೂಮಿ’ಯ ಜಾಗತಿಕ ಖ್ಯಾತಿಯನ್ನು ಹೆಚ್ಚಿಸಿದ್ದೀರಿ. ಮಾತೃಭೂಮಿಯ ಮೇಲಿನ ನಿಮ್ಮ ಪ್ರೀತಿ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ನಿಮ್ಮ ಬಯಕೆ ನಿಜಕ್ಕೂ ಶ್ಲಾಘನೀಯ. ನಿಮ್ಮ ವಿಷಯದ ಕುರಿತು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಅವರು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ” ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ  ರಿಪ್ಲೈ ಮಾಡಿದ್ದಾರೆ.

Kishor KV

Leave a Reply

Your email address will not be published. Required fields are marked *