ಚಿಯಾ ಸೀಡ್ಸ್‌ ತಿನ್ನುವಾಗ ಈ ತಪ್ಪು ಮಾಡ್ತೀರಾ? – ಇದೊಂದು ತಪ್ಪಿನಿಂದ ನಿಮ್ಮ ಹೊಟ್ಟೆ ಹಾಳು!

ಚಿಯಾ ಸೀಡ್ಸ್‌ ತಿನ್ನುವಾಗ ಈ ತಪ್ಪು ಮಾಡ್ತೀರಾ? – ಇದೊಂದು ತಪ್ಪಿನಿಂದ ನಿಮ್ಮ ಹೊಟ್ಟೆ ಹಾಳು!

ಇತ್ತೀಚಿನ ದಿನಗಳಲ್ಲಿ ಚಿಯಾ ಬೀಜಗಳು ತುಂಬ ಪ್ರಾಮುಖ್ಯತೆ ಪಡೆದಿವೆ. ಚಿಯಾ ಬೀಜಗಳಿಂದ ಸಾಕಷ್ಟು ಉಪಯೋಗ ಇದೆ ಎಂಬುದನ್ನ ಅರಿತ ಜನರು ಇದನ್ನ ತಮ್ಮ ಡಯೆಟ್‌ನಲ್ಲಿ ಹೆಚ್ಚೆಚ್ಚು ಅಳವಡಿಸಿಕೊಳ್ಳುತ್ತಿದ್ದಾರೆ. ಆದ್ರೆ ಚೀಯಾ ಸೀಡ್ಸ್‌ ಅನ್ನ ಈ ಆಹಾರಗಳ ಜೊತೆಗೆ ಸೇವಿಸಿದ್ರೆ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀಳುತ್ತದೆ.

ಇದನ್ನೂ ಓದಿ: ಪ್ರತಿದಿನ ಚಪಾತಿ ತಿಂತೀರಾ? – ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ!

ಚಿಯಾ ಸೀಡ್ಸ್‌ನಿಂದ ತುಂಬ ಪ್ರಯೋಜನಗಳು ಇದ್ದರೂ, ಇದು ಹೆಚ್ಚಾಗಿ ತೂಕ ನಿರ್ವಹಣೆಯಲ್ಲಿ ಉಪಯೋಗ ಆಗುತ್ತದೆ. ಅಲ್ಲದೇ ಜೀರ್ಣಕ್ರಿಯೆ, ಶುಗರ್ ಕಂಟ್ರೋಲ್ ಹಾಗೂ ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ. ಸೀಡ್ಸ್ ಒಮೆಗಾ-3 ಕೊಬ್ಬಿನಾಮ್ಲಗಳು, ಫೈಬರ್, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದರೆ, ಅಪ್ಪಿತಪ್ಪಿಯೂ ಕೂಡ ಚಿಯಾ ಸೀಡ್ಸ್ ಅನ್ನು ಕೆಲವು ಆಹಾರಗಳೊಂದಿಗೆ ಸೇವಿಸಬಾರದು. ಇದರಿಂದ ಆರೋಗ್ಯಕ್ಕೆ ಪ್ರಯೋಜನ ಆಗುವ ಬದಲು ತೊಂದರೆಯಾಗುತ್ತದೆ.

ಸಿಹಿ ಆಹಾರಗಳು

ಹೆಚ್ಚಿನ ಸಂಸ್ಕರಿಸಿದ ಸಕ್ಕರೆ ಅಂಶವಿರುವ ಆಹಾರಗಳೊಂದಿಗೆ ಚಿಯಾ ಸೀಡ್ಸ್ ಬಳಸುವುದರಿಂದ ಇದು ದೇಹದಲ್ಲಿ ತ್ವರಿತ ಬ್ಲಡ್ ಶುಗರ್ ಏರಿಕೆ ಅಥವಾ ಕುಸಿತಕ್ಕೆ ಕಾರಣವಾಗುತ್ತದೆ.

ಫ್ಯಾಟಿ ಡೈರಿ ಉತ್ಪನ್ನಗಳು

ಡೈರಿ ಉತ್ಪನ್ನಗಳು ಜೀರ್ಣಕ್ರಿಯೆಯನ್ನು ನಿಧಾನಗೊಲಿಸುತ್ತವೆ. ಹಾಗಾಗಿ, ಅಧಿಕ ಕ್ರೀಮ್ ಇರುವ ಹಾಗೂ ಅಧಿಕ ಕೊಬ್ಬಿನಿಂದ ಕೂಡಿರುವ ಡೈರಿ ಉತ್ಪನ್ನಗಳೊಂದಿಗೆ ಚಿಯಾ ಸೀಡ್ಸ್ ತಿನ್ನಬಾರದು. ಕಾರಣ ಈ ಆಹಾರಗಳು ಇದು ಚಿಯಾ ಬೀಜಗಳಲ್ಲಿರುವ ಫೈಬರ್‌ನ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ.

ಐಸ್ ಕ್ರೀಂ

ಐಸ್ ಕ್ರೀಂ ಜೊತೆಗೆ ಚಿಯಾ ಸೀಡ್ಸ್ ತಿನ್ನುವುದರಿಂದ ಇವೆರಡು ದೇಹವನ್ನು ಹೆಚ್ಚು ತಂಪಾಗಿಸುವಿಕೆಗೆ ಕಾರಣವಾಗುತ್ತದೆ. ಅಲ್ಲದೆ, ಇದು ಜೀರ್ಣಕ್ರಿಯೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.

Shwetha M