2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅದ್ಧೂರಿ ತೆರೆ – 13 ಚಿನ್ನದ ಪದಕ ಸೇರಿ 39 ಪದಕ ಗೆದ್ದ ಭಾರತ

 2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅದ್ಧೂರಿ ತೆರೆ – 13 ಚಿನ್ನದ ಪದಕ ಸೇರಿ 39 ಪದಕ ಗೆದ್ದ ಭಾರತ

2026ರ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಅದ್ಧೂರಿ ತೆರೆ ಬಿದ್ದಿದೆ.  ಮಿನಿ ಒಲಿಂಪಿಕ್ಸ್‌ ಖ್ಯಾತಿಯ ಜಾಗತಿಕ ಮಟ್ಟದ ಕ್ರೀಡಾಕೂಟವು ನಿನ್ನೆ ರಾತ್ರಿ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿತು. ಇದರಲ್ಲಿ ಭಾರತ ತಾಕತ್ತನ್ನ ಪ್ರದರ್ಶನ ಮಾಡಿದೆ.

ಈ ಬಾರಿ ಸೀಮಿತ ಕ್ರೀಡೆಗಳಿದ್ದರೂ ಭಾರತ ಅತ್ಯುತ್ತಮ ಪ್ರದರ್ಶನ ನೀಡಿದೆ. ಜುಲೈ 23ರಂದು ಆರಂಭಗೊಂಡಿದ್ದ ಗೇಮ್ಸ್‌ನಲ್ಲಿ 39 ಪದಕ ಗೆದ್ದಿದೆ.

ಭಾರತ

13 ಚಿನ್ನ

17 ಬೆಳ್ಳಿ 

9 ಕಂಚು

ಒಟ್ಟು 39 ಪದಕ

ಭಾರತೀಯರಲ್ಲಿ ಪದಕ ಗಳಿಕೆಯಲ್ಲಿ ಪುರುಷರು ಮೇಲುಗೈ ಸಾಧಿಸಿದರು. ಆದರೆ ಚಿನ್ನದ ಸಾಧನೆಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು 8 ಚಿನ್ನ, 4 ಬೆಳ್ಳಿ, 4 ಕಂಚು ಸೇರಿ 16 ಪದಕ ಗೆದ್ದರು. ಪುರುಷರ 5 ಚಿನ್ನ, 13 ಬೆಳ್ಳಿ, 5 ಕಂಚು ಸೇರಿ 22 ಪದಕ ತಮ್ಮದಾಗಿಸಿಕೊಂಡರು.

2022ರ ಗೇಮ್ಸ್‌ನಲ್ಲಿ ಭಾರತ 22 ಚಿನ್ನ ಸೇರಿದಂತೆ 61 ಪದಕ ಗೆದ್ದಿತ್ತು. ಈ ಬಾರಿ 13 ಚಿನ್ನ ಸೇರಿ 39 ಪದಕ ಗೆದ್ದಿದೆ. ಕಳೆದ ಬಾರಿಗಿಂತ ಈ ಬಾರಿ 22 ಪದಕಗಳು ಕಡಿಮೆಯಾದರೂ, ಒಟ್ಟಾರೆ ಪ್ರದರ್ಶನಕ್ಕೆ ಹೋಲಿಸಿದರೆ ಭಾರತ ಶ್ರೇಷ್ಠ ಸಾಧನೆ ಮಾಡಿದೆ. ಕಳೆದ ಬಾರಿ ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ಹಾಕಿ, ಕ್ರಿಕೆಟ್‌, ಸ್ಕ್ವಾಶ್‌ ಸೇರಿ ಭಾರತ 30 ಪದಕ ಗೆದ್ದಿದ್ದ ಕ್ರೀಡೆಗಳು ಈ ಬಾರಿ ಇರಲಿಲ್ಲ. ಈ ಸಲ ಭಾರತ 10 ಕ್ರೀಡೆಗಳಲ್ಲಿ 39 ಪದಕ ಗೆದ್ದಿದೆ. ಇದೇ 10 ಕ್ರೀಡೆಗಳಲ್ಲಿ ಭಾರತ 2022ರಲ್ಲಿ 31 ಪದಕ ಬಾಚಿತ್ತು. ಹೀಗಾಗಿಯೇ 2026ರ ಪ್ರದರ್ಶನ ಭಾರತದ ಪಾಲಿಗೆ ಅತ್ಯುತ್ತಮ.

10 ಕ್ರೀಡೆಗಳಲ್ಲಿ ಸ್ಪರ್ಧೆ: ಪದಕ ಬಂದಿದ್ದು 5ರಲ್ಲಿ

ಭಾರತದ 124 ಕ್ರೀಡಾಪಟುಗಳು ಈ ಬಾರಿ ಒಟ್ಟು 10 ಕ್ರೀಡೆಗಳಲ್ಲಿ ಸ್ಪರ್ಧಿಸಿದ್ದರು. ಈ ಪೈಕಿ ಬಾಕ್ಸಿಂಗ್‌, ವೇಟ್‌ಲಿಫ್ಟಿಂಗ್‌, ಅಥ್ಲೆಟಿಕ್ಸ್‌, ಪ್ಯಾರಾ ಪವರ್‌ಲಿಫ್ಟಿಂಗ್‌ ಹಾಗೂ ಜುಡೋದಲ್ಲಿ ಮಾತ್ರ ಭಾರತಕ್ಕೆ ಪದಕ ಲಭಿಸಿವೆ. ಉಳಿದಂತೆ ಈಜಿನಲ್ಲಿ ಭಾರತೀಯರು ನೀರಸ ಪ್ರದರ್ಶನ ನೀಡಿದ್ದು, ಒಂದೂ ಪದಕ ಗೆದ್ದಿಲ್ಲ. 3*3 ಬಾಸ್ಕೆಟ್‌ಬಾಲ್‌, ಸೈಕ್ಲಿಂಗ್‌, ಲಾನ್‌ ಬೌಲ್ಸ್‌, ಜಿಮ್ನಾಸ್ಟಿಕ್‌ನಲ್ಲೂ ಭಾರತಕ್ಕೆ ಪದಕ ಬಂದಿಲ್ಲ.

 

Kishor KV

Leave a Reply

Your email address will not be published. Required fields are marked *