ಊಟ ಸೇರಲ್ಲ.. ನಿದ್ದೆ ಮಾಡಲ್ಲ -ಜೈಲಲ್ಲಿದ್ದ ನಟ ದರ್ಶನ್ ಪಾಡು ಯಾರಿಗೂ ಬೇಡ
ದರ್ಶನ್ ಕಾಡುತ್ತಿದೆ ಮಾಫಿ ಸಾಕ್ಷಿ ಭೀತಿ

ಊಟ ಸೇರಲ್ಲ.. ನಿದ್ದೆ ಮಾಡಲ್ಲ -ಜೈಲಲ್ಲಿದ್ದ ನಟ ದರ್ಶನ್ ಪಾಡು ಯಾರಿಗೂ ಬೇಡದರ್ಶನ್ ಕಾಡುತ್ತಿದೆ ಮಾಫಿ ಸಾಕ್ಷಿ ಭೀತಿ

ಜೈಲಿನಲ್ಲಿರುವ ನಟ ದರ್ಶನ್ ಪಾಡು ಯಾರಿಗೂ ಬೇಡ ಅನ್ನೋ ಹಾಗಾಗಿದೆ. ಅದರಲ್ಲೂ ಜೊತೆಗಿದ್ದವರೇ ಈಗ ಕೈಕೊಟ್ಟಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ದರ್ಶನ್ ಊಟ ಮಾಡುತ್ತಿಲ್ಲ. ನಿದ್ದೆಯಿಲ್ಲದೇ ರಾತ್ರಿ ಕಳೆದಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊ*ಲೆ  ಕೇಸ್‌ಗೆ ಬಿಗ್ ಟ್ವಿಸ್ಟ್ – ದಶರ್ನ್ ಬಗ್ಗೆ ಸತ್ಯ ಬಾಯಿ ಬಿಡೋಕೆ A14 ಪ್ರದೋಷ್ ರೆಡಿ  

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಆಪ್ತ ಪ್ರದೂಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವುದು ನುಂಗಲಾರದ ತುತ್ತಾಗಿದೆ. ಜೈಲಿನಲ್ಲಿ ಚಿಂತೆಯಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ, ದರ್ಶನ್ ಆಪ್ತ ಪ್ರದೋಷ್ ಮಾಫಿ ಸಾಕ್ಷಿ ಆಗಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣದ ತೀರ್ಪು ಇನ್ನಷ್ಟೇ ಬರಬೇಕಿದೆ. ಸ್ವತಃ ಆಪ್ತನೇ ಸಾಕ್ಷಿಯಾಗಿ ಬದಲಾದರೆ, ಕೇಸ್‌ನ ಭವಿಷ್ಯ ಏನಾಗಬಹುದು?. ತಮ್ಮ ವಿರುದ್ಧವೇ ಸಾಕ್ಷ್ಯಗಳು ಸಿಕ್ಕಿದರೆ ಮುಂದಿನ ಭವಿಷ್ಯವೇನು ಅನ್ನೋ ಯೋಚನೆಯಲ್ಲಿ ದರ್ಶನ್ ಆತಂಕಗೊಂಡಿದ್ದಾರೆ. ಗುರುವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟವನ್ನು ಮಾಡಲಿಲ್ಲ. ಏಕಾಂಗಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ರಾತ್ರಿಯಿಡೀ ನಿದ್ರೆ ಕೂಡಾ ಮಾಡಿಲ್ಲ ಎಂದು ಹೇಳಲಾಗಿದೆ.

ಶುಕ್ರವಾರ ಬೆಳಿಗ್ಗೆ ಕೆಲ ಹೊತ್ತು ತಮ್ಮ ಬ್ಯಾರಕ್‌ನಲ್ಲೇ ವಾಕ್ ಮಾಡಿದ ದರ್ಶನ್, ನಂತರ ದೇವರ ಫೋಟೋಗೆ ಕೈಮುಗಿದು ಕಾಫಿ ಕುಡಿದು ಕುಳಿತಿದ್ದರು. ಬಳಿಕ ದಿನಪತ್ರಿಕೆಯನ್ನು ತರಿಸಿ, ಅದರಲ್ಲಿ ಬಂದಿದ್ದ ಮಾಫಿ ಸಾಕ್ಷಿ ಕುರಿತ ಸುದ್ದಿಯನ್ನು ಓದಿದ ದರ್ಶನ್ ಮುಖದಲ್ಲಿ ತೀವ್ರ ಆತಂಕ ಕಾಣಿಸುತ್ತಿತ್ತು ಎಂದು ವರದಿಯಾಗಿದೆ.

Sulekha

Leave a Reply

Your email address will not be published. Required fields are marked *