PAK ಕ್ರಿಕೆಟರ್ಸ್ 2 ವರ್ಷ ಬ್ಯಾನ್ – PCBಯನ್ನೇ ಧಿಕ್ಕರಿಸಿದ್ರಾ ಪ್ಲೇಯರ್ಸ್?
ಅನುಮತಿ ಅವಾಂತರ.. ಟೂರ್ನಿಯೇ ರದ್ದು!

PAK ಕ್ರಿಕೆಟರ್ಸ್ 2 ವರ್ಷ ಬ್ಯಾನ್ – PCBಯನ್ನೇ ಧಿಕ್ಕರಿಸಿದ್ರಾ ಪ್ಲೇಯರ್ಸ್?ಅನುಮತಿ ಅವಾಂತರ.. ಟೂರ್ನಿಯೇ ರದ್ದು!

ಪಾಕಿಸ್ತಾನ ಕ್ರಿಕೆಟ್​ಗೂ ವಿವಾದಗಳಿಗೂ ಎಲ್ಲಿಲ್ಲದ ನಂಟು. ಹೋದಲ್ಲೆಲ್ಲಾ ಏನಾದ್ರೂ ಒಂದು ಅವಾಂತರ ಮಾಡಿಕೊಂಡಿಲ್ಲ ಅಂದ್ರೆ ಸಮಾಧಾನ ಕೂಡ ಇರಲ್ಲ ಅನ್ಸುತ್ತೆ. ಈಗ ತಾವು ಮಾಡಿರೋ ಎಡವಟ್ಟಿಗೆ ಬ್ಯಾನ್  ಆಗೋ ಭೀತಿಯಲ್ಲಿದ್ದಾರೆ. ವಾಟ್ ನೆಕ್ಸ್​ಟ್ ಅಂತಾ ತಲೆಬಿಸಿ ಮಾಡ್ಕೊಂಡಿದ್ದಾರೆ. ಟೂರ್ನಿ ಅರ್ಧದಲ್ಲೇ ರದ್ದಾದ್ರೂ ಅವ್ರ ಭವಿಷ್ಯ ಮಾತ್ರ ಅಡಕತ್ತರಿಯಲ್ಲಿದೆ.

ಇದನ್ನೂ ಓದಿ : ರೋಹಿತ್​ ಗಾಗಿ ಅಗರ್ಕರ್ ಗೆ ಗೇಟ್ ಪಾಸ್ – ನೀವೇ ಡ್ರಾಪ್ ಮಾಡಿ ಅಂದ್ರಾ HITಮ್ಯಾನ್?

ಪಾಕಿಸ್ತಾನ ಕ್ರಿಕೆಟ್​ನಲ್ಲಿ ಈಗ ಬ್ಯಾನ್ ಸುದ್ದಿ ಕಿಚ್ಚು ಹಚ್ಚಿದೆ. ಅದೂ ಕೂಡ ಸ್ಟಾರ್ ಪ್ಲೇಯರ್​ಗಳೇ  ಆತಂಕದಲ್ಲಿದ್ದಾರೆ. ಅದಕ್ಕೆ ಕಾರಣ ಏಷ್ಯನ್ ಲೆಜೆಂಡ್ಸ್ ಲೀಗ್​ನಲ್ಲಿ ಪಾರ್ಟಿಸಿಪೇಟ್ ಮಾಡಿದ್ದು. ಅರೆ ಲೀಗ್​ನಲ್ಲಿ ಆಡಿದ್ರೆ ಬ್ಯಾನ್ ಯಾಕೆ ಮಾಡ್ತಾರೆ ಅಂತಾ ನಿಮಗೆ ಅನ್ನಿಸ್ಬೋದು. ಆದ್ರೆ ಅಲ್ಲೇ ಇರೋದು ಟ್ವಿಸ್ಟ್. ಪಾಕಿಸ್ತಾನದ ಒಂದಷ್ಟು ಮಾಜಿ ಆಟಗಾರರು ಪಿಸಿಬಿಯಿಂದ ಪರ್ಮಿಷನ್ ಪಡೆಯದೇ ಜಾಂಬಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಲೆಜೆಂಡ್ಸ್ ಲೀಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಲೀಗ್​ ಆಯೋಜನೆಗೆ ಐಸಿಸಿಯಿಂದ್ಲೂ ಪರ್ಮಿಷನ್ ಪಡೆದಿಲ್ಲ. ಅತ್ತ ಜಾಂಬಿಯಾ ಕ್ರಿಕೆಟ್ ಮಂಡಳಿ ಕೂಡ ಅನುಮೋದನೆ ನೀಡಿಲ್ಲ. ಸೋ ಅಲ್ಲಿಗೆ ಲೀಗ್ ಆಯೋಜನೆಯೇ ಸರಿಯಾಗಿಲ್ಲ. ಹೀಗಿದ್ರೂ ಕೆಲವು ಮಾಜಿ ಆಟಗಾರರು ಪಾರ್ಟಿಸಿಪೇಟ್ ಮಾಡಿಬಿಟ್ಟಿದ್ದಾರೆ. ಇದೇ ಈಗ ಪಾಕ್ ಕ್ರಿಕೆಟ್ ಮಂಡಳಿಯ ಕಣ್ಣು ಕೆಂಪಾಗಿಸಿದ್ದು ಬ್ಯಾನ್ ಅಸ್ತ್ರ ಹೂಡಿದ್ದಾರೆ.

ಮುಂದಿನ 2 ವರ್ಷಗಳ ಕಾಲ ಎಲ್ಲವೂ ಬಂದ್ ಬಂದ್!

ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಾಕಿಸ್ತಾನದ ಮಾಜಿ ಕ್ರಿಕೆಟಿಗರಿಗೆ ಅನುಮತಿಯಿಲ್ಲದ ವಿದೇಶಿ ಪಂದ್ಯಾವಳಿಗಳಲ್ಲಿ ಭಾಗವಹಿಸಬೇಡಿ ಅಂತಾ ವಾರ್ನ್ ಮಾಡಿದೆ. ಹೀಗಿದ್ರೂ ಎನ್​ಒಸಿ ಪಡೆಯದೇ ಈಗ ಜಾಂಬಿಯಾದಲ್ಲಿ ಏಷ್ಯನ್ ಲೆಜೆಂಡ್ಸ್​ ಲೀಗ್​ನಲ್ಲಿ ಕೆಲವರು ಆಡಿದ್ದಾರೆ. ಟೂರ್ನಿಯಲ್ಲಿ ಪಾಕಿಸ್ತಾನದ ಮಾಜಿ ಆಟಗಾರರನ್ನೇ ಒಳಗೊಂಡ ‘ಪಾಕಿಸ್ತಾನ್ ಪ್ಯಾಂಥರ್ಸ್’ ಎಂಬ ತಂಡ ಭಾಗವಹಿಸಿತ್ತು. ಮೊಹಮ್ಮದ್ ಹಫೀಜ್, ಸೊಹೇಲ್ ತನ್ವಿರ್ ಮತ್ತು ಉಮರ್ ಅಕ್ಮಲ್ ಅವರು ಲೀಗ್‌ನಲ್ಲಿ ಆಡಲು ಆಫ್ರಿಕಾಗೆ ತಲುಪಿದ್ದರು. ಆದರೆ ಇದು ಐಸಿಸಿ ಅನುಮೋದಿತ ಲೀಗ್ ಅಲ್ಲ ಅನ್ನೋದು ಗೊತ್ತಾಗ್ತಿದ್ದಂತೆ ಕೆಲವ್ರು ಪಂದ್ಯ ಆಡಲ್ಲ ಅಂತಾ ಹಿಂದೆ ಸರಿದಿದ್ರು. ಮತ್ತೊಂದ್ಕಡೆ ಶರ್ಜೀಲ್ ಖಾನ್, ಕಮ್ರಾನ್ ಅಕ್ಮಲ್, ಇಮ್ರಾನ್ ನಜೀರ್, ಸಯೀದ್ ಅಜ್ಮಲ್ ಸೇರಿದಂತೆ ಮತ್ತೊಂದಷ್ಟು ಆಟಗಾರರು ಲೀಗ್​ನಲ್ಲಿ ಆಡಿದ್ರು. ಸೋ ಯಾರೆಲ್ಲಾ ಅನುಮತಿ ಇಲ್ಲದೆಯೂ ಸ್ಪರ್ಧೆಯಲ್ಲಿ ಭಾಗಿವಹಿಸಿದ್ರೋ ಅವ್ರೆಲ್ಲಾ ಈಗ ಬ್ಯಾನ್ ಬಿಸಿ ಎದುರಿಸುತ್ತಿದ್ದಾರೆ. ಇಂಥವ್ರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದ್ದು ನಿಯಮ ಉಲ್ಲಂಘಿಸಿದ ಮಾಜಿ ಆಟಗಾರರಿಗೆ ಮುಂದಿನ 2 ವರ್ಷಗಳ ಕಾಲ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಆಡಲು ನಿರಾಕ್ಷೇಪಣಾ ಪತ್ರ (NOC) ನೀಡುವುದಿಲ್ಲ. ಹಾಗೇ ಪಿಸಿಬಿ ಅಥವಾ ಪಾಕಿಸ್ತಾನ್ ಸೂಪರ್ ಲೀಗ್ ಅಡಿಯಲ್ಲಿ ಯಾವುದೇ ರೀತಿಯ ಕೋಚಿಂಗ್, ಮೆಂಟರ್‌ಶಿಪ್, ಕನ್ಸಲ್ಟೆನ್ಸಿ ಅಥವಾ ಇನ್ಯಾವುದೇ ಕ್ರಿಕೆಟ್ ಸಂಬಂಧಿತ ಹುದ್ದೆಗಳನ್ನು ಪಡೆಯಲು ಇವರು ಮುಂದಿನ 2 ವರ್ಷಗಳ ಕಾಲ ಅರ್ಹರಾಗಿರುವುದಿಲ್ಲ ಎಂದಿದೆ. ಹಾಗಂತ ಈ ಲೀಗ್ ಏನು ಯಶಸ್ವಿಯಾಗಿ ನಡೆದಿಲ್ಲ. ಅರ್ಧದಲ್ಲೇ ರದ್ದಾಗಿದೆ.

ಆಯೋಜಕರ ಅವಾಂತರಗಳಿಗೆ ಹಳ್ಳ ಹಿಡಿದ ಪಂದ್ಯಾವಳಿ!

ಏಷ್ಯನ್ ಲೆಜೆಂಡ್ಸ್ ಲೀಗ್ ಅನ್ನೋದು ಏಷ್ಯಾದ ವಿವಿಧ ದೇಶಗಳ ನಿವೃತ್ತ ಹಾಗೂ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರಿಗಾಗಿ ಆಯೋಜಿಸಲಾದ ಒಂದು ಟಿ20 ಕ್ರಿಕೆಟ್ ಟೂರ್ನಿ. ಜುಲೈ 30 ರಿಂದ ಆಗಸ್ಟ್ 10ರವರೆಗೆ ಜಾಂಬಿಯಾದ ಲುಸಾಕಾ ನಗರದ ಲೋಟಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಆಯೋಜನೆ ಮಾಡ್ಲಾಗಿತ್ತು. ಏಷ್ಯಾದ ಪ್ರಮುಖ ಕ್ರಿಕೆಟ್ ರಾಷ್ಟ್ರಗಳ ಹೆಸರಿನಲ್ಲಿ 6 ತಂಡಗಳು ಕಣಕ್ಕಿಳಿದಿದ್ದವು. ಆದ್ರೆ ಟೂರ್ನಿ ಆರಂಭವಾದ ಬೆನ್ನಲ್ಲೇ ಸಂಪೂರ್ಣವಾಗಿ ಹಳ್ಳ ಹಿಡಿದಿದ್ದು, ಅರ್ಧದಲ್ಲೇ ರದ್ದಾಗಿದೆ. ಇದಕ್ಕೆ ಕಾರಣ ಟೂರ್ನಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಥವಾ ಸ್ಥಳೀಯ ಜಾಂಬಿಯಾ ಕ್ರಿಕೆಟ್ ಯೂನಿಯನ್ (ZCU) ಯಾವುದೇ ರೀತಿಯ ಅನುಮೋದನೆ ನೀಡಿರಲಿಲ್ಲ. ಅಷ್ಟೇ ಅಲ್ಲ ಟೂರ್ನಿ ಆಯೋಜಕರು ಸ್ಥಳೀಯ ಸಿಬ್ಬಂದಿ, ಬ್ರಾಡ್‌ಕಾಸ್ಟರ್‌ಗಳು ಹಾಗೂ ಆಟಗಾರರಿಗೆ ನೀಡಬೇಕಾದ ಹಣವನ್ನು ಪಾವತಿಸದೆ ಕೈಕೊಟ್ಟಿದ್ದಾರೆ. ಇನ್ನು ಯಾವ ಫೆಸಿಲಿಟೀಸ್ ಕೂಡ ಇರ್ಲಿಲ್ಲ. ಸೋ ಯಾವಾಗ ಇಂಥಾ ಅವಾಂತರಗಳೇ ಹೆಚ್ಚಾಯ್ತೋ ಆಯೋಜಕರು ಒಂದು ಮಾಸ್ಟರ್ ಪ್ಲ್ಯಾನ್ ಮಾಡ್ಬಿಟ್ಟಿದ್ದಾರೆ. ಇಂಡಿಯನ್ ರಾಯಲ್ಸ್ ಮತ್ತು ಶ್ರೀಲಂಕನ್ ಲಯನ್ಸ್ ನಡುವಿನ ಲೀಗ್ ಹಂತದ ಪಂದ್ಯವನ್ನೇ  ಫೈನಲ್ ಪಂದ್ಯ ಎಂದು ಘೋಷಿಸಿ, ಶ್ರೀಲಂಕನ್ ಲಯನ್ಸ್ ತಂಡವನ್ನು ಚಾಂಪಿಯನ್ ಎಂದು ಅನೌನ್ಸ್ ಕೂಡ ಮಾಡಿಬಿಟ್ಟಿದ್ದಾರೆ. ಒಟ್ನಲ್ಲಿ ಮಾಜಿ ಕ್ರಿಕೆಟರ್​ಗಳ ಕಾಂಪಿಟೇಷನ್​ಗೆ ಸಾಕ್ಷಿಯಾಗ್ಬೇಕಿದ್ದ ಲೀಗ್ ಅವಾಂತರಗಳಲ್ಲೇ ಮುಗಿದಿದೆ.

Shantha Kumari

Leave a Reply

Your email address will not be published. Required fields are marked *