Warm-Up ಪಂದ್ಯದಲ್ಲೂ ತಡಕಾಡಿದ ಭಾರತ – ಫೀಲ್ಡಿಂಗ್ ಫೇಲ್ಯೂರ್ ಗೆ ಕೊನೆ ಇಲ್ವಾ?
ಗಿಲ್ ಗೈರಿನಲ್ಲಿ KL ಟೀಂ ಗೆಲ್ಲಿಸ್ತಾರಾ?

Warm-Up ಪಂದ್ಯದಲ್ಲೂ ತಡಕಾಡಿದ ಭಾರತ – ಫೀಲ್ಡಿಂಗ್ ಫೇಲ್ಯೂರ್ ಗೆ ಕೊನೆ ಇಲ್ವಾ?ಗಿಲ್ ಗೈರಿನಲ್ಲಿ KL ಟೀಂ ಗೆಲ್ಲಿಸ್ತಾರಾ?

ಭಾರತ ಮತ್ತು ಶ್ರೀಲಂಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವಾರ್ಮ್ ಅಪ್ ಮ್ಯಾಚ್ ಇವತ್ತಿಂದ ಸ್ಟಾರ್ಟ್ ಆಗಿದೆ. ಬಟ್ ಬ್ಯಾಡ್​ಲಕ್ ಏನಂದ್ರೆ ಫಸ್ಟ್ ಡೇನೇ ಟೀಂ ಇಂಡಿಯಾ ಕ್ಯಾಪ್ಟನ್ ಮೈದಾನದಿಂದ ಹೊರಬಿದ್ದಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಅವ್ರ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳಿದಿರೋ ಭಾರತ ತಂಡಕ್ಕೆ ಒಂದಷ್ಟು ಚಾಲೆಂಜಸ್ ಕೂಡ ಎದುರಾಗಿದೆ.

ಇದನ್ನೂ ಓದಿ : ವಿರಾಟ್ ಕೊಹ್ಲಿನೇ ಸೈಡ್ ಹೊಡೆದ ಗಿಲ್ -2023ರ ವಿಶ್ವಕಪ್ ಬಳಿಕ ಕಿಂಗ್ & ಪ್ರಿನ್ಸ್ ODI ರೇಸ್!

ಭಾರತ ಮತ್ತು ಶ್ರೀಲಂಕಾ ನಡುವಿನ ಪ್ರಾಕ್ಟೀಸ್ ಮ್ಯಾಚ್ ಶುರುವಾಗಿದೆ. ಮೊದ್ಲಿಗೆ ನಾಲ್ಕು ದಿನಗಳ ಪಂದ್ಯ ಅಂದಿದ್ರೂ ಕೂಡ ಈಗ ಅದನ್ನ ಮೂರು ದಿನಗಳಿಗೆ ಇಳಿಸಲಾಯ್ತು. ಈ ಅಭ್ಯಾಸ ಪಂದ್ಯದಿಂದಾಗಿ ಭಾರತೀಯ ಆಟಗಾರರು ಶ್ರೀಲಂಕಾದ ಪಿಚ್​ಗಳಿಗೆ ಹೊಂದಿಕೊಳ್ಳಲು ಹೆಲ್ಪ್ ಆಗಲಿದೆ. ಇನ್ನು ಪಂದ್ಯಕ್ಕೂ ಮುನ್ನ ಶ್ರೀಲಂಕಾ   ತಂಡ ಭಾರತದ ವಿರುದ್ಧ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಲು ಆಯ್ಕೆ ಮಾಡಿಕೊಂಡ್ರು. ಹೀಗಾಗಿ ಭಾರತ ಬೌಲಿಂಗ್ ಮಾಡಬೇಕಾಯ್ತು. ಗುರುವಾರದ ಪ್ರಾಕ್ಟೀಸ್ ಮ್ಯಾಚಲ್ಲಿ ಬೆರಳಿಗೆ ಗಾಯ ಮಾಡ್ಕೊಂಡಿದ್ದ ನಾಯಕ ಗಿಲ್​ ಪಂದ್ಯದಿಂದಲೇ ಹೊರಗುಳಿದಿದ್ದಾರೆ.  ಇದು ನೋಡೋಕೆ ವಾರ್ಮ್ ಅಪ್ ಮ್ಯಾಚ್ ಎನ್ನಿಸಿದ್ರೂ ಕೂಡ ಭಾರತ ತಂಡಕ್ಕೆ ಮುಂದಿನ ಪಂದ್ಯಗಳಲ್ಲಿ ಏನೆಲ್ಲಾ ಸವಾಲುಗಳು ಎದುರಾಗಬಹುದು ಅನ್ನೋದು ಚರ್ಚೆಯಾಗ್ತಿದೆ.

ಮೊದಲ ದಿನವೇ ಚಾಲೆಂಜ್!

ಟಾಸ್ ಗೆದ್ದ ಶ್ರೀಲಂಕಾ ಪರ ಬ್ಯಾಟರ್ ಗಳಿಂದ ಒಳ್ಳೆಯ ಓಪನಿಂಗ್

ಮೊದಲ ವಿಕೆಟ್ ಗೆ 110, ಓಪನರ್ಸ್ ಕಡೆಯಿಂದ 50+ ರನ್ಸ್

ಟಾಪ್ 6 ಬ್ಯಾಟರ್ ಗಳು 30 ರನ್ ಗಳ ಮೇಲೆ ವಿಕೆಟ್ ಒಪ್ಪಿಸಿದ್ದು

ಬೌಲಿಂಗ್ ನಲ್ಲಿ ಅವಕಾಶಗಳನ್ನ ಸೃಷ್ಟಿಸಿದ್ರೂ ಫೀಲ್ಡಿಂಗ್ ಮತ್ತೆ ಫೇಲ್ಯೂರ್

ಕುಲ್ದೀಪ್ ಬೌಲಿಂಗ್ ನಲ್ಲಿ ಕೆಎಲ್, ಜಡ್ಡು ಬೌಲಿಂಗ್ ನಲ್ಲಿ ಪಡಿಕ್ಕಲ್ ಕ್ಯಾಚ್ ಮಿಸ್

ಜಸ್ಪ್ರೀತ್ ಬುಮ್ರಾ ಅವ್ರ ಗೈರು ತಂಡದ ಬೌಲಿಂಗ್ ನಲ್ಲಿ ಎದ್ದು ಕಾಣುತ್ತಿದೆ

ಹೀಗೆ ಲಂಕಾ ಟೆಸ್ಟ್ ಸರಣಿಯನ್ನ ಶತಾಯ ಗತಾಯ ಗೆಲ್ಲಲೇಬೇಕು

Shantha Kumari