ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸ್ಪೈಡರ್-ಮ್ಯಾನ್ – ಹಾಲಿವುಡ್ ಸಿನಿಮಾಗಳ ಅಬ್ಬರಕ್ಕೆ ಭಾರತೀಯ ಚಿತ್ರರಂಗ ಶೇಕ್.. ಶೇಕ್..

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸ್ಪೈಡರ್-ಮ್ಯಾನ್ – ಹಾಲಿವುಡ್ ಸಿನಿಮಾಗಳ ಅಬ್ಬರಕ್ಕೆ ಭಾರತೀಯ ಚಿತ್ರರಂಗ ಶೇಕ್.. ಶೇಕ್..

ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ ಸಿನಿಮಾ ವಿಶ್ವದಾದ್ಯಂತ ಅಬ್ಬರಿಸುತ್ತಿದೆ. ಅದರಲ್ಲೂ ಬಾಕ್ಸ್‌ಆಫೀಸ್‌ನಲ್ಲಿ ಸಖತ್ತಾಗಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾ ಬಿಡುಗಡೆಯಾದ ಕೇವಲ ಐದು ದಿನಗಳಲ್ಲೇ 9,550 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ ಹೊಸ ಮೈಲಿಗಲ್ಲು ನಿರ್ಮಿಸಿದೆ.

ಇದನ್ನೂ ಓದಿ:ಸೀನ ರಶ್ಮಿ ಸಂಸಾರ ಇನ್ಮುಂದೆ ಆನಂದ ಸಾಗರ – ಸೀನನ ಮೇಲೆ ವೀಕ್ಷಕರಿಗೆ ಸಂಶಯ..!

ಹಾಲಿವುಡ್‌ನ ಬಹುನಿರೀಕ್ಷಿತ ಮಾರ್ವೆಲ್ ಸಿನಿಮಾ ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ ಸಿನಿಮಾದ ಅಬ್ಬರ ಮುಂದುವರೆದಿದೆ. ಟಾಮ್ ಹಾಲೆಂಡ್ ಅಭಿನಯದ ಈ ಸಿನಿಮಾ ಬಿಡುಗಡೆಯಾದ ಕೇವಲ ಐದು ದಿನಗಳಲ್ಲೇ 9,550 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಈ ಮೂಲಕ 10 ಸಾವಿರ ಕೋಟಿ ರೂಪಾಯಿ ಕ್ಲಬ್‌ ಸೇರುವತ್ತ ವೇಗವಾಗಿ ಮುನ್ನಡೆಯುತ್ತಿದೆ. ಭಾರತದಲ್ಲಿ ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಐದು ದಿನಗಳಲ್ಲಿ ಭಾರತದಲ್ಲಿ ಒಟ್ಟು ಗ್ರಾಸ್ ಕಲೆಕ್ಷನ್ 336.91 ಕೋಟಿ ರೂಪಾಯಿ ದಾಖಲಾಗಿದೆ.

ಸ್ಪೈಡರ್ ಮ್ಯಾನ್ ಸಿನಿಮಾ ಮಾತ್ರ ಅಲ್ಲ. ಈಗಾಗಲೇ ಬಿಡುಗಡೆಯಾಗಿರುವ ಅಬ್​​ಸೆಷನ್ಸ್, ದಿ ಆಡಸ್ಸಿ ಸಿನಿಮಾಗಳು ಕೂಡಾ ಭಾರತದಲ್ಲಿ ಭರ್ಜರಿ ಪ್ರದರ್ಶನ ಕಂಡಿವೆ. ಈ ಸಿನಿಮಾಗಳು ಭಾರತೀಯ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಮೊತ್ತವನ್ನು ಗಳಿಕೆ ಮಾಡಿವೆ. ದಿ ಆಡಸ್ಸಿ ಸಿನಿಮಾ ಭಾರತದಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಈಗಲೂ ಮಾಡುತ್ತಿದೆ. ಜುಲೈ ಮಧ್ಯ ಭಾಗದಲ್ಲಿ ಬಿಡುಗಡೆ ಆದ ಈ ಸಿನಿಮಾ ಈ ವರೆಗೆ ಭಾರತದಲ್ಲಿ 150 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ಬೆಂಗಳೂರು ಸೇರಿದಂತೆ ಕೆಲವು ನಗರಗಳ ಚಿತ್ರಮಂದಿರಗಳಲ್ಲಿ ಈಗಲೂ ಸಿನಿಮಾದ ಶೋಗಳು ಹೌಸ್​​ಫುಲ್ ಆಗುತ್ತಿವೆ.

ಅದರಲ್ಲೂ ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಸಿನಿಮಾ ಭಾರತೀಯ ಸೂಪರ್ ಸ್ಟಾರ್ ನಟರ ಹಿಟ್ ಸಿನಿಮಾಗಳ ದಾಖಲೆಯನ್ನೂ ಸಹ ಪುಡಿಗಟ್ಟಿದೆ. ಇನ್ನೂ ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಗಳಿಕೆಯಲ್ಲಿ ಇನ್ನಷ್ಟು ಹೊಸ ದಾಖಲೆ ಬರೆಯಲಿದೆ.

ಆದರೆ, ಹಾಲಿವುಡ್ ಸಿನಿಮಾಗಳ ಅಬ್ಬರಕ್ಕೆ ಭಾರತೀಯ ಚಿತ್ರರಂಗ ಶೇಕ್ ಆಗಿದೆ. ಭಾರತದಲ್ಲಿ ಹಾಲಿವುಡ್ ಚಿತ್ರಗಳ ಹವಾ ಜೋರಾಗಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಆಗುತ್ತಿವೆ. ಅಂದರೆ, ಭಾರತದ ಸಿನಿಪ್ರೇಮಿಗಳು ಚಿತ್ರಗಳ ಕಂಟೆಂಟ್‌ಗಳನ್ನು ಮೆಚ್ಚಿಕೊಳ್ಳುತ್ತಿದ್ದಾರೆ ಅನ್ನೋದಕ್ಕೆ ಈ ಸಿನಿಮಾಗಳೇ ಸಾಕ್ಷಿ.

Sulekha

Leave a Reply

Your email address will not be published. Required fields are marked *