ಗಂಭೀರ್ Vs ಟೀಂ IND ಪ್ಲೇಯರ್ಸ್! – ಲಂಕಾ ಟೆಸ್ಟ್‌ಗಿಲ್ಲ ಸಾಯಿ ಸುದರ್ಶನ್

ಗಂಭೀರ್ Vs ಟೀಂ IND ಪ್ಲೇಯರ್ಸ್! – ಲಂಕಾ ಟೆಸ್ಟ್‌ಗಿಲ್ಲ ಸಾಯಿ ಸುದರ್ಶನ್

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಸಂಕಷ್ಟ ಎದುರಾಗಿದೆ. ಕೋಚ್ ಗೌತಮ್ ಗಂಭೀರ್ ಅವರ ಕಠಿಣ ಆಡಳಿತ ಮತ್ತು ಕೋಚಿಂಗ್ ಶೈಲಿಯ ವಿರುದ್ಧ  ಸೀನಿಯರ್ ಆಟಗಾರರು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಹಾಗೂ ಮಾಜಿ ಕ್ರಿಕೆಟಿಗರ ಬಳಿ ರಹಸ್ಯವಾಗಿ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.  . ಪ್ರಸ್ತುತ ಗಂಭೀರ್ ಅವರ ಕೋಚಿಂಗ್ ಹಾದಿಯ ಬಗ್ಗೆ ಬಿಸಿಸಿಐ ತೀವ್ರ ಅಸಮಾಧಾನ ಹೊಂದಿದ್ದು, ಶೀಘ್ರದಲ್ಲೇ ಪರಾಮರ್ಶನಾ ಸಭೆ ನಡೆಸಲಿದೆ ಎನ್ನಲಾಗಿದೆ.

ಸ್ಟಾರ್ ಬ್ಯಾಟರ್ ಸಾಯಿ ಸುದರ್ಶನ್ ಸಂಪೂರ್ಣವಾಗಿ ಫಿಟ್ ಆಗಿಲ್ಲದ ಕಾರಣ ಟೀಮ್ ಇಂಡಿಯಾದೊಂದಿಗೆ ಶ್ರೀಲಂಕಾಗೆ ಹೋಗಿಲ್ಲ. ಬಿಸಿಸಿಐ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿದೆ, ಆದರೆ ಅವರು ಇನ್ನೂ ಫಿಟ್ ಆಗಿಲ್ಲ. ಫಿಟ್ ನೆಸ್ ಟೆಸ್ಟ್ ಪಾಸ್ ಆದ ಮೇಲೆ ಮಾತ್ರ ಶ್ರೀಲಂಕಾ ಸರಣಿಗೆ ಆಡಲು ಅರ್ಹರಾಗುತ್ತಾರೆ. ಹೀಗಾಗಿ  ಟೀಮ್ ಇಂಡಿಯಾದ ಜೊತೆ  ಶ್ರೀಲಂಕಾಗೆ ಸಾಯಿ ಸುದರ್ಶನ್  ಹೋಗಿಲ್ಲ.

ಜಸ್​ಪ್ರೀತ್ ಬುಮ್ರಾ ಸೇರಿದಂತೆ  ಏಕಕಾಲದಲ್ಲಿ ಟೀಮ್ ಇಂಡಿಯಾದ ಏಳು ಆಟಗಾರರು ಗಾಯಾಳುಗಳ ಪಟ್ಟಿ ಸೇರಿರುವುದು ಬಿಸಿಸಿಐಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಜಸ್​ಪ್ರೀತ್ ಬುಮ್ರಾ ,  ವಾಷಿಂಗ್ಟನ್ ಸುಂದರ್ , ಹರ್ಷಿತ್ ರಾಣಾ , ನಿತೀಶ್ ಕುಮಾರ್ ರೆಡ್ಡಿ , ಆಕಾಶ್ ದೀಪ್, ವರುಣ್ ಚಕ್ರವರ್ತಿ , ಸಾಯಿ ಸುದರ್ಶನ್ ಗಾಯದ ಸಮಸ್ಯೆಯಿಂದ ಬಳುತ್ತಿದ್ದಾರೆ.

ಶ್ರೀಲಂಕಾದ ಸ್ಪಿನ್ ಸ್ನೇಹಿ ಪಿಚ್‌ಗಳಲ್ಲಿ ಭಾರತೀಯ ಬ್ಯಾಟರ್‌ಗಳಿಗೆ ಅತ್ಯುತ್ತಮ ತರಬೇತಿ ನೀಡುವ ಉದ್ದೇಶದಿಂದ ಈ ಮೂವರು ಸ್ಪಿನ್ನರ್‌ಗಳನ್ನು ನೆಟ್ ಬೌಲಿಂಗ್‌ಗಾಗಿ ಬಿಸಿಸಿಐ ನಿಯೋಜಿಸಿದೆ . ದೇಶಿ ಕ್ರಿಕೆಟ್‌ನ ಸ್ಟಾರ್ ಆಲ್‌ರೌಂಡರ್‌ಗಳಾದ ತನುಷ್ ಕೋಟ್ಯಾನ್, ಹರ್ಷ್ ದುಬೆ ಹಾಗೂ ಯುವ ಸ್ಪಿನ್ನರ್ ವಿಪ್ರಾಜ್ ನಿಗಮ್ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಲಂಕಾ ನೆಲದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದು ಸವಾಲಿನ ಕೆಲಸವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ಮೂವರು ಯುವ ಆಟಗಾರರಿಗೆ ಮಣೆ ಹಾಕಿದೆ.

ಮಹಿಳಾ ಏಷ್ಯಾಕಪ್ ಟೂರ್ನಿಗೆ ಸಿದ್ಧತೆಗಳು ಶುರುವಾಗಿದ್ದು, ಈ ಸಿದ್ಧತೆಗಳ ಬೆನ್ನಲ್ಲೇ ಇದೀಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಂಬರುವ ಟೂರ್ನಿಗೆ ದಿನಾಂಕ ನಿಗದಿ ಮಾಡಿದೆ. ಮಹಿಳಾ ಟಿ20 ಏಷ್ಯಾಕಪ್ 2026 ರ ಪಂದ್ಯಾವಳಿಯು UAE ನಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿದೆ.  ಜುಲೈ 22 ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಅಧಿಕೃತ ಇಮೇಲ್ ಕಳುಹಿಸಿ ಅದರಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: IPL ಪವರ್ ಗೆ PSL ಪಂಕ್ಚರ್ – ಲೀಗ್ ನೇ ಎತ್ತಂಗಡಿ ಮಾಡುತ್ತಾ PAK?

2026ರ ದುಲೀಪ್ ಟ್ರೋಫಿ ಟೂರ್ನಿಗೆ ಪ್ರಕಟಿಸಲಾದ ಉತ್ತರ ವಲಯದ 15 ಸದಸ್ಯರ ತಂಡದಲ್ಲಿ ಟೀಮ್‌ ಇಂಡಿಯಾ ಓಪನರ್‌ ಅಭಿಷೇಕ್ ಶರ್ಮಾ ಹಾಗೂ ಪ್ರಭ್‌ಸಿಮ್ರನ್ ಸಿಂಗ್‌ಗೆ ಸ್ಥಾನ ಸಿಕ್ಕಿಲ್ಲ. ಅಭಿಷೇಕ್ ಶರ್ಮಾ 2024ರ ಬಳಿಕ ಯಾವುದೇ ರೆಡ್‌ಬಾಲ್ ಪಂದ್ಯ ಆಡದಿದ್ದರೂ, ಭಾರತದ ಟಿ20 ತಂಡಕ್ಕೆ ಒಂದು ತಿಂಗಳ ವಿರಾಮ ಇರುವ ಕಾರಣ ಅವರಿಗೆ ದುಲೀಪ್ ಟ್ರೋಫಿ ತಂಡದಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ ಅಭಿಷೇಕ್‌ಗೆ ದುಲೀಪ್ ಟ್ರೋಫಿಯಲ್ಲಿ ಅವಕಾಶ ಕೈ ತಪ್ಪಿದೆ.

ವಿರಾಟ್ ಕೊಹ್ಲಿಗೆ ಆಟದ ಮೇಲಿನ ಪ್ಯಾಶನ್ ಮತ್ತು ಅಗ್ರೆಶನ್ ಬಗ್ಗೆ ಮಾಜಿ ಅಂತರಾಷ್ಟ್ರೀಯ ಅಂಪೈರ್ ಮಾತನಾಡಿದ್ದಾರೆ. ಕ್ರಿಕೆಟ್ ತನ್ನ ನಿಜವಾದ ರೋಚಕತೆಯನ್ನು ಉಳಿಸಿಕೊಳ್ಳಬೇಕಾದರೆ ವಿರಾಟ್ ಕೊಹ್ಲಿಯಂತಹ ಹುರುಪಿನ ಆಟಗಾರರು ಇರಲೇಬೇಕು ಎಂದು ಅಂತಾರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ  ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಮೈದಾನದಲ್ಲಿ ತೋರಿಸುವ ಅಗ್ರೆಶನ್   ಆಟದ ಮೇಲಿನ ಅವರ ಹಿಡಿತ ಹಾಗೂ ಅಪಾರವಾದ ಪ್ಯಾಶನ್‌ನಿಂದ  ಬರುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಎಂಎಸ್ ಧೋನಿ  ಚೆನ್ನೈ ಸಮೀಪದ ಇರುಂಗಟ್ಟುಕೊಟ್ಟೈಯಲ್ಲಿರುವ ಮದ್ರಾಸ್ ಇಂಟರ್‌ನ್ಯಾಷನಲ್ ರೇಸ್‌ ಸರ್ಕ್ಯೂಟ್‌ನಲ್ಲಿ ಸೂಪರ್‌ಬೈಕ್ ರೈಡ್‌ ಮಾಡಿದ್ದು,  ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. ಟಿವಿಎಸ್ ಯುರೋಗ್ರಿಪ್ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಧೋನಿ, ಮೋಟಾರ್ ರೇಸಿಂಗ್ ಟ್ರ್ಯಾಕ್‌ನಲ್ಲಿ ವೇಗದ ಲ್ಯಾಪ್‌ಗಳನ್ನು ಪೂರ್ಣಗೊಳಿಸಿ ಕಂಪನಿಯ ಪ್ರಮುಖ ಬೈಕ್ ಟೈರ್‌ಗಳನ್ನು ಪರೀಕ್ಷಿಸಿದರು.

ಅಮೆರಿಕದ ಆಫ್-ಸ್ಪಿನ್ನರ್ ಬೋಡುಗುಮ್ ಅಖಿಲೇಶ್ ರೆಡ್ಡಿ ಅವರನ್ನ 8 ವರ್ಷ ಕ್ರಿಕೆಟ್‌ನಿಂದ ನಿಷೇಧ ಹೇರಿ ಐಸಿಸಿ ಬಿಗ್‌ ಶಾಕ್ ನೀಡಿದೆ. 2025ರಲ್ಲಿ ನಡೆದ ಅಬುಧಾಬಿ ಟಿ10 ಟೂರ್ನಿಯಲ್ಲಿ ಅಖಿಲೇಶ್ ರೆಡ್ಡಿ ‘ಆಸ್ಪಿನ್ ಸ್ಟಾಲಿಯನ್ಸ್’ ತಂಡದ ಪರ ಕಣಕ್ಕಿಳಿದಿದ್ದರು. ಈ ವೇಳೆ ತಮ್ಮದೇ ತಂಡದ ಬೌಲರ್‌ಗೆ ಹೆಚ್ಚು ರನ್ ಬಿಟ್ಟುಕೊಡುವಂತೆ  ಫಿಕ್ಸಿಂಗ್ ಪ್ರಚೋದಿಸಿದ್ದರು. ಆದರೆ ಆ ಆಟಗಾರ ಇದಕ್ಕೆ ಒಪ್ಪದೆ ತಕ್ಷಣವೇ ಭ್ರಷ್ಟಾಚಾರ ನಿರೋಧಕ ಅಧಿಕಾರಿಗೆ ದೂರು ನೀಡಿದ್ದರು. ಹೀಗಾಗಿ ಐಸಿಸಿ ಈ ದಿಟ್ಟ ಕ್ರಮ ಕೈಗೊಂಡಿದೆ.

ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮಿರ್ ಮುಂಬರುವ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ವಿದೇಶಿ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಅಮಿರ್ ಬ್ರಿಟನ್ ಪೌರತ್ವ ಪಡೆದುಕೊಂಡಿರುವುದೇ ಇದಕ್ಕೆ ಕಾರಣ. ಇತ್ತ ಬ್ರಿಟನ್ ಪ್ರಜೆಯಾಗಿರುವ ಮೊಹಮ್ಮದ್ ಅಮಿರ್ ಅವರನ್ನು ಇನ್ಮುಂದೆ ವಿದೇಶಿ ಕೋಟಾದಲ್ಲಿ ಆಡಿಸಬೇಕಾದ ಅನಿವಾರ್ಯತೆ ರಾವಲ್ಪಿಂಡಿ ಫ್ರಾಂಚೈಸಿಗೆ ಎದುರಾಗಿದೆ.

Kishor KV