ರಿಕ್ಕಿ ಕೇಜ್‌ಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ – ಮೂರನೇ ಬಾರಿಗೆ ಪ್ರಶಸ್ತಿ ಪಡೆದ ಹೆಗ್ಗಳಿಕೆ

ರಿಕ್ಕಿ ಕೇಜ್‌ಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ – ಮೂರನೇ ಬಾರಿಗೆ ಪ್ರಶಸ್ತಿ ಪಡೆದ ಹೆಗ್ಗಳಿಕೆ

ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಅವರಿಗೆ ಮೂರನೇ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದಿದೆ. 65ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ಸ್‌ ಸಮಾರಂಭದಲ್ಲಿ ರಿಕ್ಕಿ ಕೇಜ್ ಅವರ ‘ಡಿವೈನ್ ಟೈಡ್ಸ್’ ಆಲ್ಬಮ್‌ ಪ್ರಶಸ್ತಿಗೆ ಪಾತ್ರವಾಗಿದೆ. ಈ ಮೂಲಕ ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ಸ್‌ ನ್ನು ಮೂರು ಬಾರಿ ಪಡೆದಿರುವ ಭಾರತೀಯ ಎಂಬ ಹೆಗ್ಗಳಿಕೆಗೂ ರಿಕ್ಕಿ ಕೇಜ್ ಪಾತ್ರರಾಗಿದ್ದಾರೆ. ‘ಡಿವೈನ್ ಟೈಡ್ಸ್’ ಆಲ್ಬಮ್ 2021ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ 9 ಹಾಡುಗಳು, 8 ಮ್ಯೂಸಿಕ್ ವಿಡಿಯೋಗಳಿವೆ. ಅಮೆರಿಕದ ಲಾಸ್ ಏಂಜೆಲೀಸ್‌ನಲ್ಲಿ ಈ ವರ್ಷದ ಗ್ರ್ಯಾಮಿ ಪ್ರಶಸ್ತಿಯ ಫಲಿತಾಂಶವನ್ನು ಘೋಷಣೆ ಮಾಡಲಾಗಿತ್ತು.

ಇದನ್ನೂ ಓದಿ:  ಪಠಾಣ್ ಇಷ್ಟ ಆಗಿಲ್ಲ ಎಂದ ಮಗು – ಬಾಲಿವುಡ್ ಕಿಂಗ್ ಖಾನ್ ಶಾರುಖ್ ಹೇಳಿದ್ದೇನು?

ರಿಕ್ಕಿ ಕೇಜ್​ ಹುಟ್ಟಿದ್ದು ಅಮೆರಿಕದಲ್ಲಿ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರಿಕ್ಕಿ ಕೇಜ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ರಿಕ್ಕಿ ಕೇಜ್ ಇದುವರೆಗೆ 100ಕ್ಕೂ ಅಧಿಕ ಪಶಸ್ತಿಗಳನ್ನು ಗೆದ್ದಿದ್ದಾರೆ. ಸಂಗೀತ ಕ್ಷೇತ್ರದ ಅತಿ ಪ್ರತಿಷ್ಠಿತ ಅವಾರ್ಡ್ ಅಂದ್ರೆ ಅದು ಗ್ರ್ಯಾಮಿ. ಇಲ್ಲಿ ವಿಶ್ವದ ದಿಗ್ಗಜ ಸಂಗೀತಗಾರರು ಭಾಗವಹಿಸುತ್ತಾರೆ. 2015ರಲ್ಲಿ ‘ವಿಂಡ್ಸ್​ ಆಫ್​ ಸಂಸಾರ’ ಆಲ್ಬಂಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ದೊರೆತಿತ್ತು. ಈಗ ಬಾರಿ ‘ಡಿವೈನ್​ ಟೈಡ್ಸ್​’ ಆಲ್ಬಂಗೆ ಸ್ಟೀವರ್ಟ್ ಕೋಪ್​​ಲ್ಯಾಂಡ್​ ಹಾಗೂ ರಿಕ್ಕಿ ಕೇಜ್​ಗೆ ಒಟ್ಟಾಗಿ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಆಡಿಯೋ ಆಲ್ಬಂ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ.

suddiyaana