ಶಮಿಯದ್ದು ಮುಗಿದ ಅಧ್ಯಾಯ – ಟೆಸ್ಟ್ ಮಾದರಿಗೆ ಫಿಟ್ ನೆಸ್ ಇಲ್ವಾ?
IND ಬಾಗಿಲು ಮುಚ್ಚಿದ್ರಾ ಅಗರ್ಕರ್?

ಶಮಿಯದ್ದು ಮುಗಿದ ಅಧ್ಯಾಯ – ಟೆಸ್ಟ್ ಮಾದರಿಗೆ ಫಿಟ್ ನೆಸ್ ಇಲ್ವಾ?IND ಬಾಗಿಲು ಮುಚ್ಚಿದ್ರಾ ಅಗರ್ಕರ್?

ಟೀಂ ಇಂಡಿಯಾದ ಮೋಸ್ಟ್ ಪ್ರಾಮಿನೆಂಟ್ ಬೌಲರ್ ಆಗಿ ತಮ್ಮದೇ ಆದ ಟ್ರೇಡ್ ಮಾರ್ಕ್ ಸೆಟ್ ಮಾಡಿದವ್ರು ಮೊಹಮ್ಮದ್ ಶಮಿ. ಬಟ್ ಬ್ಯಾಡ್​ಲಕ್ ಅವ್ರ ಪ್ರತಿಭೆಗೆ ತಕ್ಕಂತೆ ಟೀಂ ಇಂಡಿಯಾದಲ್ಲಿ ಅವಕಾಶಗಳು ಸಿಕ್ತಿಲ್ಲ. ಅಭಿಮಾನಿಗಳು ಕೂಡ ಇಂದಿಗೂ ಕಾಯ್ತಾನೇ ಇರ್ತಾರೆ. ಈ ಸರಣಿಯಲ್ಲಿ ಅಥವಾ ಈ ಟೂರ್ನಿಗಲ್ಲಿ ಚಾನ್ಸ್ ಕೊಡ್ತಾರೆ ಅಂತಾ. ಬಟ್ ಈಗಿರೋ ಸಿಚುಯೇಷನ್ ನೋಡಿದ್ರೆ ಟೀಂ ಇಂಡಿಯಾ ಪರ ಶಮಿಯದ್ದು ಮುಗಿದ ಅಧ್ಯಾಯವೇ ಆಗಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವ್ರೇ ಈ ಬಗ್ಗೆ ಕ್ಲಿಯರ್ ಆಗಿ ಹೇಳಿದ್ದಾರೆ.

ಇದನ್ನೂ ಓದಿ  : PAK ಕ್ರಿಕೆಟರ್ಸ್ 2 ವರ್ಷ ಬ್ಯಾನ್ – PCBಯನ್ನೇ ಧಿಕ್ಕರಿಸಿದ್ರಾ ಪ್ಲೇಯರ್ಸ್?

ರೈಟ್ ಆರ್ಮ್ ಫಾಸ್ಟ್ ಬೌಲರ್ ಆಗಿರುವ ಮೊಹಮ್ಮದ್ ಶಮಿ ತಮ್ಮ ಅದ್ಭುತ ಸೀಮ್ ಹಾಗೂ ರಿವರ್ಸ್ ಸ್ವಿಂಗ್ ಬೌಲಿಂಗ್ ಸ್ಟೈಲ್​ನಿಂದಲೇ ಜಾಗತಿಕ ಕ್ರಿಕೆಟ್‌ನಲ್ಲಿ ಅನ್‌ಪ್ಲೇಯಬಲ್ ಅಂದ್ರೆ ಎದುರಿಸಲು ಅಸಾಧ್ಯವಾದ ಬೌಲರ್ ಎಂದೇ ಕರೆಸಿಕೊಂಡಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಕೇವಲ 7 ಪಂದ್ಯಗಳಿಂದ 24 ವಿಕೆಟ್ ಕಿತ್ತು ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎನ್ನುವ ಐತಿಹಾಸಿಕ ದಾಖಲೆ ಬರೆದಿದ್ರು. ಈ ಅದ್ಭುತ ಸಾಧನೆಗಾಗಿಯೇ ಭಾರತ ಸರ್ಕಾರದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯೂ ಸಿಕ್ಕಿದೆ. ಆದ್ರೆ ಮತ್ತೆ ಅವಕಾಶಗಳು ಮಾತ್ರ ಸಿಗ್ತಿಲ್ಲ.

ಶಮಿಗೆ ಬೇಕಂತಲೇ ಚಾನ್ಸ್ ನೀಡ್ತಿಲ್ವಾ ಆಯ್ಕೆ ಸಮಿತಿ?

ಜಸ್ಪ್ರೀತ್ ಬುಮ್ರಾ ಭಾರತದ ಪರ ಎಲ್ಲಾ ಮಾದರಿಗಳಲ್ಲೂ ಗ್ರೇಟ್ ಬೌಲರ್. ಆದ್ರೆ ಇಂಜುರಿಯೇ ದೊಡ್ಡ ಭೂತವಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನ ಆಡಿದ್ದ ಬುಮ್ರಾ ಇಂಜುರಿಯಿಂದಾಗಿ ಮೂರನೇ ಪಂದ್ಯ ಮಿಸ್ ಮಾಡಿಕೊಂಡಿದ್ರು. ಈಗ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿಯೂ ಹೊರಬಿದ್ದಿದ್ದಾರೆ. ಸೋ ಬುಮ್ರಾ ಬದಲಿಗೆ ಲಂಕಾ ಸರಣಿಗೆ ಆಕಿಬ್ ನಬಿಗೆ ಬದಲಿ ಆಟಗಾರನಾಗಿ ಅವಕಾಶ ನೀಡಲಾಯ್ತು. ದೇಶೀ ಕ್ರಿಕೆಟ್‌ನಲ್ಲಿ ನಬಿ ಅವರ ಪರ್ಫಾಮೆನ್ಸ್ ನೋಡಿದ್ದವ್ರೆಲ್ಲಾ ಅವಕಾಶ ಸಿಕ್ಕಿದ್ದಕ್ಕೆ ಖುಷಿ ಪಟ್ಟಿದ್ರೂ ಇನ್ನೊಂದಷ್ಟು ಮಂದಿ ಶಮಿಗೆ ಚಾನ್ಸ್ ಸಿಗ್ಬೇಕಿತ್ತು ಅಂದಿದ್ದಾರೆ. 2025 ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20ಐನಲ್ಲಿ ಶಮಿ ಕೊನೇ ಬಾರಿ ಕಾಣಿಸಿಕೊಂಡಿದ್ದು. 2023 ರಿಂದ ರಾಷ್ಟ್ರೀಯ ತಂಡಕ್ಕಾಗಿ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧ ಭಾರತಕ್ಕಾಗಿ ಅವರ ಕೊನೆಯ ಏಕದಿನ ಪಂದ್ಯ ಆಡಿದ್ರು. ಆರಂಭದಲ್ಲಿ ಫಿಟ್ನೆಸ್ ಕಾರಣಕ್ಕೆ ಅವ್ರನ್ನ ತಂಡದಿಂದ ಹೊರಗಿಟ್ರೂ ಈಗ ಆಯ್ಕೆ ಸಮಿತಿಯೇ ಅವಕಾಶಗಳನ್ನ ನೀಡ್ತಿಲ್ಲ ಅನ್ನೋದೇ ಸತ್ಯವಾಗಿದೆ. ಅದ್ರಲ್ಲೂ ಅಜಿತ್ ಅಗರ್ಕರ್ ಹೇಳಿರೋ ಮಾತೇ ಪ್ರಶ್ನಾರ್ಥವಾಗಿದೆ.

ಟೆಸ್ಟ್ ತಂಡಕ್ಕೆ ಬೇಕಾದ ಫಿಟ್ ನೆಸ್ ಶಮಿಗಿಲ್ಲ ಎಂದ ಅಗರ್ಕರ್!

ಶಮಿ ಅವ್ರ ಕಂ ಬ್ಯಾಕ್ ಬಗ್ಗೆ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರನ್ನು ಕೇಳಿದಾಗ, ಶಮಿ ಟೆಸ್ಟ್ ಕ್ರಿಕೆಟ್ ಆಡಲು ಅಗತ್ಯವಾದ ಫಿಟ್ನೆಸ್ ಹೊಂದಿಲ್ಲ ಎಂದಿದ್ದಾರೆ. ಆದ್ರೆ ಶಮಿ ಪರ್ಫಾಮೆನ್ಸ್ ಚೆನ್ನಾಗೇ ಇದೆ.  ಕೊನೆಯ ಏಳು ರಣಜಿ ಟ್ರೋಫಿ ಪಂದ್ಯಗಳಲ್ಲಿ, ಶಮಿ 1,383 ಎಸೆತಗಳನ್ನು ಎಸೆದಿದ್ದಾರೆ. 16.72 ಸರಾಸರಿಯಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವೇಳೆ 50 ಮೇಡನ್ ಓವರ್ ಮಾಡಿದ್ದಾರೆ. ಹಾಗೇ ಮೂರು ಬಾರಿ ಐದು ವಿಕೆಟ್‌ಗಳನ್ನ ಬೇಟೆಯಾಡಿದ್ದಾರೆ. ಹೀಗಿದ್ರೂ ಅವ್ರಿಗೆ ತಂಡಕ್ಕೆ ಕಂ ಬ್ಯಾಕ್ ಮಾಡೋ ಅದೃಷ್ಟ ಸಿಕ್ಕಿಲ್ಲ. ಇದೇ ಅದೇ ರಣಜಿ ಟ್ರೋಫಿ ಅಭಿಯಾನದಲ್ಲಿ ಆಕಿಬ್ ನಬಿ 12.56 ಸರಾಸರಿಯಲ್ಲಿ 60 ವಿಕೆಟ್‌ಗಳನ್ನು ಪಡೆದು ಮಿಂಚಿದ್ರು. ಇದೇ ಕಾರಣಕ್ಕೆ ಶಮಿಯನ್ನ ಓವರ್​ ಟೇಕ್ ಮಾಡಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಒಟ್ನಲ್ಲಿ ಮೊಹಮ್ಮದ್ ಶಮಿ ತಮ್ಮ ಕ್ರಿಕೆಟ್ ಕೆರಿಯರ್​ನ ಪೀಕ್ ಪರ್ಫಾಮೆನ್ಸ್ ನೀಡುವಾಗ್ಲೇ ಇಂಜುರಿ ಭೂತದಿಂದಾಗಿ ತಿಂಗಳುಗಟ್ಟಲೆ ಮೈದಾನದಿಂದಲೇ ದೂರ ಉಳೀಬೇಕಾಯ್ತು. ಈಗ ಟೀಂ ಇಂಡಿಯಾದಿಂದಲೇ ಹೊರಗಿಡಲಾಗ್ತಿದೆ. ಸದ್ಯದ ಬೆಳವಣಿಗೆಗಳನ್ನ ನೋಡ್ತಾ ಇದ್ರೆ ಭಾರತದ ಪರ ಶಮಿಯದ್ದು ಮುಗಿದ ಅಧ್ಯಾಯವೇ ಆಗಿದೆ.

Shantha Kumari

Leave a Reply

Your email address will not be published. Required fields are marked *