ರೇಣುಕಾಸ್ವಾಮಿ ಕೇಸ್‌ನಲ್ಲಿ ಮತ್ತಿಬ್ಬರು ಮಾಫಿ ಸಾಕ್ಷಿಗೆ ರೆಡಿ – ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಶುರುವಾಯ್ತಾ?

ರೇಣುಕಾಸ್ವಾಮಿ ಕೇಸ್‌ನಲ್ಲಿ ಮತ್ತಿಬ್ಬರು ಮಾಫಿ ಸಾಕ್ಷಿಗೆ ರೆಡಿ – ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಶುರುವಾಯ್ತಾ?

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ  ಇದೀಗ ಮತ್ತಿಬ್ಬರು ಮಾಫಿ ಸಾಕ್ಷಿ ಮಾಡುವಂತೆ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಪ್ರಕರಣ ಸಂಬಂಧ ಎ14 ಪ್ರದೋಷ್ ಮಾಫಿ ಸಾಕ್ಷಿ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ  59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಮತ್ತಿಬ್ಬರನ್ನು ಮಾಫಿ ಸಾಕ್ಷಿ ಮಾಡುವಂತೆ ವಕೀಲರು ಮನವಿ ಮಾಡಿದ್ದಾರೆ.  ಪ್ರಕರಣದ A8 ರವಿಶಂಕರ್, A10  ವಿನಯ್ ಪರ ವಕೀಲರು ಈ  ಮನವಿ ಸಲ್ಲಿಸಲು ಮುಂದಾಗಿದ್ದಾರೆ.  ಈ ಮೂಲಕ ನಟ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊ*ಲೆ  ಕೇಸ್‌ಗೆ ಬಿಗ್ ಟ್ವಿಸ್ಟ್ – ದಶರ್ನ್ ಬಗ್ಗೆ ಸತ್ಯ ಬಾಯಿ ಬಿಡೋಕೆ A14 ಪ್ರದೋಷ್ ರೆಡಿ  

 A7 ರವಿಶಂಕರ್, ಸ್ಟೋನಿ ಬ್ರೂಕ್ಸ್ ಪಬ್ ಮಾಲೀಕ A10 ವಿನಯ್ ಮಾಫಿ ಸಾಕ್ಷಿಗೆ ಮನವಿ ಮಾಡಿದ್ದಾರೆ. ದಯವಿಟ್ಟು ನಮ್ಮನ್ನು ಪರಿಗಣಿಸಿ ಅಂತ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಆದರೆ ಪ್ರದೋಷ್ ಪರ ವಕೀಲ ದಿವಾಕರ್‌ ಆಕ್ಷೇಪಿಸಿದ್ರು. ಮೊದಲು ನಾವು ಅರ್ಜಿ ಹಾಕಿದ್ದು, ನಿಮ್ಮ ಅರ್ಜಿ ಪರಿಗಣನೆ ಇಲ್ಲ. ಕ್ಲಬ್ ಮಾಡಲು ಆಗೋದಿಲ್ಲ.. ಉಳಿದವರು ಬೇಕಿದ್ದರೆ ಪ್ರತ್ಯೇಕ ಅರ್ಜಿ ಹಾಕಲಿ ಅಂತಾ ಕೋರ್ಟ್‌ಗೆ ಪ್ರದೋಷ್ ಪರ ವಕೀಲರು ಮನವಿ ಮಾಡಿದ್ದಾರೆ.
ಪ್ರಕರಣದಲ್ಲಿ ಸತ್ಯ ಹೇಳುತ್ತೇನೆ ಕ್ಷಮೆ ನೀಡುವಂತೆ ಪ್ರದೋಷ್ ಪರ ವಕೀಲರು 59ನೇ ಸಿಸಿಹೆಚ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರತ್ಯೇಕ ಜೈಲು ಕೊಠಡಿಯಿಂದ ಕೋರ್ಟ್ ಗೆ ಪ್ರದೋಷ್ ಹಾಜರುಪಡಿಸಬೇಕು. ದರ್ಶನ್ ಇರುವ ಕೊಠಡಿ ಬಿಟ್ಟು ಬೇರೆ ಜೈಲು ಕೊಠಡಿಯಿಂದ‌ ಹಾಜರುಪಡಿಸಲು ಮನವಿ ಮಾಡಲಾಗಿದೆ. ಈ ಬಗ್ಗೆ ಪ್ರಾಸಿಕ್ಯೂಷನ್ ನಿಲುವು ತಿಳಿಸಲು ಕೋರ್ಟ್ ಸೂಚನೆ ನೀಡಿದೆ

Kishor KV