ಕಾಫಿ, ಟೀ ಕುಡಿಯುವಾಗ ಈ ತಪ್ಪು ಮಾಡ್ಬೇಡಿ! – ಎಚ್ಚರ ತಪ್ಪಿದ್ರೆ ಆರೋಗ್ಯಕ್ಕೆ ಕುತ್ತು!

ಕಾಫಿ, ಟೀ ಕುಡಿಯುವಾಗ ಈ ತಪ್ಪು ಮಾಡ್ಬೇಡಿ! – ಎಚ್ಚರ ತಪ್ಪಿದ್ರೆ ಆರೋಗ್ಯಕ್ಕೆ ಕುತ್ತು!

ಚಹಾ ಕುಡಿಯೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬೆಳಗ್ಗೆ, ಸಂಜೆಯಂತೂ ತಪ್ಪದೇ ಟೀ ಬೇಕೇಬೇಕು. ಅದರ ಮಧ್ಯೆ ಟೆನ್ಶನ್‌ ಆದಾಗ, ಬೋರ್ ಅನಿಸಿದಾಗ, ಫ್ರೆಂಡ್ಸ್ ಸಿಕ್ಕಾಗ, ತಲೆನೋವು ಬಂದಾಗ ಟೀ ಕುಡಿಯಲೇಬೇಕು ಅನಿಸುತ್ತದೆ. ಅದರಲ್ಲೂ ಮನೆಗಿಂತ ಹೊರಗಡೆ ಟೀ ಕುಡಿಯುವವರೇ ಹೆಚ್ಚು. ಹೀಗೆ ಹೊಟೇಲ್‌, ಸ್ಟಾಲ್‌ಗಳಲ್ಲಿ ಟೀ ಕುಡಿಯುವಾಗ ಅಲ್ಲಿ ಪೇಪರ್ ಗ್ಲಾಸ್‌ನಲ್ಲಿ ಟೀ ನೀಡುತ್ತಾರೆ. ಕುಡಿದು ಸುಲಭವಾಗಿ ಎಸೆಯಬಹುದು ಅನ್ನೋ ಕಾರಣಕ್ಕೆ ಪೇಪರ್‌ ಕಪ್‌ನ್ನು ಬಳಸಲಾಗುತ್ತದೆ. ಆದ್ರೆ ಇದು ಆರೋಗ್ಯಕ್ಕೆ ತುಂಬಾ ಕೆಟ್ಟದು. ಇದ್ರಲ್ಲಿ ಕಾಫಿ, ಟೀ ಕುಡಿದ್ರೆ ಮುಂದೆ ದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ. ಸಾವಿನ ಆಪತ್ತು ಎದುರಾಗುತ್ತದೆ.

ಇದನ್ನೂ ಓದಿ :  ಒಗ್ಗರಣೆಗೆ ಮಾತ್ರವಲ್ಲ.. ಮಜ್ಜಿಗೆಯಲ್ಲೂ ಬಳಸಿ ಕರಿಬೇವು! – ಏನೆಲ್ಲಾ ಲಾಭಗಳಿವೆ ಗೊತ್ತಾ?

35 ವರ್ಷದ ವ್ಯಕ್ತಿಯೊಬ್ಬರು ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು. ಅವ್ರಿಗೆ ಯಾವುದೇ ದುಶ್ಚಟಗಳು, ಕಾಯಿಲೆಗಳು, ಇರಲಿಲ್ಲ. ಸುಖ ಸಂಸಾರ ನಡೆಸುತ್ತಾ ಆರೋಗ್ಯವಾಗಿಯೇ ಇದ್ರು. ಆದ್ರೆ ಆಸ್ಪತ್ರೆಗೆ ಅವ್ರ ದೇಹದಾನ ಮಾಡಿದ ಬಳಿಕ ಸಂಶೋಧನೆಯಿಂದ ಆಘಾತಕಾರಿ ಸತ್ಯ ಹೊರಬಿದ್ದಿದೆ. ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿದ ಪರಿಣಾಮವಾಗಿ ಬಿಡುಗಡೆಯಾಗುವ ರಾಸಾಯನಿಕಗಳಿಂದ ಕ್ಯಾನ್ಸರ್ ಬಂದಿರುವುದು ಗೊತ್ತಾಗಿದೆ. ಬಳಿಕ ವೈದ್ಯರು ಮೃತನ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳನ್ನು ಸಂಪರ್ಕಿಸಿದ್ದಾರೆ. ಅವರ ಆಹಾರ ಪದ್ಧತಿಯ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಮೃತ ವ್ಯಕ್ತಿ ದಿನಕ್ಕೆ ಐದರಿಂದ ಆರು ಬಾರಿ ಪ್ಲಾಸ್ಟಿಕ್ ಕಪ್ಪುಗಳಲ್ಲಿ ಟೀ ಕುಡೀತಿದ್ರು ಅನ್ನೋದು ಗೊತ್ತಾಗಿದೆ. ಕೊನೆಗೆ ಪ್ಲಾಸ್ಟಿಕ್ ಲೋಟ, ವಾಟರ್ ಬಾಟಲಿಯಿಂದಲೇ ಕ್ಯಾನ್ಸರ್ ಬಂದಿರೋದು ಪತ್ತೆಯಾಗಿದೆ. ಅಲ್ಲದೆ ಆರ್ಡರ್ ಮಾಡುವ ಊಟ ಕೂಡ ಕೆಲವೊಮ್ಮೆ ಪ್ಲಾಸ್ಟಿಕ್ ಕವರ್​ಗಳಲ್ಲೇ ಕೊಡ್ತಾರೆ.  ಇದ್ರಿಂದ ಕ್ಯಾನ್ಸರ್ ಸೂಕ್ಷ್ಮಾಣುಗಳು ದೇಹ ಪ್ರವೇಶಿಸಲು ಕಾರಣವಾಗುತ್ತೆ ಅಂತಾ ವೈದ್ಯರು ಹೇಳಿದ್ದಾರೆ.

ವೊಕಾರ್ಡ್ ಹಾಸ್ಪಿಟಲ್ ಶಸ್ತ್ರಚಿಕಿತ್ಸಾ ಆಂಕೊಲಾಜಿ ಸಲಹೆಗಾರರಾದ ತಿರತ್ರಮ್ ಕೌಶಿಕ್, ಪ್ರತಿದಿನ ಬಳಸುವ ಪೇಪರ್ ಕಪ್‌ಗಳು ಮತ್ತು ಕ್ಯಾನ್ಸರ್ ನಡುವೆ ನೇರ ಸಂಬಂಧವಿಲ್ಲ ಆದರೆ ಅವರು ಬಳಸುವ ಕಪ್‌ಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು ಅಥವಾ ಪರ್ಫ್ಲೋರೋಅಲ್ಕೈಲ್ ಪದಾರ್ಥಗಳಂತಹ ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

Shwetha M

Leave a Reply

Your email address will not be published. Required fields are marked *