RCBಗೆ ಜೇಕಬ್ ಬೆಥೆಲ್ ಬೇಕಾ ಬೇಡ್ವಾ? – ಪ್ಲೇಯಿಂಗ್ 11ನಲ್ಲಿ ಆಡಿಸಲೇಬೇಕಾ?
ಕುಕ್ ಕ್ಯಾತೆಗೆ DK ಡಿಚ್ಚಿ ಹೇಗಿತ್ತು?

RCBಗೆ ಜೇಕಬ್ ಬೆಥೆಲ್ ಬೇಕಾ ಬೇಡ್ವಾ? – ಪ್ಲೇಯಿಂಗ್ 11ನಲ್ಲಿ ಆಡಿಸಲೇಬೇಕಾ?ಕುಕ್ ಕ್ಯಾತೆಗೆ DK ಡಿಚ್ಚಿ ಹೇಗಿತ್ತು?

ಜೇಕಬ್ ಬೆಥೆಲ್. ಇಂಗ್ಲೆಂಡ್ ತಂಡದ ಯಂಗ್ ಟ್ಯಾಲೆಂಟ್. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡ್ರಲ್ಲೂ ಶೈನ್ ಆಗ್ತಿರೋ ಡೈನಾಮೇಟ್. ಇನ್ನು ಐಪಿಎಲ್​ನಲ್ಲಿ ಆರ್​ಸಿಬಿ ಪರ ಅಖಾಡಕ್ಕಿಳಿಯೋ ಪ್ಲೇಯರ್. ಆದ್ರೀಗ ಇದೇ ಜೇಕಬ್ ಬೆಥೆಲ್ ವಿಚಾರದಲ್ಲಿ ಹೊಸ ಚರ್ಚೆ ಶುರುವಾಗಿದೆ. ಐಪಿಎಲ್​ನಲ್ಲಿ ಆಡ್ಬೇಕಾ ಅಥವಾ ರಾಷ್ಟ್ರೀಯ ತಂಡದ ಪರ ಆಡ್ಬೇಕಾ ಅಂತಾ. ಅದೂ ಕೂಡ ಇಬ್ಬರು ಮಾಜಿ ಕ್ರಿಕೆಟಿಗರ ನಡುವೆ. ಸೋ ಇಬ್ಬರ ನಡುವಿನ ಕಾನ್ವರ್ಸೇಷನ್ ಹೊಸ ವಿವಾದಕ್ಕೂ ಮುನ್ನುಡಿ ಬರೆದಿದೆ.

ಇದನ್ನೂ ಓದಿ : ಟೀಂ ಇಂಡಿಯಾಗೆ ಸೂರ್ಯ ವಾಪಸ್ – BCCI ಕೊಟ್ಟಿರೋ ಟಾಸ್ಕ್ ಗೆಲ್ತಾರಾ?

ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಆವೃತ್ತಿಯಲ್ಲೂ ಕಪ್ ಗೆದ್ದು ಹ್ಯಾಟ್ರಿಕ್ ಟ್ರೋಫಿ ಗೆಲುವಿನ ಟಾರ್ಗೆಟ್​ನಲ್ಲಿದೆ. ಟೀಮ್​ನಲ್ಲಿರೋ ಪ್ಲೇಯರ್ಸ್, ಅವ್ರ ಫಾರ್ಮ್, ಪರ್ಫಾಮೆನ್ಸ್ ಎಲ್ಲಾ ನೋಡ್ತಾ ಇದ್ರೆ ಬೆಂಗಳೂರು ತಂಡವೇ ಮೂರನೇ ಬಾರಿಯೂ ಕಪ್ ಗೆಲ್ಲೋ ಫೇವರೆಟ್ ಟೀಂ ಆಗಿ ಕಾಣ್ತಿದೆ. ಆದ್ರೆ ಇದೆಲ್ಲದ್ರ ನಡುವೆ ಬೆಂಚ್ ಕಾಯಿಸೋ ಫಾರಿನ್ ಪ್ಲೇಯರ್ಸ್ ಬಗ್ಗೆ ಬಿಸಿ ಬಿಸಿ ಚರ್ಚೆಯಾಗ್ತಿದೆ. ಪ್ಲೇಯಿಂಗ್ 11ನಲ್ಲಿ ಅವಕಾಶ ಕೊಡಿ ಇಲ್ಲದೇ ಇದ್ರೆ ತವರಿನ ರಾಷ್ಟ್ರಗಳ ಪರ ಆಡೋಕೆ ಕಳ್ಸಿ ಅನ್ನೋ ವಾದ ಶುರುವಾಗಿದೆ.

ಬೆಥೆಲ್ ವಿಚಾರದಲ್ಲಿ ಕುಕ್ & ದಿನೇಶ್ ನಡುವೆ ವಾರ್!

RCB ಸ್ಟಾರ್ ಆಲ್ರೌಂಡರ್ ಆಗಿರುವ ಜೇಕಬ್ ಬೆಥೆಲ್ ವಿಚಾರದಲ್ಲಿ ತಂಡದ ಬ್ಯಾಟಿಂಗ್ ಕೋಚ್ ಹಾಗೇ ಮೆಂಟರ್ ದಿನೇಶ್ ಕಾರ್ತಿಕ್ ಮತ್ತು ಇಂಗ್ಲೆಂಡ್ ಮಾಜಿ ನಾಯಕ ಅಲಸ್ಟೈರ್ ಕುಕ್ ನಡುವೆ ಚರ್ಚೆಯಾಗಿದೆ. ಐಪಿಎಲ್ ಒಪ್ಪಂದ ಹಾಗೂ ರಾಷ್ಟ್ರೀಯ ತಂಡದ ಆದ್ಯತೆ ಕುರಿತು ಮಾತನಾಡಿದ್ದಾರೆ. ಇಬ್ಬರ ನಡುವಿನ ಮಾತುಕತೆ ವೇಳೆ ಐಪಿಎಲ್ ಫ್ರಾಂಚೈಸಿಗೆ ಬದ್ಧತೆ ಮುಖ್ಯವೇ ಅಥವಾ ದೇಶಕ್ಕಾಗಿ ಆಡುವುದೇ ಮೊದಲ ಆದ್ಯತೆ ಎಂಬ ಪ್ರಶ್ನೆ ಮೂಡಿಸಿದೆ. ಆರ್​ಸಿಬಿ ಪರ ಆರಂಭದ ಪಂದ್ಯಗಳಲ್ಲಿ ಫಿಲ್ ಸಾಲ್ಟ್ ಓಪನರ್ ಆಗಿ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಿದ್ರು. ಆಗ ಜೇಕಬ್ ಬೆಥೆಲ್​ಗೆ ಸ್ಲಾಟ್ ಇಲ್ಲದೆ ಬೆಂಚ್ ಕಾಯಿಸ್ತಿದ್ರು. ಈ ವೇಳೆ ಬೆಥೆಲ್​ ಇಂಗ್ಲೆಂಡ್‌ಗೆ ಮರಳಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಬೇಕಿತ್ತು ಎಂದು ಅಲಸ್ಟೈರ್ ಕುಕ್ ಹೇಳಿಕೆ ನೀಡಿದ್ರು. ಅಂದ್ರೆ ಬೆಂಚ್‌ನಲ್ಲಿ ಕೂತು ಟೈಂ ವೇಸ್ಟ್ ಮಾಡೋದ್ಕಿಂತ ರಾಷ್ಟ್ರೀಯ ತಂಡಕ್ಕಾಗಿ ತಯಾರಿ ನಡೆಸುವುದು ಬೆಟರ್ ಅಲ್ವಾ ಅಂತಾ ತಮ್ಮ ಒಪೀನಿಯನ್ ಹೇಳಿದ್ರು. ಆದ್ರೆ ಕುಕ್ ಅವ್ರ ಅಭಿಪ್ರಾಯಕ್ಕೆ ದಿನೇಶ್ ಕಾರ್ತಿಕ್ ಖಾರವಾಗೇ ರಿಯಾಕ್ಟ್ ಮಾಡಿದ್ದಾರೆ.

ಫ್ರಾಂಚೈಸಿ ಜೊತೆ ಒಪ್ಪಂದ ಆದ್ಮೇಲೆ ಅದನ್ನ ಗೌರವಿಸಬೇಕು!

ಕುಕ್ ಅವ್ರ ವಾದದಿಂದ ಸಿಟ್ಟಾಗಿರೋ ದಿನೇಶ್ ಕಾರ್ತಿಕ್ ಸರಿಯಾಗೇ ಟಾಂಟ್ ಕೊಟ್ಟಿದ್ದಾರೆ. ಒಬ್ಬ ಪ್ಲೇಯರ್ ಐಪಿಎಲ್ ಹರಾಜಿಗೆ ತಮ್ಮ ಹೆಸರನ್ನ ರಿಜಿಸ್ಟರ್ ಮಾಡಿಸಿ ಫ್ರಾಂಚೈಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ ಅದಕ್ಕೆ ಗೌರವ ಕೊಡಬೇಕು. ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕೊಡ್ತಿಲ್ಲ ಬೆಂಚ್ ಕಾಯಿಸ್ತಿದ್ದಾರೆ ಅಂತಾ ಮಧ್ಯದಲ್ಲೇ ತಂಡ ಬಿಟ್ಟು ಹೋಗುವುದು ಸರಿಯಲ್ಲ. ಹೀಗಾದರೆ ತಂಡದ ಬ್ಯಾಲೆನ್ಸ್ ಹಾಳಾಗುತ್ತೆ ಅಂತಾ ಸ್ಪಷ್ಟನೆ ನೀಡಿದ್ದಾರೆ.   ಹಾಗೇ ಆಡುವ ಅವಕಾಶ ಸಿಗದಿದ್ದರೆ ಮನೆಗೆ ಹೋಗುತ್ತೇನೆ ಎಂಬ ಮನೋಭಾವವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ನಿರ್ಧಾರವನ್ನು ಹರಾಜಿಗೆ ಮುಂಚೆಯೇ ತೆಗೆದುಕೊಳ್ಳಬೇಕು ಎಂದಿದ್ದಾರೆ. ಇನ್ನು ಡಿಕೆ ಖಡಕ್ ಮಾತಿಗೆ  ಆರ್‌ಸಿಬಿ ನಿರ್ದೇಶಕ ಮೊ ಬೊಬಾಟ್ ಕೂಡ ಸಾಥ್ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಹಾಗೂ ಇತರ ಅನುಭವಿ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಬೆಥೆಲ್​ರಂಥ ಯುವ ಆಟಗಾರರ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆಡಿದ್ರೆ ಮಾತ್ರವೇ ಕಲಿಯೋದಲ್ಲ. ತಂಡದ ಜೊತೆಗೆ ಟ್ರಾವೆಲ್ ಮಾಡೋದು, ಪ್ಲ್ಯಾನ್ ಗಳಲ್ಲಿ ಭಾಗಿಯಾಗೋದು, ಡ್ರೆಸ್ಸಿಂಗ್ ರೂಮ್​ನಲ್ಲೂ ಕಲಿಯೋದು ಸಾಕಷ್ಟಿರುತ್ತೆ ಎಂದಿದ್ದಾರೆ. ಆದ್ರೆ ಡಿಕೆ ಮತ್ತು ಮೊಬಾಟ್ ವಾದಗಳನ್ನ ಒಪ್ಪದ ಕುಕ್ ಅಲ್ಲಿಯೂ ಮತ್ತೆ ಕ್ಯಾತೆ ತೆಗೆದಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ನನಗೆ ಯಾವಾಗಲೂ ಫಸ್ಟ್ ಪ್ರಿಯಾರಿಟಿ. ಫ್ರಾಂಚೈಸಿ ಕ್ರಿಕೆಟ್‌ಗಿಂತ ರಾಷ್ಟ್ರೀಯ ತಂಡದ ಯಶಸ್ಸೇ ಮು ಎಂದಿದ್ದಾರೆ. ಒಂದು ವರ್ಷ ಬೆಂಚ್‌ನಲ್ಲಿ ಕುಳಿತುಕೊಳ್ಳುವುದಕ್ಕಿಂತ ಟೆಸ್ಟ್ ಕ್ರಿಕೆಟ್‌ನಲ್ಲಿ ನಿರಂತರವಾಗಿ ಆಡಿದರೆ ಬೆಥೆಲ್‌ಗೆ ಹೆಚ್ಚು ಅನುಭವ ಸಿಗುತ್ತಿತ್ತು ಎಂದಿದ್ದಾರೆ. ಸೋ ಇಲ್ಲಿ ಕುಕ್ ಮತ್ತು ಡಿಕೆ ನಡುವಿನ ಕಾನ್ವರ್ಸೇಷನ್ ಬಳಿಕ ದೊಡ್ಡ ಪ್ರಶ್ನೆ ಹುಟ್ಕೊಂಡಿದೆ. ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಬದ್ಧರಾಗಬೇಕೇ? ಅಥವಾ ರಾಷ್ಟ್ರೀಯ ತಂಡದ ಅವಕಾಶಕ್ಕೆ ಆದ್ಯತೆ ನೀಡಬೇಕೇ? ಬೆಥೆಲ್ ವಿಚಾರದಲ್ಲಿ ಆರಂಭವಾದ ಈ ಚರ್ಚೆ ಹಲವು ಆಟಗಾರರ ನಿರ್ಧಾರಗಳ ಮೇಲೂ ಪರಿಣಾಮ ಬೀರಬಹುದು. ಹಾಗಂತ ಚಾನ್ಸ್ ಸಿಕ್ಕಮೇಲೆ ಆರ್​ಸಿಬಿ ಪರ ಬೆಥೆಲ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಅಂತಾ ಏನೂ ಬಂದಿರಲಿಲ್ಲ. 7 ಇನ್ನಿಂಗ್ಸ್​ಗಳಲ್ಲಿ ಓಪನರ್ ಆಗಿ ಅವಕಾಶ ಕೊಟ್ರೂ 108 ರನ್​ಗಳನ್ನ ಮಾತ್ರ ಕಲೆ ಹಾಕಿದ್ರು. ಆ ನಂತ್ರದಲ್ಲಿ ಬೆಥೆಲ್ ಕೈಬಿಟ್ಟು ವೆಂಕಟೇಶ್ ಅಯ್ಯರ್ ಗೆ ಓಪನರ್ ಆಗಿ ಫ್ರಾಂಚೈಸಿ ಚಾನ್ಸ್ ನೀಡಿತ್ತು. ಒಟ್ನಲ್ಲಿ ವಿದೇಶಿ ಆಟಗಾರರು ಐಪಿಎಲ್​ನಲ್ಲಿ ಕೋಟಿಗಟ್ಟಲೆ ಹಣ ಪಡೆದು ಒಪ್ಪಂದ ಮಾಡಿಕೊಂಡು ಭಾರತಕ್ಕೆ ಬರ್ತಾರೆ. ಬಟ್ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಕ್ಕಿಲ್ಲ ಅಂದಾಗ ಅಲ್ಲಿನ ಮಾಜಿ ಕ್ರಿಕೆಟರ್ಸ್ ಹತ್ತಾರು ಪ್ರಶ್ನೆಗಳನ್ನ ಮಾಡ್ತಾರೆ. ಈಗ ಬೆಥೆಲ್ ವಿಚಾರದಲ್ಲಿ ಆಗಿದ್ದೂ ಅದೇ.

Shantha Kumari

Leave a Reply

Your email address will not be published. Required fields are marked *