ಕ್ರಿಸ್ಟಿಯಾನೊ ರೊನಾಲ್ಡೊ ವಿವಾಹಕ್ಕೆ ಭರ್ಜರಿ ಸಿದ್ಧತೆ- 5 ಮಕ್ಕಳಾದ ಮೇಲೆ ಮದುವೆಗೆ ಡೇಟ್ ಫಿಕ್ಸ್

ಪೋರ್ಚುಗಲ್ ನ ಫುಟ್ಬಾಲ್ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮದುವೆಗೆ ಡೇಟ್ ಫಿಕ್ಸ್ ಆಗಿದೆ. 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ, ಇದೀಗ ಬಹುಕಾಲದ ಗೆಳತಿ ಜೊತೆ ಹಸೆಮಣೆ ಏರಲಿದ್ದಾರೆ. 5 ಮುದ್ದಾದ ಮಕ್ಕಳ ಸಮ್ಮುಖದಲ್ಲಿ ವಿವಾಹ ನಡೆಯಲಿದೆ.
ಇದನ್ನೂ ಓದಿ:ಒಂದು ಕೈ ಇಲ್ಲದಿದ್ದರೂ ದೇಶಕ್ಕೆ ಕೀರ್ತಿ ತಂದ ದಿಲೀಪ್ – ಬಂಗಾರದ ಹುಡುಗನ ಹಿಂದಿದೆ ಮನಕಲಕುವ ಕಥೆ
ಕ್ರಿಸ್ಟಿಯಾನೊ ರೊನಾಲ್ಡೊ ವೈಯಕ್ತಿಕ ಜೀವನದ ಜೊತೆಗೆ ತಮ್ಮ ಆಟದ ಬಗ್ಗೆಯೂ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಕಳೆದ ವರ್ಷ ಅಂದರೆ ಆಗಸ್ಟ್ 2025ರಂದು ತಮ್ಮ ಪ್ರೇಯಸಿಗೆ 25 ಕೋಟಿಯ ಉಂಗುರ ಹಾಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ವಿವಾಹ ಮಾಡಿಕೊಳ್ಳುವುದಾಗಿ ಘೋಷಣೆ ಕೂಡಾ ಮಾಡಿದ್ದರು. ಇದಾಗಿ ಒಂದು ವರ್ಷದ ಬಳಿಕ ರೊನಾಲ್ಡೊ ಮದುವೆ ಆಗುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 8 ರಂದು ಐದು ಮಕ್ಕಳ ತಂದೆ ರೊನಾಲ್ಡೋ ಹಸೆಮಣೆ ಏರಲಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೋಡ್ರಿಗಸ್ ಜೋಡಿಯು ಆಗಸ್ಟ್ 8, 2026 ರಂದು ವಿವಾಹವಾಗಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಾಯ್ನಾಡಾದ ಪೋರ್ಚುಗಲ್‌ನ ಮಾಡೈರಾ ದ್ವೀಪದಲ್ಲಿರುವ ಐತಿಹಾಸಿಕ ಫುಂಚಾಲ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಧಾರ್ಮಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಮದುವೆಯ ನಂತರದ ಭರ್ಜರಿ ರಿಸೆಪ್ಷನ್ ಪಾರ್ಟಿಗಾಗಿ ಅಲ್ಲಿನ ಪ್ರಸಿದ್ಧ 5-ಸ್ಟಾರ್ ಹೋಟೆಲ್ ಆದ ಸವಾಯ್ ಪ್ಯಾಲೇಸ್ನ ಹಲವು ಫ್ಲೋರ್‌ಗಳನ್ನು ಮತ್ತು ಬಾರ್ ಏರಿಯಾಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ.
ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೋಡ್ರಿಗಸ್ ಮೊದಲ ಬಾರಿಗೆ ಭೇಟಿಯಾಗಿದ್ದು 2016 ರಲ್ಲಿ. ಜಾರ್ಜಿನಾ ಮ್ಯಾಡ್ರಿಡ್‌ನ ಪ್ರತಿಷ್ಠಿತ ‘ಗುಸ್ಸಿ’ ಐಷಾರಾಮಿ ಬಟ್ಟೆ ಮಳಿಗೆಯಲ್ಲಿ ಸಾಮಾನ್ಯ ಸೇಲ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಶಾಪ್ಗೆ ಆಗಮಿಸಿದ್ದ ರೊನಾಲ್ಡೊ ಅವರಿಗೆ ಜಾರ್ಜಿನಾ ಪರಿಚಯವಾಗಿದ್ದರು. ಇದಾದ ಬಳಿಕ ಇಬ್ಬರ ನಡುವೆ ಫ್ರೆಂಡ್ಶಿಪ್ ಬೆಳೆಯಿತು ಜನವರಿ 2017 ರಲ್ಲಿ ಜ್ಯೂರಿಚ್‌ನಲ್ಲಿ ನಡೆದ ಪ್ರತಿಷ್ಠಿತ ‘ಬೆಸ್ಟ್ ಫಿಫಾ ಫುಟ್‌ಬಾಲ್ ಅವಾರ್ಡ್ಸ್’ ರೆಡ್ ಕಾರ್ಪೆಟ್ ಮೇಲೆ ರೊನಾಲ್ಡೊ ಮತ್ತು ಜಾರ್ಜಿನಾ ಜೋಡಿಯಾಗಿ ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ತಮ್ಮ ಸಂಬಂಧವನ್ನು ಜಗತ್ತಿನ ಮುಂದೆ ಅಧಿಕೃತಗೊಳಿಸಿದರು.
ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಮಾಡೆಲ್ ಜಾರ್ಜಿನಾ ರೊಡ್ರಿಗಸ್ 8 ವರ್ಷಗಳಿಂದ ಒಟ್ಟಿಗೆ ಇದ್ದಾರೆ. ರೊನಾಲ್ಡೋ ಕ್ರಿಸ್ಟಿಯಾನೋ ಜೂನಿಯರ್‌ಗೆ 2010ರಲ್ಲಿ ತಂದೆಯಾಗಿದ್ದರು. ಆದರೆ, ಮೊದಲೇ ಮಗುವಿನ ತಾಯಿಯ ಗೌಪ್ಯತೆ ಹೊರ ಬಾರದಂತೆ ಅಗ್ರಿಮೆಂಟ್ ಅನ್ನು ಮಾಡಿಕೊಳ್ಳಲಾಗಿತ್ತು. ಇದಾದ ಬಳಿಕ ರಷ್ಯಾ ಮೂಲದ ಮಾಡಲ್ ಜೊತೆ ಐದು ರಿಲೇಷನ್‌ಶಿಪ್‌ನಲ್ಲಿದ್ದರು. ಆದರೆ, ಅದು 2017ರಲ್ಲಿ ಕೊನೆಗೊಂಡಿತ್ತು. ಆಗ ಮತ್ತೆ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದರು. ಆನಂತರ ಜಾರ್ಜಿನಾ ರೋಡ್ರಿಗಸ್ ಅವರೊಂದಿಗೆ ಲಿವ್ ಇನ್‌ನಲ್ಲಿದ್ದರು. ಇಬ್ಬರೂ ಸಂಬಂಧ ಬೆಳೆದ ಐದು ತಿಂಗಳಲ್ಲಿಯೇ ರೋಡ್ರಿಗಸ್ ಅಲಾನ್ ಮಾರ್ಟಿನ್‌ಗೆ ಜನ್ಮ ನೀಡಿದರು. ಅಂದ್ರೆ 2017ರಲ್ಲೇ ಅಲಾನ್ ಹುಟ್ಟುತ್ತಾಳೆ.. 2022ರ ಏಪ್ರಿಲ್‌ನಲ್ಲಿ ರೋಡ್ರಿಗಸ್ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಆದರೆ, ಹೆರಿಗೆ ಸಮಯದಲ್ಲಿ ಬೆಲ್ಲಾ ಅನ್ನೋ ಹೆಣ್ಣು ಮಗು ಹುಟ್ಟಿದ್ರೆ, ಗಂಡು ಮಗು ಮೃತಪಟ್ಟಿತ್ತು. ಸದ್ಯ ಈಗ ಇರೋ 5 ಮಕ್ಕಳನ್ನು ರೊನಾಲ್ಡೋ ಹಾಗೂ ಜಾರ್ಜಿನಾ ರೊಡ್ರಿಗಸ್ ನೋಡಿಕೊಳ್ಳುತ್ತಿದ್ದಾರೆ. ಆದ್ರೆ ಜಾರ್ಜಿನಾ ಜೊತೆ 8 ವರ್ಷದಿಂದ ಜೊತೆಗಿರೋ ರೊನಾಲ್ಡೋ ಮದುವೆ ಆಗುವುದಕ್ಕೆ ಯಾಕಿಷ್ಟು ಸಮಯ ತೆಗೆದುಕೊಂಡರು ಅನ್ನೋದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ನೋಡಿರಿ

