ಕೈಮಗ್ಗ ಉತ್ಪನ್ನಗಳನ್ನು ಖರೀದಿಸಲು ನನ್ನೊಂದಿಗೆ ಸಿದ್ಧರಾಗಿ – ಯುವಜನತೆಗೆ ಕರೆ ನೀಡಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಹಂಚಿಕೊಂಡು, ರಾಷ್ಟ್ರೀಯ ಕೈಮಗ್ಗ ದಿನವನ್ನು ವಿಶಿಷ್ಟವಾಗಿ ಆಚರಿಸುವಂತೆ ಯುವಜನತೆಗೆ ಕರೆ ನೀಡಿದ್ದಾರೆ.
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಬಿಟ್ಟ ಮೋದಿ ‘ಕೈಮಗ್ಗ ಉತ್ಪನ್ನಗಳನ್ನು ಖರೀದಿಸಲು ನನ್ನೊಂದಿಗೆ ಸಿದ್ಧರಾಗಿ’ ವಿಡಿಯೊಗಳನ್ನು ಹಂಚಿಕೊಳ್ಳಿ ಎಂದು ತಿಳಿಸಿದ್ದಾರೆ. ಈ ಮೂಲಕ ಅವರು ಜನರು ನೇಕಾರರನ್ನು ಬೆಂಬಲಿಸಲು ಕೈಮಗ್ಗ ಉತ್ಪನ್ನಗಳನ್ನು ಖರೀದಿಸಿ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸಿದರು. ಅಲ್ಲದೇ ಈ ದಿನದ ಆಚರಣೆಯಿಂದ ದೇಶದ ನೇಕಾರರು ಮತ್ತು ಸಣ್ಣ ವ್ಯಾಪಾರಿಗಳಿಗೆ ಸಹಾಯ ನೀಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 7 ರಂದು ದೇಶಾದ್ಯಂತ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುವುದು. ಭಾರತದ ಕೈಮಗ್ಗದ ವೈವಿಧ್ಯತೆಯನ್ನು ಜನಪ್ರಿಯಗೊಳಿಸೋಣ. ಗ್ರೇಟ್ ರೆಡಿ ವಿತ್ ಮಿ ವಿಡಿಯೊಗಳು ಸೇರಿದಂತೆ ನಿಮ್ಮ ನೆಚ್ಚಿನ ಕೈಮಗ್ಗ ಉತ್ಪನ್ನಗಳ ವಿಡಿಯೊಗಳನ್ನು ಮಾಡಿ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಿಎಂ ಡಿಕೆಶಿ, ಸುರ್ಜೇವಾಲ ಜೊತೆ ಕ್ಲೋಸ್ ಡೋರ್ ಮೀಟಿಂಗ್- ಎಂ.ಕೃಷ್ಣಪ್ಪ Or ಪ್ರಿಯಕೃಷ್ಣರಿಗೆ ಸಿಗುತ್ತಾ ಸಚಿವ ಸ್ಥಾನ?
ಕಳೆದ ವಾರ ನೀವು ಸ್ನೇಹಿತರ ದಿನವನ್ನು ಸಂಭ್ರಮದಿಂದ ಆಚರಿಸಿದ್ದೀರಿ. ಅದೇ ಉತ್ಸಾಹ ಮತ್ತು ಮನೋಭಾವದಿಂದ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನೂ ಆಚರಿಸಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಭಾರತದ ನೇಕಾರ ಸಮುದಾಯದ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಿ, ಸಾಂಪ್ರದಾಯಿಕ ಕೌಶಲ್ಯದ ಮೂಲಕ ಕೈಯಿಂದ ನೇಯ್ದ ಸುಂದರ ವಸ್ತ್ರಗಳನ್ನು ತಯಾರಿಸುವ ನೇಕಾರ ಕುಟುಂಬಗಳನ್ನು ಗುರುತಿಸಿ ಬೆಂಬಲಿಸುವ ಅವಕಾಶವೇ ರಾಷ್ಟ್ರೀಯ ಕೈಮಗ್ಗ ದಿನ ಎಂದು ಹೇಳಿದರು.

ನೋಡಿರಿ

