FITNESS ಇಲ್ಲದ ಟೀಂ ಇಂಡಿಯಾ – Bronco ಟೆಸ್ಟ್ ಮತ್ತಷ್ಟು ಟೈಟ್ ಆಗುತ್ತಾ?
ಫಿಸಿಯೋ ಟಾರ್ಗೆಟ್ ಮಾಡಿದ್ದೇಕೆ BCCI?

ಟೀಂ ಇಂಡಿಯಾದಲ್ಲಿ ಒಂದ್ಕಡೆ ಸಾಲು ಸಾಲು ಸರಣಿಗಳನ್ನ ಸೋಲ್ತಾ ಇದ್ರೆ ಮತ್ತೊಂದ್ಕಡೆ ಆಟಗಾರರ ಇಂಜುರಿಯೂ ದೊಡ್ಡ ಸವಾಲಾಗಿದೆ. ಕ್ರೂಶಿಯಲ್ ಪಂದ್ಯಗಳಲ್ಲೇ ಗಾಯದಿಂದಾಗಿ ಹೊರ ಬೀಳ್ತಿದ್ದಾರೆ. ಸ್ಟಾರ್ ಪ್ಲೇಯರ್ಗಳ ಆಬ್ಸೆನ್ಸ್ ಸರಿಯಾಗೇ ಹೊಡೆತ ನೀಡಿದೆ. ಅಟ್ಪ್ರಸೆಂಟ್ ಆರೇಳು ಆಟಗಾರರು ಇಂಜುರಿಯಾಗಿದ್ದಾರೆ. ಸೋ ಮುಂದಿನ ದಿನಗಳಲ್ಲಿ ಆಟಗಾರರ ಫಿಟ್ನೆಸ್ ಕಾಪಾಡಲು ಬಿಸಿಸಿಐ ಹೊಸ ಪ್ಲ್ಯಾನ್ ಮಾಡಿದೆ. ಇನ್ಮುಂದೆ ಫಿಟ್ನೆಸ್ ಪರೀಕ್ಷೆ ಮತ್ತಷ್ಟು ಟೈಟ್ ಆಗಲಿದೆ.
ಇದನ್ನೂ ಓದಿ : LSG ಮಾಲೀಕರಿಂದ ಪ್ರತಿಬಾರಿಯೂ ಮಾನಸಿಕ ಹಿಂಸೆ – ಕಹಿ ಅನುಭವವನ್ನು ವಿವರಿಸಿದ ಕೆ.ಎಲ್ ರಾಹುಲ್
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧವಾಗ್ತಿರೋ ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಂಖ್ಯೆ ಜಾಸ್ತಿಯಾಗಿದೆ. ಬೌಲಿಂಗ್ ಬ್ರಹ್ಮಾಸ್ತ್ರವಾಗಿರೋ ಜಸ್ಪ್ರೀತ್ ಬುಮ್ರಾಗೆ ಮೊಣಕಾಲಿನ ಜಾಯಿಂಟ್ ಮತ್ತು ಕಾರ್ಟಿಲೆಜ್ ಭಾಗಕ್ಕೆ ಗಾಯವಾಗಿದ್ದು ಲಂಕಾ ಸರಣಿಯಿಂದ ಹೊರಬಿದ್ದಿದ್ದಾರೆ. ವಾಷಿಂಗ್ಟನ್ ಸುಂದರ್ ಹ್ಯಾಮ್‌ಸ್ಟ್ರಿಂಗ್ ಸ್ಟ್ರೈನ್ ನಿಂದ ಬಳಲ್ತಿದ್ದಾರೆ. ಹರ್ಷಿತ್ ರಾಣಾ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಲೆಫ್ಟ್ ಕ್ವಾಡ್ರಿಸೆಪ್ಸ್ ಗಾಯದಿಂದ ಸಫರ್ ಆಗಿದ್ದಾರೆ. ಆಕಾಶ್ ದೀಪ್ ಬೆನ್ನಿನ ಭಾಗದ ಸ್ಟ್ರೆಸ್ ರಿಯಾಕ್ಷನ್ನಿಂದ ಬಳಲುತ್ತಿದ್ದಾರೆ. ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಗ್ರೇಡ್ 2 ಹ್ಯಾಮ್‌ಸ್ಟ್ರಿಂಗ್ ಟೇರ್ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಹೀಗೆ ಭಾರತದ ಪರ ಆಡುವ ಆಟಗಾರರೇ ತಂಡದಿಂದ ಹೊರಗುಳಿದಿರೋದು ಪರ್ಫಾಮೆನ್ಸ್ ವಿಚಾರದಲ್ಲೂ ಹೊಡೆತ ನೀಡ್ತಿದೆ. ಹೀಗಾಗಿ ಈ ಇಂಜುರಿ ಸಮಸ್ಯೆಯನ್ನ ಸೀರಿಯಸ್ ಆಗಿ ಪರಿಗಣಿಸಿರೋ ಬಿಸಿಸಿಐ ಫಿಟ್ನೆಸ್ ಟೆಸ್ಟ್ ಮತ್ತಷ್ಟು ಕಠಿಣಗೊಳಿಸೋಕೆ ಮುಂದಾಗಿದೆ.
ಫಿಟ್ ಇಲ್ಲದಿದ್ರೂ ಕ್ಲಿಯರೆನ್ಸ್ ಲೆಟರ್ ಸಿಗುತ್ತಿದ್ಯಾ?
ಪ್ರಸ್ತುತ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಫಿಸಿಯೋ ಕಮಲೇಶ್ ಜೈನ್ ಆಗಿದ್ದಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಭಾರತ ತಂಡದ ಆಟಗಾರರ ಫಿಟ್ನೆಸ್ ಮಟ್ಟ ಕುಸಿಯುತ್ತಿರೋದು, ಮೇನ್ ಪ್ಲೇಯರ್ಗಳೇ ಪದೇ ಪದೇ ಗಾಯದ ಸಮಸ್ಯೆಗೆ ಒಳಗಾಗುತ್ತಿರುವುದರಿಂದ ಬಿಸಿಸಿಐ ಹಾಗೂ ತಂಡದ ಮ್ಯಾನೇಜ್‌ಮೆಂಟ್ ಇವರ ಕಾರ್ಯವೈಖರಿಯನ್ನು ವಿಚಾರಣೆಗೆ ಒಳಪಡಿಸಿದೆ. ಹಾಗೇ ಶುಭ್ಮನ್ ಗಿಲ್ ಮತ್ತು ಗೌತಮ್ ಗಂಭೀರ್ ಕೂಡ ಇಂಜುರಿ ಹೆಚ್ಚುತ್ತಿರೋ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದೂ ಅಲ್ದೇ ಆಟಗಾರರು ಕಂಪ್ಲೀಟ್ ಆಗಿ ಚೇತರಿಸಿಕೊಳ್ಳುವ ಮುನ್ನವೇ ಅವರಿಗೆ ಆಡಲು ಕ್ಲಿಯರೆನ್ಸ್ ನೀಡಲಾಗುತ್ತಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.ಹೀಗಾಗಿ ಲಂಕಾ ಟೆಸ್ಟ್ ಸರಣಿ ಬಳಿಕ ಕಮಲೇಶ್ ಜೈನ್ ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಯನ್ನ ಚೇಂಜ್ ಮಾಡೋ ಬಗ್ಗೆಯೂ ಚಿಂತನೆ ನಡೆದಿದೆ. ಅಷ್ಟೇ ಅಲ್ಲೆ ಯಾವುದೇ ಆಟಗಾರ ಫಿಟ್ನೆಸ್ ಇಲ್ಲದಿದ್ದರೆ ತಕ್ಷಣವೇ ಬಿಸಿಸಿಐಗೆ ವರದಿ ಮಾಡುವಂತೆ ಫಿಸಿಯೋಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಹಾಗೇ ಬ್ರಾಂಕೋ ಟೆಸ್ಟ್ ಕೂಡ ಮತ್ತಷ್ಟು ಟೈಟ್ ಮಾಡ್ಲಾಗ್ತಿದೆ.
ಫಿಟ್ ನೆಸ್ ಕಾಪಾಡಲು ಹೊಸ ಪ್ಲ್ಯಾನ್ ಮಾಡಿದ ಬಿಸಿಸಿಐ!
ಪ್ರಸ್ತುತ ಟೀಂ ಇಂಡಿಯಾದಲ್ಲಿ ಆಟಗಾರರ ಫಿಸಿಕಲ್ ಸಾಮರ್ಥ್ಯವನ್ನ ಅಳೆಯಲು ಬಿಸಿಸಿಐ ಸಾಂಪ್ರದಾಯಿಕ ಯೋ-ಯೋ ಟೆಸ್ಟ್ ಬದಲಿಗೆ ಮತ್ತಷ್ಟು ಕಠಿಣವಾಗಿರುವ ಬ್ರಾಂಕೊ ಟೆಸ್ಟ್ ಅನ್ನು ಕಡ್ಡಾಯಗೊಳಿಸಿದೆ. ಇತ್ತೀಚೆಗೆ ಆಟಗಾರರಲ್ಲಿ ದೈಹಿಕ ಫಿಟ್ನೆಸ್ ಮಟ್ಟ ಕುಸಿಯುತ್ತಿರುವುದನ್ನು ತಡೆಯಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಈ ಮಹತ್ವದ ಬದಲಾವಣೆ ತಂದಿದೆ. ಭಾರತ ತಂಡದ ಸ್ಟ್ರೆಂತ್ ಮತ್ತು ಕಂಡೀಷನಿಂಗ್ ಕೋಚ್ ಆದ ಆಡ್ರಿಯನ್ ಲೆ ರೌಕ್ಸ್ ಅವರ ಮಾರ್ಗದರ್ಶನದಲ್ಲಿ ಈ ಟೆಸ್ಟ್ ಅನ್ನು ಜಾರಿಗೆ ತರಲಾಗಿದೆ. ಹಿಂದೆ ಈ ಟೆಸ್ಟ್‌ಗೆ 6 ನಿಮಿಷಗಳ ಸಮಯ ಇತ್ತು. ಆದರೆ ಬಿಸಿಸಿಐ ಈಗ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದು, ಎಲ್ಲ ಆಟಗಾರರಿಗೆ ಒಂದೇ ರೀತಿಯ ಕಡ್ಡಾಯ ಮಾನದಂಡ ನಿಗದಿಪಡಿಸಿದೆ.
ಬ್ರಾಂಕೋ ಟೆಸ್ಟ್ ಏಕೆ ಮುಖ್ಯ?
ಬ್ರಾಂಕೋ ಟೆಸ್ಟ್ ನಲ್ಲಿ ಆಟಗಾರರು 1,200 ಮೀಟರ್ ಓಟದ ಡ್ರಿಲ್
ರನ್ನಿಂಗ್ ಡ್ರಿಲ್ ಅನ್ನು 5 ನಿಮಿಷ 15 ಸೆಕೆಂಡ್- 5 ನಿಮಿಷ 20 ಸೆಕೆಂಡ್ ಕಂಪ್ಲೀಟ್
ಜೊತೆಗೆ ಆಟಗಾರರು 2 ಕಿ.ಮೀ ಓಟವನ್ನು 9 ರಿಂದ 10 ನಿಮಿಷಗಳಲ್ಲಿ ಕಂಪ್ಲೀಟ್
ಗಾಯದಿಂದ ರಿಕವರ್ ಆಗಿ ತಂಡಕ್ಕೆ ಕಂ ಬ್ಯಾಕ್ ಮಾಡ್ಬೇಕಂದ್ರೆ 2 ಬಾರಿ ಟೆಸ್ಟ್
ಬೇರೆ ಬೇರೆ ದಿನಗಳಲ್ಲಿ ಎರಡು ಬಾರಿ ಬ್ರೋಂಕೊ ಟೆಸ್ಟ್ ಪಾಸ್ ಮಾಡುವುದು ಕಡ್ಡಾಯ
ಶಟಲ್ ರನ್ ಮಾದರಿ ಅಂದ್ರೆ 20 ಮೀಟರ್, 40 ಮೀಟರ್, 60 ಮೀಟರ್ ಓಟ, 5 ಸೆಟ್
ನೇರ ಓಟವಲ್ಲದೆ, 25 ಬಾರಿ ವೇಗವಾಗಿ ಓಡಿ ಟರ್ನ್ ತಗೊಳ್ಳೋದ್ರಿಂದ ಸಾಮರ್ಥ್ಯ ಹೆಚ್ಚು

ನೋಡಿರಿ

