ಟೀಂ ಇಂಡಿಯಾಗೆ SPIN ಸುಳಿ! – KL & ಜೈಸ್ವಾಲ್ ಸ್ಪೆಷಲ್ ಪ್ರಾಕ್ಟೀಸ್!
ಲಂಕಾ ದಹನಕ್ಕೆ ಇದೊಂದೇ ದಾರಿನಾ?

ಟೀಂ ಇಂಡಿಯಾಗೆ SPIN ಸುಳಿ! – KL & ಜೈಸ್ವಾಲ್ ಸ್ಪೆಷಲ್ ಪ್ರಾಕ್ಟೀಸ್!ಲಂಕಾ ದಹನಕ್ಕೆ ಇದೊಂದೇ ದಾರಿನಾ?

ಭಾರತ ಟೆಸ್ಟ್ ತಂಡಕ್ಕೆ ಮೊದ್ಲೆಲ್ಲಾ ಸ್ಟ್ರಗಲಿಂಗ್ ಟೀಂ ಅಬ್ರಾಡ್.. ಅಂದ್ರೆ ವಿದೇಶಗಳಲ್ಲಿ ಕಷ್ಟಪಡುವ ತಂಡ ಎನ್ನುವಂಥ ಹಣೆಪಟ್ಟಿ ಕಟ್ಟಿದ್ರು. ಆದ್ರೆ ಆನಂತ್ರದ್ರಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಾದ್ರೂ ಗೆದ್ದು ತೋರಿಸ್ತೇವೆ ಅನ್ನೋ ಮಟ್ಟಿಗೆ ಬೆಳೆದಿದ್ದು ಇತಿಹಾಸ. ಆದ್ರೀಗ ಮತ್ತೆ ಎರಡು ವರ್ಷಗಳಿಂದ ಟೆಸ್ಟ್ ಫಾರ್ಮೆಟ್ ಹಳ್ಳ ಹಿಡಿದಿದೆ. ಇದಕ್ಕೆ ಒನ್ ಆಫ್ ದಿ ರೀಸನ್ ಸ್ಪಿನ್ ಬೌಲರ್​ಗಳ ಎದುರಿನ ವೀಕ್​ನೆಸ್.. ಸೋ ಈ ಸ್ಪಿನ್​ ಸುಳಿಯಿಂದ ಹೊರಬರೋಕೆ ಮ್ಯಾನೇಜ್​ಮೆಂಟ್ ಹೊಸ ದಾರಿ ಹಿಡಿದಿದೆ.

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಹಾಗೇ ಭವಿಷ್ಯದಲ್ಲಿ ಎದುರಾಗುವಂಥ ಚಾಲೆಂಜ್​ಗಳನ್ನ ಫೇಸ್ ಮಾಡೋಕೆ ಬಿಸಿಸಿಐ ಹೊಸ ಐಡಿಯಾ ಕಂಡುಕೊಂಡಿದೆ. ರವಿಚಂದ್ರನ್ ಅಶ್ವಿನ್​ರಂಥ ಸ್ಪಿನ್ ದಿಗ್ಗಜರ ನಿವೃತ್ತಿ ವಾಷಿಂಗ್ಟನ್ ಸುಂದರ್ ಇಂಜುರಿಯ ನಡುವೆ ಸೀನಿಯರ್ ಮತ್ತು ಜೂನಿಯರ್ ಪ್ಲೇಯರ್ಸ್ ನಡುವೆ ಬ್ಯಾಲೆನ್ಸ್ ಮಾಡೋದೂ ಕೂಡ ದೊಡ್ಡ ಸವಾಲೇ ಆಗಿದೆ. ಅಟ್ ದಿ ಸೇಮ್ ಟೈಂ ಭಾರತೀಯ ಟೆಸ್ಟ್ ಬ್ಯಾಟರ್​ಗಳನ್ನ ಸ್ಪಿನ್ ವಿರುದ್ಧ ಭದ್ರಗೊಳಿಸೋಕೆ ಪ್ರಾಕ್ಟೀಸ್ ಕೂಡ ಜೋರಾಗಿದೆ.

ಸ್ಪಿನ್ ಬೌಲರ್ ಗಳನ್ನೇ ಫೋಕಸ್ ಮಾಡಿ ಬ್ಯಾಟಿಂಗ್ ಪ್ರಾಕ್ಟೀಸ್!

ಭಾರತದ ಬ್ಯಾಟರ್​ಗಳ ವೀಕ್​ನೆಸ್ ಇರೋದೇ ಸ್ಪಿನ್ ಬೌಲರ್ಸ್ ಎದುರಲ್ಲಿ. ಇತ್ತೀಚೆಗೆ ಟಿ-20ಐ ಸರಣಿಗಳಲ್ಲೂ ಸ್ಪಿನ್ ವಿರುದ್ಧ ರನ್ಸ್ ಬಂದಿಲ್ಲ ಅನ್ನೋದು ಶಾಕಿಂಗ್ ವಿಚಾರ. ಈಗ ಟೆಸ್ಟ್​ ಮಾದರಿಯಲ್ಲೂ ಇದೇ ಸಮಸ್ಯೆಯಾಗಬಹುದು. ಹೀಗಾಗೇ ಸ್ಪಿನ್ ಬೌಲರ್ಸ್ ಎದುರಲ್ಲೇ ಪ್ರಾಕ್ಟೀಸ್ ಮಾಡಲಾಗ್ತಿದೆ. ತಂಡದ ಓಪನರ್​ಗಳಾದ ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಕಳೆದ ಕೆಲವು ದಿನಗಳಿಂದ ಬಾಂದ್ರಾ ವೆಸ್ಟ್‌ನಲ್ಲಿರುವ ವಿಂಗ್ಸ್ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ತರಬೇತಿ ಪಡೀತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಜತಿನ್ ಪರಾಂಜಪೆ ಅವ್ರು ನಿರ್ವಹಿಸೋ ಸ್ಪೆಷಲ್ ಕ್ರಿಕೆಟ್ ನೆಟ್‌ಗಳನ್ನು ಹೊಂದಿರುವ ಮಲ್ಟಿ ಸ್ಪೋರ್ಟ್ ಫೆಸಿಲಿಟಿಯಾಗಿದೆ. ವಿದೇಶಿ ಪ್ರವಾಸಕ್ಕೂ ಮುನ್ನ ಪ್ರೈವೇಟ್ ನೆಟ್ ಸೆಷನ್​ಗಳಲ್ಲಿ ಪ್ರಾಕ್ಟೀಸ್ ಕಾಮನ್ ಆಗಿದ್ರೂ ಈ ಸೆಷನ್‌ಗಳಲ್ಲಿ ಎದ್ದು ಕಾಣುವ ವಿಷ್ಯ ಅಂದ್ರೆ ಸ್ಪಿನ್ ಫೇಸ್ ಮಾಡುವತ್ತ ಸಂಪೂರ್ಣ ಗಮನ ಕೊಟ್ಟಿರೋದು. ಮುಂಬೈ ತಂಡದ  ತನುಷ್ ಕೋಟ್ಯಾನ್ ಸೇರಿದಂತೆ ಮುಂಬೈ ಸ್ಪಿನ್ನರ್‌ಗಳು ಜೈಸ್ವಾಲ್ ಮತ್ತು ರಾಹುಲ್​ಗೆ ಬೌಲಿಂಗ್ ಮಾಡಿದ್ದಾರೆ. ಌಕ್ಚುಲ್ ಆಗಿ ಹೇಳ್ಬೇಕು ಅಂದ್ರೆ ನ್ಯೂ ಬಾಲ್​ ವಿರುದ್ಧದ ಬ್ಯಾಟಿಂಗ್​ಗೆ ತಯಾರಿ ನಡೆಸಬೇಕಾಗುತ್ತೆ. ಹೀಗಿದ್ರೂ ಶ್ರೀಲಂಕಾದಲ್ಲಿ ನಡೆಯಲಿರೋ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪಿನ್ ಡಾಮಿನೇಷನ್ ಇರುತ್ತೆ.ಇದೇ ಕಾರಣಕ್ಕೆ ರಾಹುಲ್ ಮತ್ತು ಜೈಸ್ವಾಲ್ ಎದುರಿಸಲು ಎಲ್ಲಾ ರೀತಿಯ ಸ್ಪಿನ್ನರ್‌ಗಳನ್ನ ಬಳಸಲಾಗ್ತಿದೆ. ಎಡಗೈ ಸ್ಪಿನ್ನರ್‌ಗಳು, ಲೆಗ್-ಸ್ಪಿನ್ನರ್‌ಗಳು ಮತ್ತು ಆಫ್-ಸ್ಪಿನ್ನರ್‌ಗಳು ಕೂಡ ಈ ಪ್ರಾಕ್ಟೀಗ್ ಗ್ರೂಪ್​ನಲ್ಲಿದ್ರು ಅನ್ನೋದೇ ವಿಶೇಷ.

ನೆಟ್ ಬೌಲರ್ಸ್ ಆಗಿ ಲಂಕಾಗೆ ಹಾರಲಿದೆ ಸ್ಪಿನ್ನರ್ ಗಳ ದಂಡು!

ಇಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಶ್ರೀಲಂಕಾಗೆ ತೆರಳುತ್ತಿರೋ ಭಾರತೀಯ ತಂಡದ ಜೊತೆ ನೆಟ್ ಬೌಲರ್​ಗಳಾಗಿ ಹೆಚ್ಚುವರಿ ಸ್ಪಿನ್ ಬೌಲರ್ಸ್ ಕೂಡ ಟ್ರಾವೆಲ್ ಮಾಡ್ತಿದ್ದಾರೆ. ತನುಷ್ ಕೋಟಿಯನ್ ಶ್ರೀಲಂಕಾ ಟೂರ್​ಗೆ ಅಧಿಕೃತ ತಂಡದಲ್ಲಿ ಆಯ್ಕೆಯಾಗಿಲ್ಲ. ಹೀಗಾಗಿದ್ರೂ ಭಾರತೀಯ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ. ಸರಣಿಯಲ್ಲಿ ಬ್ಯಾಟ್ಸ್‌ಮನ್‌ಗಳು ಫೇಸ್ ಮಾಡಬಹುದಾದ ಎಲ್ಲಾ ರೀತಿಯ ಸ್ಪಿನ್ನರ್ಸ್ ವಿರುದ್ಧ ಬ್ಯಾಟಿಂಗ್ ಪ್ರಾಕ್ಟೀಸ್ ನೀಡುವ ಉದ್ದೇಶದಿಂದ ಆಯ್ಕೆದಾರರು ತಂಡದೊಂದಿಗೆ ನೆಟ್ ಬೌಲರ್‌ಗಳಾಗಿ ನಾಲ್ವರು ಯಂಗ್​ಸ್ಟರ್​ಗಳನ್ನ ಚೂಸ್ ಮಾಡಿದ್ದಾರೆ. ಆಫ್ ಸ್ಪಿನ್​ನಲ್ಲಿ ತನುಷ್ ಕೋಟಿಯ, ಲೆಗ್ ಸ್ಪಿನ್​ನಲ್ಲಿ ವಿಪ್ರಜ್ ನಿಗಮ್, ಎಡಗೈ ಮಣ್ಣಿಕಟ್ಟಿನ ಸ್ಪಿನ್ನರ್ ಆಗಿ ಶಿವಾಂಗ್ ಕುಮಾರ್, ಹಾಗೇ ಲೆಫ್ಟ್ ಆರ್ಮ್ ಟ್ರಡೀಷನಲ್ ಬೌಲರ್ ಆಗಿ ಹರ್ಷ್ ದುಬೆ ಕೂಡ ಇದ್ದಾರೆ. ಸೋ ಅಲ್ಲಿಗೆ ಮ್ಯಾನೇಜ್​ಮೆಂಟ್ ಪ್ಲ್ಯಾನ್​ಗಳನ್ನ ನೋಡಿದ್ರೆ ಇಲ್ಲಿ ಸ್ಪಿನ್ ವೀಕ್​ನೆಸ್ ಮೆಟ್ಟಿನಿಲ್ಲೋಕೆ ಸರ್ವಸಿದ್ಧತೆಗಳೂ ನಡೆದಿದೆ ಅನ್ನೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ.

ಲಂಕಾದಹನಕ್ಕೆ ಸಿದ್ಧವಾಗಿರೋ ತಂಡದಲ್ಲೂ ಇದೆ ಬಲಿಷ್ಠ ಸ್ಪಿನ್ ಪಡೆ!

ಸದ್ಯ ಶ್ರೀಲಂಕಾ ದಹನಕ್ಕೆ ಸೆಲೆಕ್ಟ್ ಆಗಿರುವ ಭಾರತ ತಂಡದಲ್ಲಿ ಸ್ಪಿನ್ ಬೌಲರ್​​ಗಳಿಗೂ ಮಣೆ ಹಾಕಲಾಗಿದೆ. 89 ಟೆಸ್ಟ್ ಪಂದ್ಯಗಳನ್ನ ಆಡಿ ಸಾಕಷ್ಟು ಎಕ್ಸ್​ಪೀರಿಯನ್ಸ್ ಇರುವ ರವೀಂದ್ರ ಜಡೇಜಾ ಸ್ಪಿನ್ ವಿಭಾಗದ ಮೇನ್ ವೆಪನ್ ಆಗಿದ್ದಾರೆ. ಹಾಗೇ ತಮ್ಮ ರಿಸ್ಟ್ ಸ್ಪಿನ್ ಮೂಲಕವೇ ಬ್ಯಾಟರ್​ಗಳನ್ನ ಬೇಟೆಯಾಡೋ ಎಡಗೈ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್ ಇದ್ದಾರೆ. ಇತ್ತೀಚೆಗೆ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಯುವ ಎಡಗೈ ಸ್ಪಿನ್ನರ್ ಮಾನವ್ ಸುತಾರ್​ಗೂ ಚಾನ್ಸ್ ನೀಡಲಾಗಿದೆ. ಇನ್ನು ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಆಡಿ 54 ಪ್ರಥಮ ದರ್ಜೆ ಪಂದ್ಯಗಳಲ್ಲಿ 188 ವಿಕೆಟ್ ಪಡೆದಿರುವ 33 ವರ್ಷದ ಆಫ್-ಸ್ಪಿನ್ನರ್ ಸರಾಂಶ್ ಜೈನ್ ಕೂಡ ಅವಕಾಶ ಪಡೆದಿದ್ದಾರೆ. ವಾಷಿಂಗ್ಟನ್ ಸುಂದರ್ ಆಬ್ಸೆನ್ಸ್​ನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿದ್ದಾರೆ. ಅಲ್ಲಿಗೆ ಸ್ಪಿನ್ ವಿರುದ್ಧದ ಪ್ರಾಕ್ಟೀಸ್, ಸ್ಪಿನ್ ಬೌಲರ್​ಗಳ ಆಯ್ಕೆಯಲ್ಲೂ ಮ್ಯಾನೇಜ್​ಮೆಂಟ್ ಹೆಚ್ಚಿನ ಒತ್ತು ನೀಡಿರೋದು ಇಲ್ಲಿ ಗೊತ್ತಾಗ್ತಿದೆ.

ಕಳೆದ ಎರಡು ವರ್ಷಗಳಿಂದ ಸ್ಪಿನ್ ವಿರುದ್ಧ ಅಟ್ಟರ್ ಫ್ಲ್ಯಾಪ್!

ಅಷ್ಟಕ್ಕೂ ಇಲ್ಲಿ ಸ್ಪಿನ್ ಬೌಲಿಂಗ್ ವಿರುದ್ಧ ಈ ಮಟ್ಟಿಗೆ ಸ್ಪೆಷಲ್ ಟ್ರೈನಿಂಗ್ ಕೊಡೋಕೇ ಕಾರಣವೂ ಇದೆ. ಒಂದು ಕಾಲದಲ್ಲಿ ಸ್ಪಿನ್ ಬೌಲಿಂಗ್ ಅನ್ನು ವಿಶ್ವದಲ್ಲೇ ಅತ್ಯುತ್ತಮವಾಗಿ ಫೇಸ್ ಮಾಡ್ತಿದ್ದ ಟೀಮ್ ಇಂಡಿಯಾ ಬ್ಯಾಟರ್‌ಗಳು, ಇತ್ತೀಚಿನ ದಿನಗಳಲ್ಲಿ ಹೋ ಕಂಡೀಷನ್ಸ್​ನಲ್ಲೂ ಅದ್ರಲ್ಲೂ ಸ್ಪಿನ್ ಟ್ರ್ಯಾಕ್‌ಗಳಲ್ಲೇ ವಿದೇಶಿ ಸ್ಪಿನ್ನರ್‌ಗಳ ಜಾಲಕ್ಕೆ ಬಿದ್ದು ಸರಣಿ ಸೋಲುಗಳನ್ನ ಕಂಡಿದ್ದಾರೆ. ಈವನ್ ಬ್ಯಾಟಿಂಗ್ ಆವರೇಜ್​ನಲ್ಲಿ ಇದು ಗೊತ್ತಾಗುತ್ತೆ.

ಸ್ಪಿನ್ ವಿರುದ್ಧ ಸವಾಲು!

2016 ರಿಂದ 2019ರ ಅವಧಿಯಲ್ಲಿ ಭಾರತದ ಬ್ಯಾಟಿಂಗ್ ಸರಾಸರಿ 53.3

ಇತ್ತೀಚಿನ ವರ್ಷಗಳಲ್ಲಿ ಇದು ಕೇವಲ 32.74 ರಿಂದ 33.8 ಕ್ಕೆ ಕುಸಿದಿದೆ

1970 ರ ದಶಕದ ನಂತರ ದಾಖಲಾಗಿರುವ ಅತ್ಯಂತ ಕಳಪೆ ಪ್ರದರ್ಶನ
ಭಾರತದ ಪಿಚ್‌ ಗಳಲ್ಲಿ ವಿದೇಶಿ ಸ್ಪಿನ್ನರ್‌ ಗಳೇ ಹೆಚ್ಚು ಸಕ್ಸಸ್

2024ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತನ್ನದೇ ನೆಲದಲ್ಲಿ 3-0ರ ಸೋಲು

ನ್ಯೂಜಿಲೆಂಡ್ ನ ಮಿಚೆಲ್ ಸ್ಯಾಂಟ್ನರ್ ಮತ್ತು ಅಜಾಜ್ ಪಟೇಲ್ ಪ್ರಾಬಲ್ಯ

ದಕ್ಷಿಣ ಆಫ್ರಿಕಾ ವಿರುದ್ಧದ ಕೋಲ್ಕತ್ತಾ ಮತ್ತು ಗುವಾಹಟಿ ಟೆಸ್ಟ್‌ ಗಳಲ್ಲೂ ಸೋಲು

ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ಭಾರತದ ಬ್ಯಾಟಿಂಗ್ ಬೆನ್ನೆಲುಬು ಬ್ರೇಕ್

ಆಸ್ಟ್ರೇಲಿಯಾ ಸಿರೀಸ್​ ನಲ್ಲಿ ಮ್ಯಾಥ್ಯೂ ಕುಹ್ನೆಮನ್ & ನಾಥನ್ ಲಿಯಾನ್ ಆಘಾತ

ಭಾರತದಲ್ಲಿ ಶೇ. 50 ಕ್ಕಿಂತ ಹೆಚ್ಚು ಬಾರಿ ಕೇವಲ 3 ದಿನಗಳ ಒಳಗೇ ನಿರ್ಧಾರ

ಈ ಎಲ್ಲಾ ಕಾರಣಗಳಿಂದಲೇ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಸ್ಪಿನ್ ವಿರುದ್ಧ ಬ್ಯಾಟರ್​ಗಳನ್ನ ಬಲಿಷ್ಠಗೊಳಿಸ್ತಾ ಇದೆ. ಅದೂ ಅಲ್ದೇ ಲಂಕಾ ಪಡೆಯಲ್ಲೂ ಬಲಿಷ್ಠ ಸ್ಪಿನ್ ಬೌಲರ್​ಗಳಿದ್ದಾರೆ. ಅತ್ಯಂತ ಯಶಸ್ವೀ ಲೆಫ್ಟ್ ಆರ್ಮ್ ಆರ್ಥೋಡಕ್ಸ್ ಸ್ಪಿನ್ನರ್ ಪ್ರಭಾತ್ ಜಯಸೂರ್ಯ ಇದ್ದಾರೆ. ಮತ್ತೊಬ್ಬ ರೈಟ್-ಆರ್ಮ್ ಆಫ್-ಬ್ರೇಕ್ ಸ್ಪಿನ್ನರ್ ರಮೇಶ್ ಮೆಂಡಿಸ್ ಇದ್ದಾರೆ. ಜಯಸೂರ್ಯಗೆ ಸಾಥ್ ಕೊಡೋದ್ರ ಜೊತೆಗೆ ಲೋವರ್ ಆರ್ಡರ್​ನಲ್ಲಿ ಬ್ಯಾಟಿಂಗ್ ಕೂಡ ಚೆನ್ನಾಗಿದೆ. ಹಾಗೇ ತಂಡದ ಕ್ಯಾಪ್ಟನ್ ಆಗಿರುವ ಧನಂಜಯ ಡಿ ಸಿಲ್ವಾ ಕೂಡ ಆಫ್​ಸ್ಪಿನ್ನರ್ ಆಲೌಂಡರ್ ಆಗಿದ್ದಾರೆ.  ಕ್ರೂಶಿಯಲ್ ಟೈಮಲ್ಲಿ ವಿಕೆಟ್ಸ್ ಕೂಡ ಬೇಟೆಯಾಡ್ತಾರೆ. ಹಾಗೇ ಅದ್ಭುತ ಫಾರ್ಮ್​ನಲ್ಲಿರೋ ಯಂಗ್​ಸ್ಟರ್ ಕಮಿಂದು ಮೆಂಡಿಸ್ ಎರಡೂ ಕೈಗಳಲ್ಲೂ ಸ್ಪಿನ್ ಬೌಲಿಂಗ್​ ಮಾಡ್ತಾರೆ. ಸೀಮಿತ ಓವರ್​ಗಳಲ್ಲಿ ಭಾರತದ ವಿರುದ್ಧವೇ ಇಂಪ್ಯಾಕ್ಟ್​ಫುಲ್ ಪರ್ಫಾಮೆನ್ಸ್ ನೀಡಿರೋ ದುನಿತ್ ವೆಲ್ಲಾಲಗೆ ಕೂಡ ಬ್ಯಾಕಪ್ ಬೌಲರ್ ಆಗಿದ್ದಾರೆ. ಹೀಗೆ ಲಂಕಾ ಕೂಡ ಬಲಿಷ್ಠ ಸ್ಪಿನ್ ಪಡೆಯನ್ನೇ ಹೊಂದಿದ್ದು ಭಾರತಕ್ಕೆ ಠಕ್ಕರ್ ಕೊಡೋಕೆ ಕಾಯ್ತಿದೆ. ಅತ್ತ ಲಂಕಾ ಬೌಲರ್​ಗಳನ್ನ ಚೆಂಡಾಡೋಕೆ ಭಾರತ ಕೂಡ ಸಮರ್ಥವಾಗಿ ಸಿದ್ಧವಾಗ್ತಿದೆ. ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 15 ರಿಂದ 19 ರವರೆಗೆ ಗಾಲೆಯಲ್ಲಿ ಮತ್ತು ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಿಂದ 27 ರವರೆಗೆ ಕೊಲಂಬೊದಲ್ಲಿ ನಡೆಯಲಿದೆ. ಅದಕ್ಕೂ ಮೊದಲು, ಆಗಸ್ಟ್ 7 ರಿಂದ ಕೊಲಂಬೊದಲ್ಲಿ ಮೂರು ದಿನಗಳ ಅಭ್ಯಾಸ ಪಂದ್ಯ ಕೂಡ ಇದೆ.

Shantha Kumari

Leave a Reply

Your email address will not be published. Required fields are marked *