ಜಿಲ್ಲಾವಾರು ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜವಾಬ್ದಾರಿ – ಯಾವ್ಯಾವ ಸಚಿವರಿಗೆ ಯ್ಯಾವ ಜಿಲ್ಲೆಯ ಜವಾಬ್ದಾರಿ?

ಜಿಲ್ಲಾವಾರು ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜವಾಬ್ದಾರಿ – ಯಾವ್ಯಾವ ಸಚಿವರಿಗೆ ಯ್ಯಾವ ಜಿಲ್ಲೆಯ ಜವಾಬ್ದಾರಿ?

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್  ಜಿಲ್ಲಾವಾರು ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜವಾಬ್ದಾರಿ ವಹಿಸಿದ್ದಾರೆ. ತಮಗೆ ವಹಿಸಿರುವ ಜಿಲ್ಲೆಗಳಿಗೆ ತಕ್ಷಣ ಪ್ರವಾಸ ಕೈಗೊಂಡು, ಪ್ರತಿಯೊಂದು ತಾಲೂಕಿನಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ.

ಸಚಿವರು ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿ, ಮಳೆ, ಬೆಳೆ ಹಾನಿ, ಬರದ ಸ್ಥಿತಿ ಸೇರಿದಂತೆ ವಾಸ್ತವಾಂಶಗಳ ವರದಿಯನ್ನು ತಕ್ಷಣ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಯಾವ ಜಿಲ್ಲೆಗೆ ಯಾರ ಉಸ್ತುವಾರಿ?

  • ಡಾ. ಜಿ. ಪರಮೇಶ್ವರ್ – ತುಮಕೂರು
  • ಟಿ. ರಘುಮೂರ್ತಿ – ಚಿತ್ರದುರ್ಗ
  • ಬಿ.ಎಸ್. ಸುರೇಶ್ (ಬೈರತಿ) – ಚಿಕ್ಕಬಳ್ಳಾಪುರ
  • ಕೆ.ಹೆಚ್. ಮುನಿಯಪ್ಪ- ಬೆಂಗಳೂರು ಗ್ರಾಮಾಂತರ
  • ರಾಮಲಿಂಗಾರೆಡ್ಡಿ – ಕೋಲಾರ
  • ಹೆಚ್.ಸಿ. ಬಾಲಕೃಷ್ಣ – ಬೆಂಗಳೂರು ದಕ್ಷಿಣ
  • ಬಿ.ಜೆ. ಜಮೀರ್ ಅಹ್ಮದ್ ಖಾನ್ – ವಿಜಯನಗರ
  • ಕೆ.ಜೆ. ಜಾರ್ಜ್ – ಚಿಕ್ಕಮಗಳೂರು
  • ಕೆ.ಎಂ. ಶಿವಲಿಂಗೇಗೌಡ – ಹಾಸನ
  • ಮಧು ಬಂಗಾರಪ್ಪ – ಶಿವಮೊಗ್ಗ
  • ಎಂ.ಬಿ. ಪಾಟೀಲ್ – ವಿಜಯಪುರ, ಬಾಗಲಕೋಟೆ
  • ವಿಜಯಾನಂದ ಕಾಶಪ್ಪನವರ – ದಾವಣಗೆರೆ
  • ಎಸ್.ಎಸ್. ಮಲ್ಲಿಕಾರ್ಜುನ- ದಾವಣಗೆರೆ
  • ರುದ್ರಪ್ಪ ಲಮಾಣಿ – ಹಾವೇರಿ
  • ಬಸವರಾಜ ರಾಯರೆಡ್ಡಿ – ಗದಗ
  • ಸತೀಶ್ ಜಾರಕಿಹೊಳಿ – ಬೆಳಗಾವಿ
  • ಸಂತೋಷ್ ಲಾಡ್- ಧಾರವಾಡ
  • ಲಕ್ಷ್ಮಣ ಸವದಿ – ಉತ್ತರ ಕನ್ನಡ
  • ಪ್ರಿಯಾಂಕ್ ಖರ್ಗೆ – ಕಲಬುರಗಿ
  • ಅಜಯ್ ಧರಂ ಸಿಂಗ್ – ರಾಯಚೂರು
  • ಈಶ್ವರ್ ಖಂಡ್ರೆ – ಬೀದರ್
  • ಪಿ.ಎಂ. ನರೇಂದ್ರಸ್ವಾಮಿ – ಕೊಡಗು
  • ಯು.ಟಿ. ಖಾದರ್ – ದಕ್ಷಿಣ ಕನ್ನಡ, ಉಡುಪಿ
  • ಯತೀಂದ್ರ ಸಿದ್ದರಾಮಯ್ಯ – ಮೈಸೂರು
  • ಚೆಲುವರಾಯಸ್ವಾಮಿ – ಮಂಡ್ಯ
  • ಪುಟ್ಟರಂಗಶೆಟ್ಟಿ – ಚಾಮರಾಜನಗರ
  • ಬಿ. ನಾಗೇಂದ್ರ – ಬಳ್ಳಾರಿ
  • ಶರಣ ಪ್ರಕಾಶ ಪಾಟೀಲ್ – ಯಾದಗಿರಿ
  • ಶಿವರಾಜ್ ಸಂಗಪ್ಪ ತಂಗಡಗಿ- ಕೊಪ್ಪಳ
  • ಕೃಷ್ಣ ಬೈರೇಗೌಡ – ಬೆಂಗಳೂರು ನಗರ

ರಾಜ್ಯದ ಕೆಲವೆಡೆ ಮಳೆ ಹೆಚ್ಚಾಗಿ ಅತಿವೃಷ್ಟಿಯ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಮಳೆ ಕೊರತೆಯಿಂದ ಬರದ ಆತಂಕ ಎದುರಾಗಿದೆ. ಹೀಗಾಗಿ ಜಿಲ್ಲಾವಾರು ಪರಿಸ್ಥಿತಿಯನ್ನು ಸಚಿವರು ನೇರವಾಗಿ ಪರಿಶೀಲಿಸಿ, ಸರ್ಕಾರಕ್ಕೆ ವಾಸ್ತವ ವರದಿ ಸಲ್ಲಿಸುವುದು ಮಹತ್ವ ಪಡೆದಿದೆ.

Kishor KV