ಬಿಎಸ್ವೈ ಪುತ್ರನಿಂದಾಗಿ ಸಂಪುಟ ವಿಸ್ತರಣೆ ಮಾಡಲಿಲ್ಲ – ಸಿದ್ದರಾಮಯ್ಯ ಹೊಸ ಬಾಂಬ್..!
ರಾಜ್ಯ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಮಾಡದ ಬಿಜೆಪಿ ವಿರುದ್ಧ ವಿಪಕ್ಷನಾಯಕ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರನಿಗಾಗಿ ಸಂಪುಟ ವಿಸ್ತರಣೆ ಮಾಡಲಿಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಮುಂದೆ ಬರೋದು “ಕಾಂತಾರ-2” ಅಲ್ಲ! – ಗುಟ್ಟು ರಟ್ಟು ಮಾಡಿದ ರಿಷಭ್
ಕಲಬುರಗಿ ಜಿಲ್ಲೆಯಲ್ಲಿ ಮಾತನಾಡಿದ ವಿಪಕ್ಷನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿಯವರ ಕರ್ನಾಟಕ ಭೇಟಿ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಾವು ಮಾಡಿದ ಕೆಲಸಗಳನ್ನೇ ಉದ್ಘಾಟನೆ ಮಾಡೋದು. ಹೆಚ್ಎಎಲ್ ಯೋಜನೆ ಯುಪಿಎ ಸರ್ಕಾರ ಅವಧಿಯಲ್ಲೇ ಮಾಡಿದ್ದು. ಈಗ ಅವರು ಅದನ್ನ ಉದ್ಘಾಟನೆ ಮಾಡ್ತಿದ್ದಾರೆ. ಹಾಗೇ ಉತ್ತರ ಕರ್ನಾಟಕದಲ್ಲಿ ಲಂಬಾಣಿ ಜನರಿಗೆ ಹಕ್ಕು ಪತ್ರ ಕೊಡೋಕೆ ಮೋದಿ ಬಂದಿದ್ರು. ಇದರ ಕಾನೂನು ಮಾಡಿದವ್ರು ಕೂಡ ನಾವೇ.
ತಾಂಡಾಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು, ಹಟ್ಟಿಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡ್ಬೇಕು ಅಂತಾ ನಾನು ಮುಖ್ಯಮಂತ್ರಿಯಾಗಿದ್ದಾಗ ಕಾಗೋಡು ತಿಮ್ಮಪ್ಪನವರು ಕಂದಾಯ ಸಚಿವರಾಗಿದ್ದಾಗ ಕಾನೂನು ಮಾಡಿದ್ದೆವು. ಹೇಗೆ ಉಳುವವನೇ ಭೂಒಡೆಯ ಅಂತಾ ಇತ್ತೋ ಹಾಗೇ ವಾಸಿಸುವವನೇ ಮನೆ ಒಡೆಯ ಅಂತಾ ಮಾಡಿದ್ದೆವು. ಕಾನೂನು ಮಾಡಿದವರು ನಾವು, ಆದ್ರೆ ಹಕ್ಕುಪತ್ರ ಹಂಚೋಕೆ ಬಿಜೆಪಿಯವ್ರು ಪ್ರಧಾನಿಯನ್ನ ಕರೆದುಕೊಂಡು ಬಂದಿದ್ದಾರೆ. ಬಿಜೆಪಿಯವ್ರಿಗೆ ನರೇಂದ್ರ ಮೋದಿಯವ್ರೇ ಬಂಡವಾಳ. 40 ಪರ್ಸೆಂಟ್ ಸರ್ಕಾರ, ವಚನಭ್ರಷ್ಟತೆ, ಜನವಿರೋಧಿ ಅಲೆ ಇದೆ. ಹಾಗೇ ಬಿಜೆಪಿಯವ್ರು ಮೋದಿನ ಕರ್ಕೊಂಡು ಬಂದ್ರೂ ಏನೂ ಪ್ರಯೋಜನ ಇಲ್ಲ. ಈಗಾಗ್ಲೇ ಕರ್ನಾಟಕದ ಜನ ತೀರ್ಮಾನ ಮಾಡಿದ್ದಾರೆ. ಬಿಜೆಪಿನ ಸೋಲಿಸ್ಬೇಕು. ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತೀರ್ಮಾನ ಮಾಡಿದ್ದಾರೆ ಎಂದ್ರು.
ಇದೇ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬ್ರಾಹ್ಮಣರು ಸಿಎಂ ಆಗ್ತಾರೆ ಎಂಬ ಹೆಚ್ಡಿಕೆ ಹೇಳಿಕೆ ಕುರಿತು ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ರು. ಯಾರು ಮುಖ್ಯಮಂತ್ರಿ ಅನ್ನೋದನ್ನ ಆರ್ಎಸ್ಎಸ್ನವ್ರು ತೀರ್ಮಾನ ಮಾಡ್ತಾರೆ. ಆದ್ರೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ತಾನೇ ತೀರ್ಮಾನ ಮಾಡೋದು. ಕರ್ನಾಟಕದಲ್ಲಿ ಬಿಜೆಪಿ ಯಾವಾಗ ತಾನೇ ಬಹುಮತ ಬಂದಿದೆ. 2008ರಲ್ಲಿ 110 ಸ್ಥಾನ, 2013ರಲ್ಲಿ 40 ಸ್ಥಾನ, 2018ರಲ್ಲಿ 104 ಸ್ಥಾನ ಗೆದ್ದಿದ್ದಾರೆ. ಇನ್ನು 2023ರಲ್ಲಿ 50, 60 ಕ್ಷೇತ್ರದಲ್ಲಷ್ಟೇ ಗೆಲ್ಲಬಹುದು ಎಂದಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಗೂಳಿಹಟ್ಟಿ ಶೇಖರ್ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ್ದಾರೆ. 20 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಅಂತಾ ಗೂಳಿಹಟ್ಟಿ ಶೇಖರ್ ಸತ್ಯ ಹೇಳಿದ್ದಾರೆ. ಮಾನಪ್ಪ ವಜ್ಜಲ್ ನಾರಾಯಣಪುರ ಎಡದಂಡೆ ಕಾಲುವೆಯಲ್ಲಿ ಕೆಲ್ಸನೇ ಮಾಡದೆ ಹಣ ಪಡೆದಿದ್ದಾರೆ. ಬಿಜೆಪಿಯವರು ಕೆಲಸವನ್ನೇ ಮಾಡದಿದ್ರೂ ಹಣ ಕೊಟ್ಟಿದ್ದಾರೆ. ಯಾಕಂದ್ರೆ 40 ಪರ್ಸೆಂಟ್ ಕಮಿಷನ್ ಹೊಡೆದಿದ್ದಾರಲ್ಲ ಅದ್ಕೆ. ಹೇಮಾವತಿಯಲ್ಲೂ ಹಾಗೇ ಮಾಡಿದ್ದಾರೆ ಅಂದ್ರು.
ಇದೇ ವೇಳೆ ವಿಪಕ್ಷನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಇದು ಕಡೇ ಚುನಾವಣೆ. ಬಳಿಕ ಇಬ್ಬರು ತೀರ್ಥಯಾತ್ರೆಗೆ ಹೋಗ್ತಾರೆ ಎಂದು ಆರ್. ಅಶೋಕ್ ನೀಡಿದ್ದ ಹೇಳಿಕೆಗೂ ಸಿದ್ದು ಟಾಂಗ್ ಕೊಟ್ಟಿದ್ದಾರೆ. ಅಶೋಕ್ಗಿಂಥ ಮೊದಲೇ ನಾನು ರಾಜಕೀಯಕ್ಕೆ ಬಂದವನು. 1978ರಿಂದಲೂ ರಾಜಕೀಯದಲ್ಲಿ ಇದ್ದೀನಿ. 45 ವರ್ಷ ಆಯ್ತು. ಅಂಥಾದ್ರಲ್ಲಿ ಅಶೋಕ್ಗೆ ಕೊನೇ ಚುನಾವಣೆ ಅಂತಾ ಹೇಳೋಕೆ ಯಾವ ನೈತಿಕತೆ ಇದೆ. ಅಶೋಕ್ ಹತ್ರ ಪಾಠ ಕಲಿಯಬೇಕಾ ನಾನು ಎಂದು ತಿರುಗೇಟು ಕೊಟ್ರು.
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಗ್ಗೆಯೂ ಮಾತನಾಡಿದ ಸಿದ್ದು, ಬಿಎಸ್ವೈಗೆ ಪಾಪ ಅನ್ಯಾಯ ಮಾಡಿಬಿಟ್ರು. ಆರ್ಎಸ್ಎಸ್ನವ್ರು ಸಿಎಂ ಸ್ಥಾನದಿಂದ ಇಳಿಸಿ ಬಸವರಾಜ ಬೊಮ್ಮಾಯಿಯವರನ್ನ ಸಿಎಂ ಮಾಡಿದ್ರು. ಬಸವರಾಜ ಬೊಮ್ಮಾಯಿಗೂ ಯಡಿಯೂರಪ್ಪರಿಗೂ ಆಗಲ್ಲ ಈಗ. ಯಾಕಂದ್ರೆ ಯಡಿಯೂರಪ್ಪ ಮಗನನ್ನ ಮಂತ್ರಿ ಮಾಡ್ಬೇಕಾಗುತ್ತೆ ಅಂತಾನೇ ಮಂತ್ರಿ ಮಂಡಲ ವಿಸ್ತರಣೆ ಮಾಡಲಿಲ್ಲ. 6 ಸ್ಥಾನಗಳನ್ನ ಒಂದೂವರೆ ವರ್ಷದಿಂದ ಖಾಲಿ ಇಟ್ಕೊಂಡು ಕೂತಿದ್ದಾರೆ. ಎಲ್ಲಾ ಇಲಾಖೆಗಳನ್ನ ಮುಖ್ಯಮಂತ್ರಿಗಳೇ ನೋಡಿಕೊಳ್ತಿದ್ದಾರೆ. ಯಾಕಂದ್ರೆ ಲಂಚ ಜಾಸ್ತಿ ಸಿಗುತ್ತೆ ಮತ್ತು ಯಡಿಯೂರಪ್ಪರ ಮಗನನ್ನ ಮಂತ್ರಿ ಮಾಡಬಾರದು ಅಂತಾ ಹೀಗೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು.