ಸಿಎಂ ಡಿಕೆಶಿ, ಸುರ್ಜೇವಾಲ ಜೊತೆ ಕ್ಲೋಸ್ ಡೋರ್ ಮೀಟಿಂಗ್- ಎಂ.ಕೃಷ್ಣಪ್ಪ Or ಪ್ರಿಯಕೃಷ್ಣರಿಗೆ ಸಿಗುತ್ತಾ ಸಚಿವ ಸ್ಥಾನ?

ಡಿಕೆ ಶಿವಕುಮಾರ್‌ಗೆ ಸಿಎಂ ಆದ್ರೂ ಮೇಲೆ ಸಂಕಷ್ಟಗಳು ತಪ್ಪಿಲ್ಲ. ಸಚಿವ ಸ್ಥಾನದ ಪಟ್ಟಿ ರಿಲೀಸ್ ಆಗುತ್ತಿದ್ದಂತೆ, ಸಚಿವ ಸ್ಥಾನ ಸಿಗದಿದ್ದವರು ಸಿಡಿದಿದ್ದರು. ಹೀಗಾಗಿ ಅಸಮಾಧಾನಗೊಂಡಿರುವ ನಾಯಕರನ್ನು ಸಮಾಧಾನ ಮಾಡುವುದ್ದಕ್ಕೆ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನ ವಿಜಯನಗರ ಕ್ಷೇತ್ರದ ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ದಿಢೀರ್ ಭೇಟಿ ನೀಡಿ ಸಮಾಧಾನಪಡಿಸುವ ಯತ್ನ ನಡೆಸಿದ್ರು. ಎಂ. ಕೃಷ್ಣಪ್ಪ ಮನೆಗೆ ಭೇಟಿ ನೀಡಿದ್ದ ನಾಯಕರು ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ರು.
ಇದನ್ನೂ ಓದಿ: ನೂತನ ಸಚಿವರಿಗೆ ಖಾತೆ ಹಂಚಿಕೆ ಆಯ್ತಾ? – ಯಾವ್ಯಾವ ಸಚಿವರಿಗೆ ಯಾವ ಖಾತೆ ಸಿಗಬಹುದು?

ವಿಜಯನಗರದಲ್ಲಿರುವ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಹೈಕಮಾಂಡ್ ನಾಯಕರು ಆಗಮಿಸಿದ ವೇಳೆಯಲ್ಲೂ ಅಸಮಾಧಾನ ಸ್ಫೋಟಗೊಂಡಿದ್ದು, ಎದ್ದು ಕಾಣುತಿತ್ತು. ಸಿಎಂ ಸೇರಿದಂತೆ ಹೈಕಮಾಂಡ್ ನಾಯಕರು ಮನೆ ಬಾಗಿಲಿಗೆ ಬಂದರೂ ಶಾಸಕ ಎಂ. ಕೃಷ್ಣಪ್ಪ ಅವರು ಹೊರಗೆ ಬಾರದೆ, ಸೈಲೆಂಟ್ ಆಗಿಯೇ ಆಕ್ರೋಶ ಹೊರ ಹಾಕಿದ್ರು. ಆಮೇಲೆ ಎಂ ಕೃಷ್ಣಪ್ಪನವರ ಪುತ್ರ, ಶಾಸಕ ಪ್ರಿಯಾ ಕೃಷ್ಣ ಅವರೇ ಅತ್ಯಂತ ಬೇಸರದಿಂದಲೇ ಬಂದಂತಹ ನಾಯಕರನ್ನು ಮನೆಗೆ ಬರಮಾಡಿಕೊಂಡರು. ಮನೆಯೊಳಗೆ ದೊಡ್ಡ ದೊಡ್ಡ ನಾಯಕರೇ ಕ್ಲೋಸ್ ಡೋರ್ ಮೀಟಿಂಗ್ ನಡೆಸಿ, ಮಾತುಕಥೆ ನಡೆಸಿದ್ರು.

ಮಿಸ್ಟೇಕ್ ಆಗಿದೆ ಸರಿ ಮಾಡ್ತೀನಿ ಅಂದ್ರು ಎಂದ ಎಂ. ಕೃಷ್ಣಪ್ಪ
ಇನ್ನು, ಸುದೀರ್ಘ ಸಭೆ ಬಳಿಕ ಮಾತನಾಡಿದ ಶಾಸಕ ಎಂ ಕೃಷ್ಣಪ್ಪ ಸಿಎಂ ಬಂದಿದ್ರು, ಮಿಸ್ಟೇಕ್ ಆಗಿದೆ ಸರಿ ಮಾಡ್ತೀನಿ ಅಂದ್ರು, ಹೇಗೆ ಮಾಡಿ ಕೊಡ್ತಾರೆ ಗೊತ್ತಿಲ್ಲ. ಮಿಸ್ಟೇಕ್ ಆಗಿದೆ ತಪ್ಪಾಗಿದೆ ಎಂದು ತಿಳಿಸಿದ್ದಾರೆ. ನಾವು ಬೆಸ್ಟ್ ಏನು ಮಾಡೋದಕ್ಕೆ ಸಾಧ್ಯ ಅದನ್ನು ಮಾಡುತ್ತೇವೆ ಅಂದಿದ್ದಾರೆ. ಸಚಿವ ಸ್ಥಾನ ಹೊರತು ಬೇರೆ ಏನು ಕೊಟ್ಟರೂ ಒಪ್ಪಿಗೆ ಇಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇಲ್ಲವೆಂದ ಡಿಕೆಶಿ
ಇನ್ನು ಇದೇ ವೇಳೆ ಸಿಎಂ ಡಿಕೆ ಶಿವಕುಮಾರ್ ಕೂಡ ಮಾತನಾಡಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಇಲ್ಲ, ಎಲ್ಲಿದೆ ಭಿನ್ನಮತ? ಯಾರು ಹೇಳಿದ್ದು ಭಿನ್ನಮತ ಅಂತ? ನಾವು ಕೇವಲ ಕಾಳಜಿ ಮಾಡ್ತೀವಿ, ನಾವು ಅಭಿಪ್ರಾಯ ವಿನಿಮಯ ಮಾಡಿಕೊಳ್ತೀವಿ. ನಾವು ಕಾರ್ಯತಂತ್ರ ರೂಪಿಸುತ್ತೇವೆ. ಎಲ್ಲರ ಮಾತಿಗೆ ಮಾನ್ಯತೆ ನೀಡುತ್ತೇವೆ. ಎಲ್ಲವೂ ಸರಿಯಾಗಿದೆ ಯಾವುದೇ ಸಮಸ್ಯೆ ಇಲ್ಲ. ಎಂ. ಕೃಷ್ಣಪ್ಪ ಹಿರಿಯ ಶಾಸಕರು, ಪಕ್ಷದ ನಿಷ್ಠಾವಂತ ಶಾಸಕರು. ಅವರಿಗೆ ಪರಿಸ್ಥಿತಿ ಅರ್ಥ ಮಾಡಿಸಬೇಕಿತ್ತು ಹಾಗಾಗಿ ಮಾತನಾಡಲು ಬಂದಿದ್ವಿ ಎಂದು ಹೇಳಿದರು.

ನೋಡಿರಿ

