ಯಾರಿಗೆಲ್ಲಾ ಮಂತ್ರಿಗಿರಿ? ಮಹಿಳೆಗೆ ಒಂದೇ ಸ್ಥಾನ, ಯುವಕರಿಗಿಲ್ಲ ಚಾನ್ಸ್
ಲಕ್ಷ್ಮೀ ಹೆಬ್ಬಾಳ್ಕರ್ಗೆ ಕೈ ಕೊಟ್ಟಿದ್ದೇಕೆ ಡಿಕೆಶಿ?

ಯಾರಿಗೆಲ್ಲಾ ಮಂತ್ರಿಗಿರಿ?  ಮಹಿಳೆಗೆ ಒಂದೇ ಸ್ಥಾನ, ಯುವಕರಿಗಿಲ್ಲ ಚಾನ್ಸ್ಲಕ್ಷ್ಮೀ ಹೆಬ್ಬಾಳ್ಕರ್ಗೆ ಕೈ ಕೊಟ್ಟಿದ್ದೇಕೆ ಡಿಕೆಶಿ?

ಅಂತು ಇಂತೂ ಅಳೆದು ತೂಗಿ ಡಿಕೆ ಸಂಪುಟಕ್ಕೆ ಹೊಸ ಸಚಿವರನ್ನ ಕೈ ಹೈಕಮಾಂಡ್ ಆಯ್ಕೆ ಮಾಡಿದೆ. ಎಐಸಿಸಿ ಹೈಕಮಾಂಡ್‌ ಅಂತಿಮಗೊಳಿಸಿದ ಈ ಪಟ್ಟಿಯಲ್ಲಿ 20 ಜನರಿಗೆ ಅವಕಾಶ ನೀಡಲಾಗಿದ್ದು, 13 ಹೊಸಬರು ಹಾಗೂ ಒಬ್ಬ ಮಹಿಳೆಗೆ ಅವಕಾಶ ನೀಡಲಾಗಿದೆ.

ಜೂನ್‌ 3ರಂದು ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸಿದರು. ಅವರ ಜೊತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿದಂತೆ ಇತರ 12 ಮಂದಿ ಸಚಿವ ಸಂಪುಟ ಸೇರಿದ್ದರು. ಇಂದಿಗೆ ಬರೋಬರಿ ಎರಡು ತಿಂಗಳಾಗಿದೆ. ಕಳೆದ 20 ದಿನಗಳಿಂದಲೂ ಸಂಪುಟ ವಿಸ್ತರಣೆಗಾಗಿ ಬೆಂಗಳೂರು, ದೆಹಲಿಯಲ್ಲಿ ನಾನಾ ರೀತಿಯ ಕಸರತ್ತುಗಳಾಗಿವೆ. ಕಳೆದ ಜೂನ್‌ 30ರಂದು ಕಾಂಗ್ರೆಸ್‌‍ ಹೈಕಮಾಂಡ್‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿತ್ತು. ಅಂತಿಮವಾಗಿ ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗೂ ಏಕಕಾಲಕ್ಕೆ  ಹೊಸ ಸಚಿವರನ್ನ ಹೆಸರಿಸಲಾಗಿದೆ. ಹಾಗಿದ್ರೆ ಯಾರಿಗೆಲ್ಲಾ ಚಾನ್ಸ್ ಸಿಕ್ಕಿದೆ ಅನ್ನೋದ್ದನ್ನ ನೋಡೋಣ.

ಡಿಕೆ ಸಂಪುಟದ ಹೊಸ ಸಚಿವರು

ಮಧುಬಂಗಾರಪ್ಪ – ಸೊರಬ

ಪುಟ್ಟರಂಗಶೆಟ್ಟಿ- ಚಾಮರಾಜನಗರ

ಎಸ್‌ಎಸ್‌ ಮಲ್ಲಿಕಾರ್ಜುನ್

ನರೇಂದ್ರಸ್ವಾಮಿ- ಮಳವಳ್ಳಿ

ಶಿವರಾಜ್ ತಂಗಡಗಿ – ಕನಕಗಿರಿ

ರುದ್ರಪ್ಪ ಲಮಾಣಿ- ಹಾವೇರಿ

ಬಸವಂತಪ್ಪ -ಮಾಯಕೊಂಡ

ನಾಗೇಂದ್ರ- ಬಳ್ಳಾರಿ.ಗ್ರಾ

ಟಿ.ರಘುಮೂರ್ತಿ- ಚಳ್ಳಕೆರೆ

ಜಮೀರ್ ಅಹ್ಮದ್- ಚಾಮರಾಜನಗರ

ರಿಜ್ವಾನ್ ಅರ್ಷದ್ – ಶಿವಾಜಿನಗರ

ಸಂತೋಷ್ ಲಾಡ್ – ಚಳ್ಳಕೆರೆ

ಡಾ. ಅಜಯ್ ಸಿಂಗ್ – ಜೀವರ್ಗಿ

ಚೆಲುವರಾಯಸ್ವಾಮಿ – ನಾಗಮಂಗಲ

ಶಿವಲಿಂಗೇಗೌಡ – ಅರಸೀಕೆರೆ

ಲಕ್ಷ್ಮಣ ಸವದಿ

ಗಾಯಿತ್ರಿ ಶಾಂತೇಗೌಡ

ಅಜಯ್ ಸಿಂಗ್

ಶಿವರಾಜ್ ತಂಗಡಗಿ

ಬಸವರಾಜ್ ರಾಯರೆಡ್ಡಿ

ಇನ್ನೂ ಕಳೆದ ಸಂಪುಟದಲ್ಲಿ ಇರದ ಈ ಬಾರಿ ಸಚಿವ ಸ್ಥಾನ ಪಡೆದ ಹೊಸಬರು ಯಾರೆಲ್ಲಾ?

  • ಪಿ.ಎಂ ನರೇಂದ್ರಸ್ವಾಮಿ – ಮಳವಳ್ಳಿ
  • ರುದ್ರಪ್ಪ ಲಮಾಣಿ – ಹಾವೇರಿ
  • ಕೆ.ಎಸ್ ಬಸವಂತಪ್ಪ – ಮಾಯಕೊಂಡ
  • ಟಿ ರಘುಮೂರ್ತಿ – ಚಳ್ಳಕೆರೆ
  • ರಿಜ್ವಾನ್ ಅರ್ಷದ್ – ಶಿವಾಜಿನಗರ
  • ಸಿ ಪುಟ್ಟರಂಗಶೆಟ್ಟಿ – ಚಾಮರಾಜನಗರ
  • ಅಜಯ್ ಸಿಂಗ್ – ಜೇವರ್ಗಿ
  • ಕೆ.ಎಂ ಶಿವಲಿಂಗೇಗೌಡ – ಅರಸೀಕೆರೆ
  • ಎಚ್.ಸಿ ಬಾಲಕೃಷ್ಣ – ಮಾಗಡಿ
  • ಗಾಯತ್ರಿ ಶಾಂತೇಗೌಡ – ಪರಿಷತ್ ಸದಸ್ಯೆ
  • ಬಸವರಾಜ್ ರಾಯರೆಡ್ಡಿ – ಯಲಬುರ್ಗಾ
  • ವಿಜಯಾನಂದ ಕಾಶಪ್ಪನವರ್ – ಹುನಗುಂದ
  • ಲಕ್ಷ್ಮಣ ಸವದಿ – ಅಥಣಿ

 

ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಕೈ ತಪ್ಪಿದ ಸಚಿವ ಸ್ಥಾನ!

ಇನ್ನೂ ಸಿದ್ದು ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಸಚಿವರಾಗಿದ್ದ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಡಿಕೆ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದೆ. ಇವರಿಗೆ ಸಿಕ್ಕೇ ಸಿಗುತ್ತೆ ಅಂತ ಹೇಳಲಾಗಿತ್ತು. ಬಟ್ ಡಿಕೆಶಿ ಆಪ್ತ ವಲಯದಲ್ಲಿ ಗುರುತಿಸಿಕೊಂಡ್ರು ಕೂಡ್ರು ಕೂಡ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.

Kishor KV

Leave a Reply

Your email address will not be published. Required fields are marked *