ರಾಮಾಯಣ ಭಾಗ-1 ರಿಲೀಸ್ ದಿನಾಂಕ ಘೋಷಣೆ – ನವೆಂಬರ್ 6ಕ್ಕೆ ಅದ್ದೂರಿ ಬಿಡುಗಡೆ

ಟ್ರೇಲರ್ ಮೂಲಕವೇ ದಾಖಲೆ ಬರೆದ ರಾಮಾಯಣ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ರಾಮಾಯಣ ಚಿತ್ರದ ಮೊದಲ ಭಾಗವು ನವೆಂಬರ್ 6ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
ಇದನ್ನೂ ಓದಿ:ರಾಮಾಯಣದಲ್ಲಿ ರಾವಣನದ್ದೇ ಅಬ್ಬರ – ರಾಕಿಂಗ್ ಸ್ಟಾರ್ ಯಶ್ ರೌದ್ರಾವತಾರ
ರಾಮಾಯಣ ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲಕ್ಕೆ ತೆರೆಬಿದ್ದಿದೆ. ರಾಮಾಯಣ ಸಿನಿಮಾ ಎರಡು ಭಾಗಗಳಾಗಿ ತೆರೆಕಾಣಲಿದೆ. ಮೊದಲ ಭಾಗ ನವೆಂಬರ್ 6 ರಂದು ತೆರೆಕಾಣಲಿದೆ. ಈ ಸಿನಿಮಾ ನವೆಂಬರ್ 6ರಂದು ಬಿಡುಗಡೆ ಆದರೆ, ಶುಕ್ರವಾರದಿಂದ ಸೋಮವಾರದವರೆಗೂ ಕಲೆಕ್ಷನ್ ಸಿಗಬಹುದು ಅನ್ನೋ ಲೆಕ್ಕಾಚಾರವೂ ಇದೆ. ರಾಮಯಣ ಸಿನಿಮಾಕ್ಕೆ ನಿತೇಶ್ ತಿವಾರಿ ನಿರ್ದೇಶನವಿದೆ. ನಮಿತ್ ಮಲ್ಹೋತ್ರಾ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಅಭಿನಯಿಸುತ್ತಿದ್ದಾರೆ. ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜಿಮ್ಮರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ರಾಮಾಯಣ ಟ್ರೇಲರ್ ಬಿಡುಗಡೆಯಾದ ದಿನದಿಂದ ವೀಕ್ಷಕರನ್ನು ಕಾಡುತ್ತಿದ್ದ ಪ್ರಶ್ನೆ ಹನುಮಂತ ಎಲ್ಲಿ ಅನ್ನೋದು. ಇದೀಗ ರಾಮಾಯಣ ಸಿನಿಮಾ ಎರಡು ಭಾಗಗಳಾಗಿ ಬರುವುದರಿಂದ ಬಹುಷಃ ಮುಂದಿನ ಭಾಗದಲ್ಲಿ ಹನುಮಂತ ಎಂಟ್ರಿಯಾಗಬಹುದು ಎಂದು ಹೇಳಲಾಗುತ್ತಿದೆ. ಎರಡನೇ ಭಾಗದ ರಾಮಾಯಣ ಸಿನಿಮಾ 2027ಕ್ಕೆ ರಿಲೀಸ್ ಆಗಲಿದೆ.

ನೋಡಿರಿ

