ವೀಕ್ಷಕರಿಗೆ ಶಾಕ್‌ ಕೊಟ್ಟ ಕಲರ್ಸ್‌ ಕನ್ನಡ ವಾಹಿನಿ! – ಒಟ್ಟಿಗೆ ಮುಕ್ತಾಯವಾಗಲಿದೆ 2 ಸೀರಿಯಲ್‌ಗಳು!

ವೀಕ್ಷಕರಿಗೆ ಶಾಕ್‌ ಕೊಟ್ಟ ಕಲರ್ಸ್‌ ಕನ್ನಡ ವಾಹಿನಿ! – ಒಟ್ಟಿಗೆ ಮುಕ್ತಾಯವಾಗಲಿದೆ 2 ಸೀರಿಯಲ್‌ಗಳು!

ಕಲರ್ಸ್‌ ಕನ್ನಡ ಮನರಂಜನೆ ಕೊಡೋದ್ರಲ್ಲಿ ಎತ್ತಿದ ಕೈ. ಹೊಸ ಹೊಸ ರಿಯಾಲಿಟಿ ಶೋ. ವಿಭಿನ್ನ ಕಥಾಹಂದರ ಹೊಂದಿರುವ ಸೀರಿಯಲ್‌ ಮೂಲಕ ಮನರಂಜನೆಯನ್ನ ನೀಡ್ತಾ ಬಂದಿದೆ. ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ 13 ಬೇಗನೇ ಶುರುವಾಗ್ತಿದೆ. ಈ ಬೆನ್ನಲ್ಲೇ ಯಾವ ಸೀರಿಯಲ್‌ ಮುಕ್ತಾಯವಾಗಲಿದೆ ಅನ್ನೋ ಪ್ರಶ್ನೆ ಜನರನ್ನ ಕಾಡ್ತಿದೆ. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಸೈಟ್ ಪಡೆದು ಮನೆ ಕಟ್ಟದವರಿಗೆ ಡಿಕೆಶಿ ಶಾಕ್ – ನಿವೇಶನ ವಶ, ನಿಮ್ಮ ಹಣ ಬಡ್ಡಿ ಸಮೇತ ವಾಪಸ್

ಹೌದು ಬಿಗ್‌ಬಾಸ್‌ ಆರಂಭದ ಸುದ್ದಿ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಸಾಗುತ್ತಿದ್ದ ಎರಡು ಪ್ರಮುಖ ಧಾರಾವಾಹಿಗಳು ಅಂತ್ಯವಾಗ್ತಿದೆ. ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಾದ ‘ಭಾರ್ಗವಿ ಎಲ್‌ಎಲ್‌ಬಿ’ ಹಾಗೂ ‘ಪ್ರೇಮಕಾವ್ಯ’ ಶೀಘ್ರದಲ್ಲೇ ಮುಕ್ತಾಯಗೊಳ್ಳುತ್ತಿದ್ದು, ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್‌ಗಳು ಸಖತ್ ವೈರಲ್ ಆಗುತ್ತಿವೆ.

ಅಕ್ಕ-ತಂಗಿಯರ ಅಪಾರ ಬಾಂಧವ್ಯ, ಪ್ರೀತಿ ಮತ್ತು ಸಂಸಾರದ ಏರಿಳಿತಗಳ ಕಥಾಹಂದರ ಹೊಂದಿದ್ದ ‘ಪ್ರೇಮಕಾವ್ಯ’ ಧಾರಾವಾಹಿ ಕೂಡ ತನ್ನ ಪ್ರಸಾರವನ್ನು ಕಾಯಂ ಆಗಿ ಸ್ಥಗಿತಗೊಳಿಸುತ್ತಿದೆ. ಪ್ರಿಯಾ ಜೆ. ಆಚಾರ್, ವೈಷ್ಣವಿ, ರಘು ಹಾಗೂ ವಿಕಾಸ್ ಮುಂತಾದ ಪ್ರತಿಭಾವಂತ ಕಲಾವಿದರ ನಟನೆಯಿಂದ ಕೌಟುಂಬಿಕ ವೀಕ್ಷಕರ ಮನಗೆದ್ದಿದ್ದ ಈ ಧಾರಾವಾಹಿ, ತನ್ನ ಭಾವನಾತ್ಮಕ ಕ್ಲೈಮ್ಯಾಕ್ಸ್ ಸಂಚಿಕೆಗಳೊಂದಿಗೆ ವೀಕ್ಷಕರಿಗೆ ವಿದಾಯ ಹೇಳಲಿದೆ.

ಕಾನೂನು ಸಮರ ಹಾಗೂ ಕುಟುಂಬದ ಭಾವನಾತ್ಮಕ ಎಳೆಗಳನ್ನಿಟ್ಟುಕೊಂಡು ತೆಲುಗಿನ ‘ಗೀತಾ ಎಲ್‌ಎಲ್‌ಬಿ’ ರಿಮೇಕ್ ಆಗಿ ಮೂಡಿಬಂದಿದ್ದ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿ ಅಂತ್ಯ ಕಾಣುತ್ತಿದೆ. ಸ್ವಪ್ನ ಕೃಷ್ಣ ಅವರ ಕಲ್ಪನೆಯಲ್ಲಿ ರೂಪಗೊಂಡಿದ್ದ ಈ ಸೀರಿಯಲ್‌ನಲ್ಲಿ ರಾಧಾ ಭಗವತಿ, ಮನೋಜ್ ಕುಮಾರ್, ಕೀರ್ತಿ ಭಾನು, ಅರುಣಾ ಬಾಲರಾಜ್ ಹಾಗೂ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು. ನ್ಯಾಯ ಮತ್ತು ಕುಟುಂಬದ ನಡುವಿನ ರೋಚಕ ಕಥಾಹಂದರ ಹೊಂದಿದ್ದ ಈ ಸೀರಿಯಲ್ ಇದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ.

Shwetha M