ಖಾಸಗಿ ಶಾಲೆಗಳ ಡೊನೇಷನ್ ದಂಧೆ ಆಟಕ್ಕೆ ಬ್ರೇಕ್ – ರೂಲ್ಸ್ ಫಾಲೋ ಮಾಡದಿದ್ರೆ 10 ಪಟ್ಟು ಫೈನ್

ಖಾಸಗಿ ಶಾಲೆಗಳ ಡೊನೇಷನ್ ದಂಧೆ ಆಟಕ್ಕೆ ಬ್ರೇಕ್  – ರೂಲ್ಸ್ ಫಾಲೋ ಮಾಡದಿದ್ರೆ 10 ಪಟ್ಟು ಫೈನ್

ಖಾಸಗಿ ಶಾಲೆಗಳ ಡೊನೇಷನ್ ಹಾವಳಿಗೆ ಬ್ರೇಕ್ ಹಾಕಲು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಕಠಿಣ ನಿಯಮ  ಜಾರಿಗೆ ತಂದಿದೆ. ಖಾಸಗಿ ಶಾಲೆಗಳಲ್ಲಿ ದಾಖಲಾತಿ ಸಮಯದಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವುದು ಮತ್ತು ಪೋಷಕರಿಗೆ ಪಾರದರ್ಶಕತೆ ಒದಗಿಸುವ ಮುಖ್ಯ ಉದ್ದೇಶದೊಂದಿಗೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ದಿಟ್ಟ ಕ್ರಮವನ್ನ ಕೈಗೊಂಡಿದೆ.

ಇದನ್ನೂ ಓದಿ: ಕೈಮಗ್ಗ ಉತ್ಪನ್ನಗಳನ್ನು ಖರೀದಿಸಲು ನನ್ನೊಂದಿಗೆ ಸಿದ್ಧರಾಗಿ – ಯುವಜನತೆಗೆ ಕರೆ ನೀಡಿದ ಮೋದಿ

  • ಖಾಸಗಿ ಶಾಲೆಗಳು 2025-26ನೇ ಸಾಲಿಗೆ ಮಕ್ಕಳ ದಾಖಲಾತಿ ಮತ್ತು ಶುಲ್ಕ ವಸೂಲಿ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಆ ಶಾಲೆಗಳು ತಾವು ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಶಾಲಾ ವೆಬ್‌ಸೈಟ್‌ ಹಾಗೂ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು ತಿಳಿಸಿದೆ.
  • ದಾಖಲಾತಿ ಪ್ರಕ್ರಿಯೆಯಲ್ಲಿ ಪೋಷಕರಿಂದ ಕಾನೂನುಬಾಹಿರವಾಗಿ ಡೊನೇಷನ್ ಪಡೆದರೆ, ಪಡೆದ ಶುಲ್ಕದ 10 ಪಟ್ಟು ದಂಡವನ್ನು ಆ ಶಾಲೆಗಳಿಗೆ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
  • ಖಾಸಗಿ ಶಾಲೆಗಳಲ್ಲಿ ಸೀಟು ನೀಡುವ ಮುನ್ನ ಮಗು ಅಥವಾ ಪೋಷಕರನ್ನು ಯಾವುದೇ ರೀತಿಯ ಟೆಸ್ಟ್ ಅಥವಾ ಸಂದರ್ಶನಕ್ಕೆ ಒಳಪಡಿಸಿದರೆ ಅಂತಹ ಶಾಲೆಗಳಿಗೆ ₹25,000 ದಂಡ ಕೂಡ ವಿಧಿಸಲಾಗುತ್ತದೆ.
  • ಪುನರಾವರ್ತಿತ ತಪ್ಪಿಗೆ ಪ್ರತಿ ಬಾರಿ 50,000 ರೂಪಾಯಿ ದಂಡ  ವಿಧಿಸಲಾಗುತ್ತೆ

Kishor KV

Leave a Reply

Your email address will not be published. Required fields are marked *