ಮಂಗಳೂರು ಖಾಸಗಿ ಕಾಲೇಜಿನಲ್ಲಿ Ragging ಅಟ್ಟಹಾಸ – ಬಟ್ಟೆ ಬಿಚ್ಚಿಸಿ ಕಿರುಕುಳ ಕೊಟ್ಟ ಕೇರಳ ವಿದ್ಯಾರ್ಥಿಗಳು
ಪೊಲೀಸರ ವಶದಲ್ಲಿ ಕಿರುಕುಳ ಕೊಟ್ಟ ಕೇರಳ ವಿದ್ಯಾರ್ಥಿಗಳು

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳು ಮಾಡಿರುವ ರ್ಯಾಗಿಂಗ್ ಅಟ್ಟಹಾಸಕ್ಕೆ ಜೂನಿಯರ್ ವಿದ್ಯಾರ್ಥಿಗಳು ತೀವ್ರ ನೋವು ಅನುಭವಿಸಿರುವ ಘಟನೆ ನಡೆದಿದೆ. ಮಂಗಳೂರಿನ ಕಾಲೇಜಿನಲ್ಲಿ ಕೇರಳ ವಿದ್ಯಾರ್ಥಿಗಳು ಕಿರುಕುಳ ನೀಡಿದ್ದು, ಇದೀಗ ಈ ಪ್ರಕರಣಕ್ಕೆ ಪೊಲೀಸರು ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ:ಮಳೆಗೆ ತತ್ತರಿಸಿದ ದೇವರನಾಡು – ಕೇರಳದಲ್ಲಿ ರಣಮಳೆಗೆ ಬಲಿಯಾದವರ ಸಂಖ್ಯೆ 26ಕ್ಕೇರಿಕೆ
ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕೇರಳದ ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಒಳಗೆ ಅಷ್ಟೇ ಅಲ್ಲ, ಕ್ಯಾಂಪಸ್ ಹೊರಗಡೆಯೂ ತೀವ್ರ ಕಿರುಕುಳ ನೀಡಿರುವ ಘಟನೆ ನಡೆದಿದೆ. ತಮ್ಮ ಖಾಸಗಿ ರೂಮ್ ಗೆ ಕರೆದುಕೊಂಡು ಹೋಗುವ ಸೀರಿಯರ್ ಸ್ಟೂಡೆಂಟ್ಸ್, ಬಟ್ಟೆ ಬಿಚ್ಚಲು ಹೇಳಿದ್ದರಂತೆ. ಕೇವಲ ಒಳ ಉಡುಪಿನಲ್ಲಿ ಕೂರಿಸಿ ಹಿಂಸೆ ನೀಡಿದ್ದಾರೆ ಎಂದು ಕಿರುಕುಳಕ್ಕೊಳಗಾದ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಹಲ್ಲೆಗೊಳಗಾದ ಇಬ್ಬರು ವಿದ್ಯಾರ್ಥಿಗಳು ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ. ರೂಮ್ಗೆ ಕರೆದುಕೊಂಡು ಹೋಗಿ ಬಾಯಿಯಿಂದ ಗಾಳಿ ಊದಿ ಎಲ್ ಇ ಡಿ ಬಲ್ಬ್ ಆಫ್ ಮಾಡಲು ಹೇಳ್ತಾರಂತೆ ಎಂಬ ಆರೋಪವಿದೆ. ಬಾಯಿಯಿಂದ ಗಾಳಿ ಊದಿ ಫ್ಯಾನ್ ತಿರುಗಿಸಲು ಹೇಳುತ್ತಾರೆ. ಹೇಳಿದ ಮಾತು ಕೇಳದೆ ಇದ್ದರೆ ಹಲ್ಲೆ ಮಾಡುತ್ತಾರೆ ಎಂದು ಜೂನಿಯರ್ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಮಂಗಳೂರಿನ ಖಾಸಗಿ ಕಾಲೇಜಿಗೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿದ್ದು, ಆರು ವಿದ್ಯಾರ್ಥಿಗಳನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ದೂರಿನಡಿ ಎಫ್ಐಆರ್ ಕೂಡ ದಾಖಲಿಸಿದ್ದಾರೆ.

ನೋಡಿರಿ

