ಮನೆಯಲ್ಲಿ ಮಾಡಿ ರುಚಿ ರುಚಿ ಗೋಧಿ ಪಾಯಸ – ಮಾಡುವುದು ಹೇಗೆ ಗೊತ್ತಾ?

ಮನೆಯಲ್ಲಿ ಮಾಡಿ ರುಚಿ ರುಚಿ  ಗೋಧಿ ಪಾಯಸ – ಮಾಡುವುದು ಹೇಗೆ ಗೊತ್ತಾ?

ದೇವಾಲಯಗಳಲ್ಲಿ ನೀಡುವಂತಹ ಬಾಯಲ್ಲಿ ನೀರು ತರಿಸುವ ಗೋಧಿ ಪಾಯಸ ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಈ ಪಾಯಿಸವನ್ನ ನೀವು ಈಸಿಯಾಗಿ ಮಾಡಬಹುದು. ಈ ಹಬ್ಬದ ರಂಗು ಮತ್ತಷ್ಟು ಹೆಚ್ಚಿಸಬೇಕಾದರೆ  ನೀವು ಕೂಡ ಮಾಡಿ ಗೋಧಿ ಪಾಯಸ.

ಗೋಧಿ ಪಾಸಯ ಎಲ್ಲರಿಗೂ ಇಷ್ಟವಾಗುವ ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಸಹ ಇದು ಬಹಳ ಉತ್ತಮವಾಗಿರಲಿದೆ. ನೀವು ಸಹ ಮನೆಯಲ್ಲಿ ಇದನ್ನು ಸುಲಭವಾಗಿ ಮಾಡಿ ಸವಿಯಬಹುದು. ಹೀಗಾಗಿ ಈ ಹಬ್ಬದ ಸಮಯದಲ್ಲಿ ಈ ಗೋಧಿ ಪಾಯಸ ಮಾಡುವುದು ಬಾಯಲ್ಲಿ ನೀರು ತರಿಸುತ್ತೆ. ಹಾಗೆ ಚೂರು ಉಳಿಯದಂತೆ ಖಾಳಿಯಾಗುತ್ತೆ. ಈ ಗೋಧಿ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ.

ಗೋಧಿ ಪಾಯಸ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?

ಗೋಧಿ ಕಡಿ

ತೆಂಗಿನಕಾಯಿ ತುರಿ

ಬೆಲ್ಲದ ಪುಡಿ

ಉಪ್ಪು

ಏಲಕ್ಕಿ ಪುಡಿ

ತುಪ್ಪ

ಗೋಡಂಬಿ

ಗೋಧಿ ಪಾಯಸ ಮಾಡುವ ಸುಲಭದ ವಿಧಾನವೇನು?

ಮೊದಲು ಒಂದು ಬೌಲ್‌ಗೆ 2 ಕಪ್ ಗೋಧಿ ಕಡಿ ಹಾಕಿಕೊಂಡು 2ರಿಂದ 3 ಬಾರಿ ತೊಳೆದು ಅನಂತರ ಕುಕ್ಕರ್‌ಗೆ ಹಾಕಿ ಅಳತೆಯಲ್ಲಿ ನೀರು ಹಾಕಿಕೊಂಡು ಮುಚ್ಚಳ ಮುಚ್ಚಿ 4 ಸೀಟಿ ಹೊಡೆಯಲು ಬಿಟ್ಟು ಒಲೆ ಆಫ್ ಮಾಡಿ ಕುಕ್ಕರ್ ತಣ್ಣಗಾಗಲು ಬಿಡಿ. ಅನಂತರ ಗೋಧಿ ಕಡಿಯನ್ನು ಒಮ್ಮೆ ಮಿಕ್ಸ್ ಮಾಡಿ ಇಟ್ಟುಕೊಳ್ಳಿ. ಇದು ಬೇಳೆಯಂತೆ ಆಗಿರಬೇಕು.

ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ತುರಿದುಕೊಂಡ ತೆಂಗಿನಕಾಯಿ ತುರಿ ಹಾಕಿಕೊಂಡು ಅದಕ್ಕೆ ನೀರು ಹಾಕಿ ನುಣ್ಣಗೆ ರುಬ್ಬಿಕೊಂಡು ಜರಡಿ ಹಿಡಿದು ಹಾಲನ್ನು ತೆಗೆದುಕೊಳ್ಳಿ. 2 ಕಪ್ ಹಾಲು ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಕಪ್ ತುರಿದ ಬೆಲ್ಲ ಹಾಕಿ ನೀರು ಹಾಕಿ ಕರಗಲು ಬಿಡಿ. ಬೆಲ್ಲ ಕರಗಿದ ಬಳಿಕ ಜರಡಿ ಹಿಡಿದು ಬೆಲ್ಲದ ನೀರು ತೆಗೆದುಕೊಳ್ಳಿ.

ಈಗ ಒಲೆ ಮೇಲೆ ಪಾಯಸ ಮಾಡಲು ಒಂದು ಪಾತ್ರೆ ಇಟ್ಟು ಅದಕ್ಕೆ ಬೆಲ್ಲದ ನೀಡು ಹಾಕಿಕೊಂಡು ಬಳಿಕ ಬೇಯಿಸಿಕೊಂಡಿದ್ದ ಗೋಧಿ ಕಡಿ ಹಾಕಿ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಬೆಲ್ಲದ ನೀರಿನೊಂದಿಗೆ ಬೆರೆಯಬೇಕು. ಈಗ ಕಾಯಿ ಹಾಲನ್ನು ಇದಕ್ಕೆ ಹಾಕಿ ಸಣ್ಣಗೆ ಕುದಿಬರಲು ಬಿಡಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಹಾಕಿ ಫ್ರೈ ಮಾಡಿ ಇದಕ್ಕೆ ಹಾಕಿದರೆ ನಿಮ್ಮ ಮುಂದೆ ರುಚಿ ರುಚಿಯ ಗೋಧಿ ಕಡಿ ಪಾಯಸ ಸಿದ್ದವಾಗುತ್ತೆ. ನೀವು ಕೂಡ ಈ ಯುಗಾದಿಯಲ್ಲಿ ಈ ಗೋಧಿ ಕಡಿ ಪಾಯಸ ಮಾಡಿ ನೋಡಿ. ಚೂರು ಉಳಿಯದಂತೆ ಖಾಲಿ ಮಾಡೋದು ಖಚಿತ.

Kishor KV

Leave a Reply

Your email address will not be published. Required fields are marked *