ಲಂಕಾ ಟೆಸ್ಟ್ ಗಂಭೀರ್ಗೆ ಡೆಡ್ಲೈನ್ – ರವಿ ಶಾಸ್ತ್ರಿನೇ BEST ಕೋಚ್
ಬ್ರೆಟ್ ಲೀ ಜೊತೆ ಪ್ರೀತಿ ಜಿಂಟಾ ಲವ್?

ಕ್ರಿಕೆಟ್ ಲೋಕ ಇಂಟ್ರೆಸ್ಟಿಂಗ್ ಸುದ್ದಿಗಳು
ಲಂಕಾ ವಿರುದ್ಧದ ಪಂದ್ಯಗಳ ಟೆಸ್ಟ್ ಸರಣಿಗೆ ಶುಭಮನ್ ಗಿಲ್ ನೇತೃತ್ವದ ಭಾರತ ತಂಡ ಶ್ರೀಲಂಕಾ ತಲುಪಿದೆ. ಭಾರತ ತಂಡವು ಆಗಸ್ಟ್ 7 ರಿಂದ 9 ರವರೆಗೆ ಕೊಲಂಬೊದಲ್ಲಿ ಶ್ರೀಲಂಕಾ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದೊಂದಿಗೆ ತನ್ನ ಸಿದ್ಧತೆಗಳನ್ನು ಪ್ರಾರಂಭಿಸಲಿದೆ. ಮೊದಲ ಟೆಸ್ಟ್ ಆಗಸ್ಟ್ 15 ರಿಂದ 19 ರವರೆಗೆ ಗಾಲೆಯಲ್ಲಿ ನಡೆಯಲಿದ್ದು, ನಂತರ ತಂಡಗಳು ಆಗಸ್ಟ್ 23 ರಿಂದ 27 ರವರೆಗೆ ಎರಡನೇ ಮತ್ತು ಅಂತಿಮ ಟೆಸ್ಟ್ಗಾಗಿ ಕೊಲಂಬೊಗೆ ತೆರಳಲಿವೆ.
ಶ್ರೀಲಂಕಾ ಟೆಸ್ಟ್ ಸರಣಿ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಗೆಲ್ಲಲೇ ಬೇಕಾದ ಒತ್ತಡಕ್ಕೆ ಟೀಂ ಇಂಡಿಯಾ ಹಾಗೂ ಗೌತಮ್ ಗಂಭೀರ್ ಸಿಲುಕಿದ್ದಾರೆ. WTC ಪಾಯಿಂಟ್ಸ್ ಪಟ್ಟಿಯಲ್ಲಿ ಉಳಿಯಬೇಕಾದ್ರೆ 9 ಪಂದ್ಯದಲ್ಲಿ 7ರಿಂದ 8 ಪಂದ್ಯ ಗೆಲ್ಲಲೇ ಬೇಕು. ಒಂದು ಪಂದ್ಯ ಸೋತ್ರೂ ಕೂಡ ಟೀಂ ಇಂಡಿಯಾ ಒತ್ತಡಕ್ಕೆ ಸಿಲುಕುತ್ತೆ. ಇನ್ನೂ ಸತತ ಸೋಲುಗಳಿಂಗ ಕಂಗೆಟ್ಟ ಗೌತಮ್ ಗಂಭೀರ್ಗೆ ಕೋಚ್ ಹುದ್ದೆ ಉಳಿದುಕೊಳ್ಳ ಬೇಕಾದ್ರೆ ಲಂಕಾ ಸರಣಿ ಗೆಲ್ಲಲೇ ಬೇಕಿದೆ. ಒಂದು ವೇಳೆ ಸೋತ್ರೆ ಕೋಚ್ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಯಿದೆ.
ಇದನ್ನೂ ಓದಿ: ವಿಶ್ವಕಪ್ ಗೂ ಮೊದಲೇ ಗೌತಮ್ ಗಂಭೀರ್ ಔಟ್? – BCCIಗೆ ಹಿರಿಯ ಆಟಗಾರರ ದೂರು!
ಕುಲದೀಪ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ನೀಡದಿರುವ ಕುರಿತು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಮುಖ ಬೌಲರ್ಗಳ ಅನುಪಸ್ಥಿತಿಯಲ್ಲೂ ಕುಲದೀಪ್ ಅವರನ್ನು ಆಡಿಸದಿರಲು ಕಾರಣವೇನು ಎಂಬುದನ್ನು ಮುಂಬರುವ ಪರಾಮರ್ಶೆ ಸಭೆಯಲ್ಲಿ ಬಿಸಿಸಿಐ ಉನ್ನತ ಮಂಡಳಿಯು ಗಂಭೀರ್ ಅವರನ್ನು ನೇರವಾಗಿ ಪ್ರಶ್ನಿಸಬೇಕು ಎಂದು ಕೈಫ್ ಆಗ್ರಹಿಸಿದ್ದಾರೆ.
ರವಿ ಶಾಸ್ತ್ರಿ ಅವರೇ ತಮ್ಮ ನೆಚ್ಚಿನ ಕೋಚ್ ಎಂದು ಮೊಹಮ್ಮದ್ ಶಮಿ ತಿಳಿಸಿದ್ದಾರೆ. ತರಬೇತುದಾರರನ್ನು ಹೋಲಿಸುವುದು ಕೊಂಚ ಕಷ್ಟ. ನಾನು ಗೌತಿ ಭಾಯ್ ಅಡಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ರಾಹುಲ್ ಭಾಯ್ ಮತ್ತು ಅನಿಲ್ ಭಾಯ್ ಜೊತೆಗೆ ಒಳ್ಳೆಯ ಸಮಯ ಕಳೆದಿದ್ದೇನೆ. ಆದರೆ ಈ ನಾಲ್ವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕೆಂದರೆ ನಾನು ರವಿ ಭಾಯ್’ ಅವರನ್ನು ಆಯ್ಕೆ ಮಾಡುತ್ತೇನೆ ಎಂದು ಶಮಿ ಹೇಳಿದ್ದಾರೆ.
ತನಗೆ ಬಂದ ಕೋಚ್ ಆಫರ್ ತಿರಸ್ಕಾರ ಮಾಡಿದ್ದೇಕೆ ಅಂತ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಟೀಮ್ ಇಂಡಿಯಾ ಕೋಚ್ ಆಗುವ ಆಫರ್ ಬಂದಾಗ ನಾನು ಹೌದು ಅಥವಾ ಇಲ್ಲ ಎಂದು ಹೇಳಲಿಲ್ಲ. ನಾನು ಕೋಚ್ ಆಗಬೇಕಾದರೆ ನನ್ನ ಆಯ್ಕೆಯ ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಫಿಸಿಯೋ ಮತ್ತು ಇತರ ಸಹಾಯಕರು ನನ್ನ ಆಯ್ಕೆಯವರಾಗಿರಬೇಕು ಎಂದಿದೆ. ಆದರೆ ಬಿಸಿಸಿಐ ಅದನ್ನು ಒಪ್ಪಲಿಲ್ಲ. ಆದ್ದರಿಂದ ನಾನು ಆ ಪ್ರಸ್ತಾಪವನ್ನು ತಿರಸ್ಕರಿಸಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಕೋಪದಿಂದ ಒದ್ದ ಬಾಲ್ ವಿಕೆಟ್ಗೆ ಬಡಿದು ಪಂದ್ಯವೇ ಟೈ ಆದ ವಿಚಿತ್ರ ಘಟನೆ ನಡೆದಿದೆ. ಡೆಲ್ಲಿ ವಾರಿಯರ್ಸ್ಗೆ ಗೆಲ್ಲಲು 1 ಬಾಲ್ಗೆ 1 ರನ್ ಬೇಕಿತ್ತು. ಕೊನೆಯ ಎಸೆತದಲ್ಲಿ ಬ್ಯಾಟರ್ ಪ್ರಥಮ್ ಸಲೂಜಾ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ನ್ಯೂ ಡೆಲ್ಲಿ ಟೈಗರ್ಸ್ ನಾಯಕ ಹಿಮ್ಮತ್ ಸಿಂಗ್ ಓಡಿ ಬಂದು ಚೆಂಡನ್ನು ಹಿಡಿಯಲು ಪ್ರಯತ್ನಿಸಿದರಾದರೂ, ಕೈಯಿಂದ ಚೆಂಡು ಜಾರಿತು. ಈ ವೇಳೆ ಹತಾಶೆಯಿಂದ ಹಿಮ್ಮತ್ ಸಿಂಗ್ ಒದ್ದ ಚೆಂಡು ನೇರವಾಗಿ ಹೋಗಿ ನಾನ್-ಸ್ಟ್ರೈಕರ್ ಎಂಡ್ನ ವಿಕೆಟ್ಗೆ ಬಡಿಯಿತು. ಈ ವೇಳೆ ಬ್ಯಾಟರ್ ಕ್ರೀಸ್ನಿಂದ ಬಹಳ ದೂರವಿದ್ದ ಕಾರಣ ರನ್-ಔಟ್ ಆದ್ರು. ಈ ವೇಳೆ ಪಂದ್ಯ ಟೈ ಆಗಿದ್ದು, ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.
ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಪ್ರೀತಿ ಜಿಂಟಾ ಜೊತೆಗಿನ ಸಂಬಂಧದ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ನಾನ್ ಪಂಜಾಬ್ ತಂಡದ ಜೊತೆ ಐಪಿಎಲ್ ಆಡುತ್ತಿದ್ದಾಗ, ನನ್ನ ಮತ್ತೆ ಪ್ರೀತಿ ನಡುವೆ ಸಂಬಂಧ ಇದೆ ಅನ್ನೋ ಉಹಾಪೋಹಗಳಿದ್ವು. ಆದ್ರೆ ನಾನು ಪ್ರೀತಿ ಜಿಂಟಾ ಆಗಲಿ ಯಾವುದೇ ಬಾಲಿವುಡ್ ನಟಿಯೊಂದಿಗೆ ಎಂದಿಗೂ ಡೇಟಿಂಗ್ ಮಾಡಿಲ್ಲ. ಪ್ರೀತಿ ಇನ್ನೂ ಉತ್ತಮ ಸ್ನೇಹಿತರು ಮತ್ತು ಅವರನ್ನು ತುಂಬಾ ಗೌರವಿಸುತ್ತಾರೆ ಎಂದು ಹೇಳಿದ್ದಾರೆ.
ಲಂಕಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ರೋಚಕ ಟ್ವಿಸ್ಟ್ ಸಿಕ್ಕಿದೆ. ಮ್ಯಾಚ್ ಫಿಕ್ಸಿಂಗ್ ಆರೋಪ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ್ದ ಜಾಫ್ನಾ ಫ್ರಾಂಚೈಸಿಯನ್ನು ಭಾರತದ ಮಾಜಿ ವೇಗಿ ಝಹೀರ್ ಖಾನ್ ಖರೀದಿ ಮಾಡಿದ್ದಾರೆ. ಝಹೀರ್ ಖಾನ್ ಅವರ ಒಡೆತನದ ‘ಆಂಕರ್ ಸ್ಪೋರ್ಟ್ಸ್ AB’ ಸಂಸ್ಥೆಯು ಜಾಫ್ನಾ ತಂಡದ ಹೊಸ ಮಾಲೀಕತ್ವವನ್ನು ಪಡೆದುಕೊಂಡಿದ್ದು, ತಂಡಕ್ಕೆ ಈಗ ‘ಆಂಕರ್ ಜಾಫ್ನಾ ಕಿಂಗ್ಸ್’ ಎಂದು ಮರುನಾಮಕರಣ ಮಾಡಲಾಗಿದೆ.
ಪಾಕಿಸ್ತಾನ್ ಟೆಸ್ಟ್ ತಂಡದ ನಾಯಕ ಬಾಬರ್ ಆಝಂ ವಿಶ್ವ ದಾಖಲೆ ಬರೆದಿದ್ದಾರೆ. ಟ್ರಿನಿಡಾಡ್ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬಾಬರ್ ಆಝಂ 88 ರನ್ ಬಾರಿಸಿ ಮಿಂಚಿದ್ದಾರೆ. ಈ 88 ರನ್ಗಳೊಂದಿಗೆ ಬಾಬರ್ ಟೆಸ್ಟ್ ಕ್ರಿಕೆಟ್ನಲ್ಲಿ 4500+ ರನ್ಗಳ ಗಡಿದಾಟಿದ್ದಾರೆ. ಇದರೊಂದಿಗೆ ಮೂರು ಸ್ವರೂಪಗಳ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 4500+ ರನ್ ಕಲೆಹಾಕಿದ ವಿಶ್ವ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ನ ಯಶಸ್ವಿ ನಾಯಕ ಬೆನ್ ಸ್ಟೋಕ್ಸ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ಟೆಸ್ಟ್ ತಂಡದ ಮುಖ್ಯ ತರಬೇತುದಾರ ಹುದ್ದೆಯಿಂದ ಬ್ರೆಂಡನ್ ಮೆಕಲಂ ಅವರನ್ನು ವಜಾಗೊಳಿಸಲು ತಾನೇ ನೇರ ಕಾರಣ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾನು ನಿವೃತ್ತಿ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ, ಬ್ರೆಂಡನ್ ಮೆಕಲಂ ಇಂದಿಗೂ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿರುತ್ತಿದ್ದರು. ಹಾಗಾಗಿ ಈ ಎಲ್ಲದಕ್ಕೂ ನಾನೇ ಕಾರಣ, ಅದೆಲ್ಲ ನನ್ನ ತಪ್ಪು ಎಂದು ಸ್ಟೋಕ್ಸ್ ಮುಕ್ತವಾಗಿ ಹೇಳಿದ್ದಾರೆ.

ನೋಡಿರಿ

