RO-KOಗೆ ಸಿಗುತ್ತಾ ವಿಶ್ವಕಪ್? – ಟ್ರೋಫಿ ಜೊತೆಯಲ್ಲಿ ಸೆಂಡ್ ಆಫ್ ಸಾಧ್ಯನಾ?
ಲೆಜೆಂಡರ್ಸ್ ಇದ್ರಷ್ಟೇ ಗೆಲ್ತಾರಾ ಗಿಲ್

RO-KOಗೆ ಸಿಗುತ್ತಾ ವಿಶ್ವಕಪ್? – ಟ್ರೋಫಿ ಜೊತೆಯಲ್ಲಿ ಸೆಂಡ್ ಆಫ್ ಸಾಧ್ಯನಾ?ಲೆಜೆಂಡರ್ಸ್ ಇದ್ರಷ್ಟೇ ಗೆಲ್ತಾರಾ ಗಿಲ್

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ಸ್.. ಕ್ಯಾಪ್ಟನ್ ಗಳಾಗಿ, ಬ್ಯಾಟರ್ ಗಳಾಗಿ ತಮ್ಮದೇ ಹೆಜ್ಜೆಗುರುತು ಮೂಡಿಸಿದ್ದವ್ರು. ಆದ್ರೆ ಈಗ 2027ರ ಏಕದಿನ ವಿಶ್ವಕಪ್​ನಲ್ಲಿ ಅವ್ರನ್ನ ಆಡಿಸ್ಬೇಕಾ ಬೇಡ್ವಾ ಅನ್ನೋದ್ರ ಬಗ್ಗೆ ಪರವಿರೋಧ ಇದ್ದೇ ಇದೆ. ರಿಯಾಲಿಟಿ ಏನಂದ್ರೆ ಇವ್ರಿಬ್ರು ತಂಡದಲ್ಲಿ ಇರೋದು ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

ಇದನ್ನೂ ಓದಿ : ಟೀಂ ಇಂಡಿಯಾಗೆ ಸೂರ್ಯ ವಾಪಸ್ – BCCI ಕೊಟ್ಟಿರೋ ಟಾಸ್ಕ್ ಗೆಲ್ತಾರಾ?

ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಇರೋ ಅನುಭವ, ಫಿಟ್​ನೆಸ್ ಲೆಕ್ಕ ಹಾಕಿದ್ರೆ ಇವ್ರಿಬ್ರೂ ಕೂಡ ಭಾರತದ ಪರ ಆಡಲೇಬೇಕು. ಬಟ್ ಇನ್ನೊಂದಷ್ಟು ಜನ ಭವಿಷ್ಯದ ದೃಷ್ಟಿಯಿಂದ ಯಂಗ್ ಟೀಂ ಕಟ್ಟೋಕೆ ಅವಕಾಶ ಕೊಡ್ಬೇಕು, ಇವ್ರಿಬ್ರು ಆಡೋದು ಬೇಡ ಅಂತಿದ್ದಾರೆ. ಪ್ಲಸ್ ಮೈನಸ್ ಅಂತಾ ಎಲ್ಲಾ ಅನಾಲಿಸಿಸ್ ಮಾಡಿದ್ರೆ ಇವ್ರಿಬ್ರೇ ಭಾರತದ ಕಪ್ ಗೆಲುವಿನ ಅತಿದೊಡ್ಡ ಭರವಸೆಯಾಗ್ತಾರೆ.

ಕಠಿಣ ಪಿಚ್ ಗಳಲ್ಲಿ ವಿಶ್ವಕಪ್ ಆಡಲು ರೋ-ಕೊ ಬೇಕೇಬೇಕು!

ನಿಮ್ಗೆಲ್ಲಾ ಗೊತ್ತಿರೋ ಹಾಗೇ 2027ರ ಏಕದಿನ ವಿಶ್ವಕಪ್ ಮೂರು ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಜಿಂಬಾಬ್ವೆ ಆತಿಥ್ಯ ವಹಿಸಿವೆ. 24 ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಿರುವ ಆಫ್ರಿಕಾ ಖಂಡದ ಮೂರು ದೇಶಗಳ 12 ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ. ಮುಂದಿನ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ನಡೆಯಲಿರೋ ಹೈವೋಲ್ಟೇಜ್ ಟೂರ್ನಿಯಲ್ಲಿ ಒಟ್ಟು 14 ದೇಶಗಳು ಕಾಂಪಿಟ್ ಮಾಡಲಿವೆ.  ಇಂಥಾ ಬಿಗ್ ಟೂರ್ನಮೆಂಟ್​ನಲ್ಲಿ ರೋಕೋ ಆಡೋದೇ ಬೆಟರ್.

ರೋ-ಕೊ ಆಡಿದ್ರಷ್ಟೇ ಕಪ್!

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದ ಪಿಚ್ ಗಳಲ್ಲಿ ವಿಶ್ವಕಪ್

ಹಿರಿಯ ಆಟಗಾರರ ಮಾರ್ಗದರ್ಶನ ಭಾರತ ತಂಡಕ್ಕೆ ಅತೀ ಮುಖ್ಯ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಫಿಟ್ ನೆಸ್ ಪಾಸ್

ಐಸಿಸಿ ಟೂರ್ನಮೆಂಟ್ ಗಳಲ್ಲಿ ಪ್ರೆಶರ್ ನಿಭಾಯಿಸುವುದಲ್ಲಿ ನಿಸ್ಸೀಮರು

ಏಕದಿನ ಮಾದರಿಯಲ್ಲಿ ಇಂದಿಗೂ ಭಾರತದ ಅತ್ಯಂತ ನಂಬಿಕಸ್ಥ ಬ್ಯಾಟರ್ಸ್

ಶುಭ್ ಮನ್ ಗಿಲ್ ಕ್ಯಾಪ್ಟನ್ ಆಗಿ ಮೊದಲ ಬಾರಿಗೆ ಐಸಿಸಿ ಟೂರ್ನಮೆಂಟ್

ಒಟ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ ಗಳು. ಏಕದಿನ ವಿಶ್ವಕಪ್ ಗೆಲ್ಲಲೇಬೇಕೆಂಬ ಹಠತೊಟ್ಟು ಏಕದಿನ ಮಾದರಿಯಲ್ಲಿ ಮಾತ್ರ ಆಡ್ತಿದ್ದಾರೆ. ಸೋ ಅವ್ರ ಕನಸು ನನಸಾಗಬೇಕು. ಭಾರತ ವಿಶ್ವಕಪ್ ಗೆದ್ದು ದಿಗ್ಗಜರಿಗೆ ಗಿಫ್ಟ್ ಕೊಡ್ಬೇಕು.

Shantha Kumari

Leave a Reply

Your email address will not be published. Required fields are marked *