ವೈಭವ್ ಸೂರ್ಯವಂಶಿ ಔಟ್.. ಭುವನೇಶ್ವರ್ ಎಂಟ್ರಿ – ODI ವಿಶ್ವಕಪ್ ಗಿಲ್ಲ ಅಭಿಷೇಕ್
R.ಅಶ್ವಿನ್ ತಂಡದಲ್ಲಿ ಯಾರೆಲ್ಲಾ?

2027ರ ಏಕದಿನ ವಿಶ್ವಕಪ್ಗೆ ಭಾರತ ತಂಡದಲ್ಲಿ ಯಾರ್ಯಾರನ್ನ ಸೆಲೆಕ್ಟ್ ಮಾಡ್ಬೇಕು ಅನ್ನೋ ಬಗ್ಗೆ ಒಬ್ಬೊಬ್ರೂ ಒಂದೊಂದು ರೀತಿಯ ಸಜೇಷನ್ಸ್ ಕೊಡ್ತಾರೆ. ತಮ್ಮದೇ ಆದ ಟೀಂ ಸೆಲೆಕ್ಷನ್ ಮಾಡ್ತಾರೆ. ಈಗ ಆರ್ ಅಶ್ವಿನ್ ಕೂಡ ತಂಡದ ಆಯ್ಕೆ ಬಗ್ಗೆ ಪ್ರೆಡಿಕ್ಟ್ ಮಾಡಿದ್ದಾರೆ.
ಇದನ್ನೂ ಓದಿ : RCBಗೆ ಜೇಕಬ್ ಬೆಥೆಲ್ ಬೇಕಾ ಬೇಡ್ವಾ? – ಪ್ಲೇಯಿಂಗ್ 11ನಲ್ಲಿ ಆಡಿಸಲೇಬೇಕಾ?
ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2027 ರ ಏಕದಿನ ವಿಶ್ವಕಪ್ಗೆ ತಮ್ಮದೇ ಌಂಗಲ್ನಲ್ಲಿ ಟೀಂ ಸೆಲೆಕ್ಟ್ ಮಾಡಿದ್ದಾರೆ. ಅಶ್ವಿನ್ ಆಯ್ಕೆ ಮಾಡಿರೋ ಹೆಸರುಗಳ ಬಗ್ಗೆ ಅಚ್ಚರಿಯೂ ಮೂಡಿದೆ. ಅನುಭವಿಗಳು, ಹೊಸಬರ ಜೊತೆಗೆ ತಂಡದಿಂದ ದೂರ ಉಳಿದಿರೋ ಪ್ಲೇಯರ್ಗಳ ಹೆಸರನ್ನೂ ಉಲ್ಲೇಖ ಮಾಡಿದ್ದಾರೆ. ಌಂಡ್ ಎಸ್ಪೆಶಿಯಲಿ ಭುವನೇಶ್ವರ್ ಹೆಸರನ್ನ ತಗೊಂಡಿದ್ದಾರೆ. 2022 ರಿಂದ ತಂಡದ ಹೊರಗಿರೋ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಏಕದಿನ ವಿಶ್ವಕಪ್ನಲ್ಲಿ ಆಡಿಸಬೇಕು ಎಂದು ಸಜೇಷನ್ ಕೊಟ್ಟಿದ್ದಾರೆ. 2027 ರ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ನಮೀಬಿಯಾದಲ್ಲಿ ನಡೆಯೋದ್ರಿಂದ ಅನುಭವಿ ಸೀಮರ್ ಆಯ್ಕೆ ಮಾಡೋದು ಉತ್ತಮ ಎಂದಿದ್ದಾರೆ.
ಅಶ್ವಿನ್ ಪ್ರಕಾರ ಭಾರತ ತಂಡ!
ಬ್ಯಾಟರ್ಸ್ : ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್
ವಿಕೆಟ್ ಕೀಪರ್ಸ್ : ಕೆಎಲ್ ರಾಹುಲ್, ಇಶಾನ್ ಕಿಶನ್
ಆಲ್ ರೌಂಡರ್ಸ್ : ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್
ಬೌಲರ್ಸ್ : ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ,
ಭುವನೇಶ್ವರ್ ಕುಮಾರ್
ಹೀಗೆ ಅಶ್ವಿನ್ ಪಿಕ್ ಮಾಡಿರೋ ತಂಡದಲ್ಲಿ ಬೌಲರ್ಗಳಿಗೆ ಹೆಚ್ಚಿನ ಪ್ರಿಪರೆನ್ಸ್ ಕೊಟ್ಟಿದ್ದಾರೆ. ಌಂಡ್ ಭುವಿ ತಂಡಕ್ಕೆ ಬೇಕೇಬೇಕು ಅನ್ನೋ ಅರ್ಥದಲ್ಲಿ ವಾದಿಸಿದ್ದಾರೆ. ಇವ್ರಿಷ್ಟೇ ಅಲ್ಲದೆ ಯಾರನ್ನ ಸ್ಟಾಂಟ್ ಅಪ್ ಪ್ಲೇಯರ್ಸ್ ಆಗಿ ಇಟ್ಕೊಳ್ಭೋದು ಅನ್ನೋದನ್ನೂ ಹೇಳಿದ್ದಾರೆ. ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ವರುಣ್ ಚಕ್ರವರ್ತಿ , ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ ಬಹುಶಃ ಇವ್ರಲ್ಲಿ ಯಾರಿಗಾದ್ರೂ ಚಾನ್ಸ್ ಕೊಡ್ಬೋದು ಅನ್ನೋ ಅರ್ಥದಲ್ಲಿ ಅಂದ್ರೆ ವೇಯ್ಟಿಂಗ್ ಲಿಸ್ಟ್ ನಲ್ಲಿ ಇಟ್ಟಿದ್ದಾರೆ. ಬಟ್ ರಿಷಬ್ ಪಂತ್, ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಅಥವಾ ಇತರ ಹಲವು ಸೂಪರ್ ಸ್ಟಾರ್ ಆಟಗಾರರಿಗೆ ಸ್ಥಾನ ನೀಡಿಲ್ಲ. ಹೀಗೆ ಆರ್ ಅಶ್ವಿನ್ ಪ್ರೆಡಿಕ್ಟ್ ಮಾಡಿರೋ ಲಿಸ್ಟ್ನಲ್ಲಿ ಕೆಲವರ ಹೆಸರು ಶಾಕಿಂಗ್ ಅನ್ಸಿಸ್ಬೋದು. ಆದ್ರೆ ಭುವನೇಶ್ವರ್ ಕುಮಾರ್ಗಂತೂ ಅವಕಾಶ ಕೊಡ್ಲೇಬೇಕು ಅಂತಾ ಬೆನ್ನಿಗೆ ನಿಂತಿದ್ದಾರೆ. ಭಾರತದ ಪರ ಭುವನೇಶ್ವರ್ ಕುಮಾರ್ 121 ಏಕದಿನ ಪಂದ್ಯಗಳಲ್ಲಿ 35.11ರ ಸರಾಸರಿ ಮತ್ತು 5.08ರ ಎಕಾನಮಿ ದರದೊಂದಿಗೆ 141 ವಿಕೆಟ್ಗಳನ್ನು ಪಡೆದಿದ್ದಾರೆ; ಇದರಲ್ಲಿ 5/42 ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಒಟ್ಟಾರೆಯಾಗಿ 229 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವರು 294 ವಿಕೆಟ್ಗಳನ್ನು ಕಬಳಿಸಿದ್ದಾರೆ.ಕಳೆದ ಎರಡು ವರ್ಷಗಳಿಂದ ಆರ್ಸಿಬಿ ಪರ ಅದ್ಭುತ ಪ್ರದರ್ಶನ ನೀಡ್ತಿರೋದ್ರಿಂದ ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶ ಕೊಡ್ಬೇಕು ಅನ್ನೋ ಒತ್ತಾಯಗಳು ಹೆಚ್ಚುತ್ತಿವೆ.

ನೋಡಿರಿ

