ಭಾರತಕ್ಕಿಲ್ಲ ಬೌಲಿಂಗ್ ಬ್ರಹ್ಮಾಸ್ತ್ರ – ಲಂಕಾ ಟೆಸ್ಟ್ ನಿಂದ ಜಸ್ಪ್ರೀತ್ ಬುಮ್ರಾ ಔಟ್
WTC ಫೈನಲ್ ಆಸೆಗೆ ನಬಿಯೇ ಆಸರೆ!

ಭಾರತಕ್ಕಿಲ್ಲ ಬೌಲಿಂಗ್ ಬ್ರಹ್ಮಾಸ್ತ್ರ – ಲಂಕಾ ಟೆಸ್ಟ್ ನಿಂದ ಜಸ್ಪ್ರೀತ್ ಬುಮ್ರಾ ಔಟ್WTC ಫೈನಲ್ ಆಸೆಗೆ ನಬಿಯೇ ಆಸರೆ!

ವಿಶ್ವಟೆಸ್ಟ್ ಚಾಂಪಿಯನ್ ಶಿಪ್​ ರೇಸ್​ನಲ್ಲಿ ಉಳೀಬೇಕು ಅಂದ್ರೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನ ಭಾರತ ಗೆಲ್ಲಲೇಬೇಕು. ಅಂಡರ್ ಪ್ರೆಶರ್​ನಲ್ಲಿ ಲಂಕೆಗೆ ಹಾರಬೇಕಿರೋ ಭಾರತಕ್ಕೆ ಈಗ ಬಿಗ್ ಶಾಕ್ ಎದುರಾಗಿದೆ. ಬೌಲಿಂಗ್ ಬ್ರಹ್ಮಾಸ್ತ್ರವಾಗಿರೋ ಜಸ್ಪ್ರೀತ್ ಬುಮ್ರಾ ಸರಣಿಯಿಂದಲೇ ರೂಲ್ಡ್ ಔಟ್ ಆಗಿದ್ದಾರೆ. ಌಂಡ್ ಕಾಶ್ಮೀರಿ ಡೈನಮೇಟ್​ ರಿಪ್ಲೇಸ್ ಪ್ಲೇಯರ್ ಆಗಿ ಬಂದಿದ್ದಾರೆ.

ಇದನ್ನೂ ಓದಿ :  2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅದ್ಧೂರಿ ತೆರೆ – 13 ಚಿನ್ನದ ಪದಕ ಸೇರಿ 39 ಪದಕ ಗೆದ್ದ ಭಾರತ

ಆಗಸ್ಟ್ 15ರಿಂದ ಆರಂಭವಾಗಲಿರೋ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನ ಟೀಂ ಇಂಡಿಯಾ ಶತಾಯ ಗತಾಯ ಗೆಲ್ಲಲೇಬೇಕು. ಬಟ್ ಬ್ಯಾಡ್​ಲಕ್ ಏನಂದ್ರೆ ಈ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಹೊರಬಿದ್ದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಬುಮ್ರಾ ಇನ್ನೂ ಕೂಡ ರಿಕವರ್ ಆಗಿಲ್ಲ. ಹೀಗಾಗಿ ರಣಜಿ ಟ್ರೋಫಿಯ ಹೀರೋ, ಕಾಶ್ಮೀರಿ ವೇಗಿ ಆಕಿಬ್ ನಬಿಗೆ ಬದಲಿ ಆಟಗಾರನಾಗಿ ಅವಕಾಶ ಸಿಕ್ಕಿದೆ.

ರಣಜಿ ಹೀರೋಗೆ ಕೊನೆಗೂ ಬಾಗಿಲು ತೆರೆದ ಬಿಸಿಸಿಐ!

ಅಷ್ಟಕ್ಕೂ ಇಲ್ಲಿ ಬುಮ್ರಾ ಬದಲಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರೋ ಆಕಿಬ್ ನಬಿ ನಿಜಕ್ಕೂ ಟ್ಯಾಲೆಂಟೆಡ್ ಪ್ಲೇಯರ್. ರಣಜಿ ಟೂರ್ನಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿದ್ದ ನಬಿಗಾಗಿ ಸಾಕಷ್ಟು ಫ್ಯಾನ್ಸ್, ಟೀಂ ಇಂಡಿಯಾ ಸ್ಟಾರ್ಸ್ ಕೂಡ ಧ್ವನಿ ಎತ್ತಿದ್ರು. ತಂಡದಲ್ಲಿ ಅವಕಾಶ ಕೊಡಿ ಅಂತಾ ಬೆನ್ನಿಗೆ ನಿಂತಿದ್ರು. ಕೊನೆಗೂ ಬಿಸಿಸಿಐ ಆಯ್ಕೆ ಸಮಿತಿ ಕಣ್ಬಿಟ್ಟಿದೆ. ಬುಮ್ರಾ ಸರಣಿಯಿಂದ ಹೊರಗುಳಿಯುತ್ತಿದ್ದಂತೆ ಆಕಿಬ್ ನಬಿಗೆ ಅದೃಷ್ಟ ಒಲಿದಿದೆ. ಇಂಪಾರ್ಟೆಂಟ್ ಥಿಂಗ್ ಏನಂದ್ರೆ ನಬಿ ತಮ್ಮದೇ ಸಾಮರ್ಥ್ಯದಿಂದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಡೊಮೆಸ್ಟಿಕ್ ಹೀರೋ ನಬಿ!

ಜಮ್ಮು ಮತ್ತು ಕಾಶ್ಮೀರದಿಂದ ಭಾರತ ತಂಡಕ್ಕೆ ಆಯ್ಕೆಯಾದ 3ನೇ ಆಟಗಾರ

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಪ್ರಚಂಡ ಪ್ರದರ್ಶನ ನೀಡಿ ಅದ್ಭುತ ರೆಕಾರ್ಡ್ಸ್

43 ಪ್ರಥಮ ದರ್ಜೆ ಪಂದ್ಯ, 71 ಇನ್ನಿಂಗ್ಸ್‌, 162 ವಿಕೆಟ್‌ ಗಳ ಬೇಟೆ

ಅತ್ಯುತ್ತಮ ಇನ್ನಿಂಗ್ಸ್ ಅಂದ್ರೆ 24 ರನ್‌ಗಳಿಗೆ 7 ವಿಕೆಟ್‌ ಗಳನ್ನು ಪಡೆದಿದ್ದು

ಪ್ರಥಮ ದರ್ಜೆ ಕ್ರಿಕೆಟ್‌ ನಲ್ಲಿ ಎರಡು ಅರ್ಧಶತಕ ಸೇರಿ 999 ರನ್‌ಸ್​ ಗಳಿಕೆ

ಕಳೆದ ಎರಡು ರಣಜಿ ಟ್ರೋಫಿ ಋತುಗಳಲ್ಲಿ ಒಟ್ಟು 104 ವಿಕೆಟ್‌ ಗಳ ಬೇಟೆ

2025-26ರ ರಣಜಿಯಲ್ಲಿ 17 ಇನ್ನಿಂಗ್ಸ್‌ ಗಳಲ್ಲಿ 60 ವಿಕೆಟ್‌ ಗಳ ಬೇಟೆ

ಗರಿಷ್ಠ ವಿಕೆಟ್ ಟೇಕರ್ ಹಾಗೂ ಪ್ಲೇಯರ್ ಆಫ್ ದಿ ಸೀರಿಸ್ ಪ್ರಶಸ್ತಿ

92 ವರ್ಷಗಳ ರಣಜಿ ಇತಿಹಾಸದಲ್ಲಿ 60 ವಿಕೆಟ್ಸ್ ಪಡೆದ 3ನೇ ಪ್ಲೇಯರ್

ದುಲೀಪ್ ಟ್ರೋಫಿ ಇತಿಹಾಸದಲ್ಲೇ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್

ಶ್ರೀಲಂಕಾ ಟೂರ್​ನಲ್ಲಿ ಎರಡು ಅನಧಿಕೃತ ಟೆಸ್ಟ್​ ಪಂದ್ಯಗಳಲ್ಲಿ 6 ವಿಕೆಟ್‌

ಆಕಿಬ್ ನಬಿ ಅವರ ಬೌಲಿಂಗ್ ಸ್ಟ್ರೈಲ್ ಮತ್ತು ಪ್ರಸ್ತುತ ಫಾರ್ಮ್ ಅನ್ನು ಗಮನಿಸಿದರೆ, ಅವರು ಭಾರತೀಯ ಟೆಸ್ಟ್ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಬಲ್ಲರು. ಯಾಕಂದ್ರೆ ಅವ್ರ ಬೌಲಿಂಗ್ ಶೈಲಿಯೇ ಹಾಗಿದೆ. ಕೇವಲ ಸ್ಪೀಡ್ ಮೇಲೆ ಮಾತ್ರ ಫೋಕಸ್ ಮಾಡಲ್ಲಿ.  ತಮ್ಮ ರಿಸ್ಟ್ ಪೊಸಿಷನ್ ಬಳಸಿ ಚೆಂಡನ್ನು ಎರಡೂ ಕಡೆ ಇನ್ ಸ್ವಿಂಗ್ ಮತ್ತು ಔಟ್ ಸ್ವಿಂಗ್ ಮಾಡ್ತಾರೆ. ಹಾಗೇ ನ್ಯೂಬಾಲ್​ನಲ್ಲಿ ವಿಕೆಟ್ಸ್ ಬೇಕು ಅಂದ್ರೆ ನಬಿಯನ್ನ ಟ್ರಸ್ಟ್ ಮಾಡ್ಬೋದು. ಇನ್ನೊಂದು ಮೇನ್ ಪ್ಲಸ್ ಏನಂದ್ರೆ ಪಿಚ್ ಯಾವುದೇ ಇದ್ರೂ ಅವ್ರ ಕನ್ಸಿಸ್ಟೆನ್ಸಿ ಕಡಿಮೆ ಆಗಿಲ್ಲ. ಲೈನ್ ಌಂಡ್ ಲೆಂಗ್ತ್ ಪರ್ಫೆಕ್ಟ್ ಆಗಿರುತ್ತೆ. ಅದ್ರಲ್ಲೂ ಟೆಸ್ಟ್ ಕ್ರಿಕೆಟ್​ನಲ್ಲಿ ಬ್ಯಾಟರ್​ಗಳನ್ನ ಕಂಪ್ಲೀಟ್​ ಆಗಿ ಪ್ರೆಶರ್​ನಲ್ಲಿ ಇಡ್ತಾರೆ. ಌಂಡ್ ಒನ್ ಮೋರ್ ಥಿಂಗ್.. ಬ್ಯಾಟಿಂಗ್ ಅಷ್ಟೇ ಅಲ್ಲ ಲೋವರ್ ಆರ್ಡರ್​ನಲ್ಲಿ ಬ್ಯಾಟಿಂಗ್​ನಲ್ಲೂ ಮಿಂಚಬಲ್ಲರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ ಕೇವಲ 82 ಎಸೆತಗಳಲ್ಲಿ 114 ರನ್ ಚಚ್ಚಿದ ದಾಖಲೆ ಇವರ ಹೆಸರಲ್ಲಿದೆ. ಹೀಗಾಗಿ ಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಬೆಸ್ಟ್ ಪಿಕ್ ಎನಿಸುತ್ತೆ. ಇಂಡಿಯನ್ ಪಿಚ್​ಗಳಲ್ಲಿ ಹೀರೋ ಆಗಿರೋ ನಬಿಗೆ ವಿದೇಶಿ ಪಿಚ್​ಗಳಲ್ಲಿ ಆಡಿದ್ದು ತೀರಾ ಕಮ್ಮಿ. ಸೋ ಆಗಸ್ಟ್ 15 ರಂದು ಗಾಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಮ್ಯಾಚ್ ನಡೆಯಲಿದ್ದು ಇಲ್ಲಿ ಹೇಗೆ ಪರ್ಫಾಮ್ ಮಾಡ್ತಾರೆ ನೋಡ್ಬೇಕು.

Shantha Kumari

Leave a Reply

Your email address will not be published. Required fields are marked *