ಬಾಲ್ಯದ ಗೆಳತಿಯರ ನಡುವೆ ಪ್ರಣಯ ಪ್ರಸಂಗ – ಮದುವೆ ವಿರೋಧಿಸಿದಕ್ಕೆ ಪ್ರಾಣಬಿಟ್ಟ ಯುವತಿಯರು

ಅವರಿಬ್ಬರು ಬಾಲ್ಯದ ಗೆಳತಿಯರು. ಇಬ್ಬರಿಗೂ ಒಬ್ಬರನೊಬ್ಬರು ಬಿಟ್ಟಿರಲಾಗದಂತಹ ಸ್ನೇಹ. ಮನೆಯವರು ಕೂಡಾ ಸ್ನೇಹಿತೆಯರು ಎಂದು ಸುಮ್ಮನಾಗಿದ್ದರು. ಆದರೆ, ಯಾವಾಗ ಇವರು ಬರೀ ಗೆಳತಿಯರಲ್ಲ. ಪ್ರೇಮಿಗಳು ಎಂದು ತಿಳಿಯಿತೋ ಆವತ್ತಿನಿಂದ ಮನೆಯವರ ವಿರೋಧ ಶುರುವಾಗಿತ್ತು. ಇದೇ ವಿರೋಧ ಗೆಳತಿಯರ ದಾರುಣ ಅಂತ್ಯಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ದುರಂತ – ವಿಷ ಗಾಳಿ ಸೇವಿಸಿ ಮೂವರು ಕಾರ್ಮಿಕರು ಸಾವು
ಬೆಂಗಳೂರಿನಲ್ಲಿ ಒಂದೇ ಮರದ ಕೊಂಬೆಗೆ ನೇಣು ಬಿಗಿದುಕೊಂಡು ಇಬ್ಬರು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. 22 ವರ್ಷದ ಸಿರ್ಜನಾ ಮತ್ತು 23 ವರ್ಷದ ರಿತಾ ಸಾವಿಗೆ ಕಾರಣ ಏನು ಅನ್ನೋದು ಬಹಿರಂಗಗೊಂಡಿದೆ. ಸಿರ್ಜನಾ ಮತ್ತು ರಿತಾ ಒಂದೇ ನೇಣಿಗೆ ಕೊರಳೊಡ್ಡಿದ್ದು, ಒಟ್ಟಿಗೆ ಬಾಳಲು ಸಾಧ್ಯವಾಗದ ಕಾರಣ ಒಟ್ಟಿಗೆ ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಮೃತ ಯುವತಿಯರ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ಇಬ್ಬರು ಮದುವೆಯಾಗಬೇಕು ಎಂದು ಮನೆಯವರ ಬಳಿ ಹೇಳಿಕೊಂಡಿದ್ದರು. ಆದರೆ ಅವರ ಪ್ರೀತಿಗೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಬೇಸತ್ತ ಪ್ರೇಮಿಗಳು ಒಟ್ಟಿಗೆ ನೇಣಿಗೆ ಶರಣಾಗಿ ಪ್ರಾಣಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಸಿರ್ಜನಾ ಮತ್ತು ರಿತಾ ಸಂಬಂಧಿಕರು. ಜೊತೆಗೆ ಬಾಲ್ಯ ಸ್ನೇಹಿತೆಯರು. ನೇಪಾಳದಲ್ಲಿ ಒಟ್ಟಿಗೆ ಓದಿ, ಒಟ್ಟಿಗೆ ಬೆಳೆದಿದ್ದರು. ಚಿಕ್ಕ ವಯಸ್ಸಿನಿಂದಲೂ ಒಬ್ಬರಿಗೊಬ್ಬರು ಬಿಟ್ಟು ಇರುತ್ತಿರಲಿಲ್ಲ. ನೇಪಾಳದಲ್ಲಿ ಅವರು ಒಟ್ಟಿಗೆ ಇರುವುದನ್ನು ಕಂಡು ಊರಿನ ಜನರು ಮಾತಾಡಿಕೊಳ್ಳುತ್ತಿದ್ದರು. ಆದ್ದರಿಂದ ಸಂಬಂಧಿಕರು ಇಬ್ಬರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಬೆಂಗಳೂರಿಗೆ ಬಂದ ಮೇಲೆ ರಿತಾ ಫ್ರೇಜರ್ ಟೌನ್‌ನಲ್ಲಿ ಮತ್ತು ಸಿರ್ಜನಾ ಜಕ್ಕೂರಿನಲ್ಲಿ ವಾಸವಾಗಿದ್ದರು. ಆದರೂ ವಾರದಲ್ಲಿ ಮೂರು-ನಾಲ್ಕು ದಿನ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು. ನಿನ್ನೆ ಇಬ್ಬರೂ ಸಂಬಂಧಿಕರ ಮನೆಗೆ ಊಟಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಆ ಸಮಯದಲ್ಲಿ ಕುಟುಂಬಸ್ಥರ ನಡುವೆ ಮದುವೆ ಪ್ರಸ್ತಾಪವಾಗಿತ್ತು. ಇದಾದ ನಂತರ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ನೋಡಿರಿ

